ಎಲ್ಐಸಿ ಭಾರತದ ನಂಬರ್ ಒನ್ ವಿಮಾ ಸಂಸ್ಥೆ. ಹಲವು ವೈವಿಧ್ಯಮಯ ಪಾಲಿಸಿ ಪ್ಲಾನ್ಗಳನ್ನು ಹೊಂದಿರುವ ಎಲ್ಐಸಿಯಲ್ಲಿ (LIC) ಎಲ್ಲರ ಅಗತ್ಯಗಳಿಗೆ ತಕ್ಕಂತಹ ಸ್ಕೀಮ್ಗಳಿವೆ. ನಿಶ್ಚಿತ ರಿಟರ್ನ್ ಕೊಡುವ ಪ್ಲಾನ್ಗಳಿಂದ ಹಿಡಿದು ಷೇರುಜೋಡಿತ ಪ್ಲಾನ್ಗಳವರೆಗೆ ನೀವು ಎಲ್ಐಸಿ ಪಾಲಿಸಿಯ ಆಯ್ಕೆ ಪಡೆಯಬಹುದು. ಎಲ್ಐಸಿಯ ನ್ಯೂ ಜೀವನ್ ಆನಂದ್ ಇತ್ಯಾದಿ ಕೆಲ ಜನಪ್ರಿಯ ಪಾಲಿಸಿಗಳಿಗೆ ಹೊರತಾಗಿಯೂ ಬೇರೆ ಪ್ರಮುಖ ಸ್ಕೀಮ್ಗಳು ಎಲ್ಐಸಿಯಲ್ಲಿ ಇವೆ. ಅದರಲ್ಲಿ ಎಲ್ಐಸಿ ಆಧಾರ್ ಶಿಲಾ ಯೋಜನೆಯೂ (LIC Aadhaar Shila Plan) ಒಂದು. ಇದು ಮಹಿಳೆಯರಿಗೆಂದೇ ರೂಪಿಸಲಾದ ಸ್ಕೀಮ್ ಎಂಬುದು ವಿಶೇಷ. 8ರಿಂದ 55 ವರ್ಷದೊಳಗಿನ ಮಹಿಳೆಯರು ಈ ಸ್ಕೀಮ್ ಪಡೆಯಬಹುದಾಗಿದ್ದು 75,000 ರೂನಿಂದ 3,00,000 ರೂವರೆಗೂ ಹೂಡಿಕೆ ಮಾಡಬಹುದು. ಇದರಲ್ಲಿ 8 ಲಕ್ಷ ರೂವರೆಗೂ ರಿಟರ್ನ್ ಪಡೆಯುವ ಅವಕಾಶ ಇದೆ.
ಈ ಪಾಲಿಸಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ. ನೀವು ಈ ಪಾಲಿಸಿ ಮಾಡಿಸಬೇಕೆಂದರೆ ಆಧಾರ್ ದಾಖಲೆ ಕಡ್ಡಾಯ.
ಇದನ್ನೂ ಓದಿ: Aadhaar: ಆಧಾರ್ ಅಪ್ಡೇಶನ್; ಡೆಡ್ಲೈನ್ಗೆ ಕೆಲವೇ ದಿನ; ಜೂನ್ 14ರೊಳಗೆ ಹೇಗೆ ಮಾಡುವುದು? ಅಪ್ಡೇಟ್ ಮಾಡದಿದ್ದರೆ ಮುಂದೇನು?
ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರಳ ವಯಸ್ಸು 70 ವರ್ಷ ಮೀರಿರಬಾರದು. ಅಂದರೆ ನೀವು 55 ರ ವಯಸ್ಸಿನಲ್ಲಿ ಈ ಪಾಲಿಸಿಯನ್ನು ಖರೀದಿಸಿದಲ್ಲಿ 20 ವರ್ಷದ ಪ್ಲಾನ್ ಅನ್ನು ಪಡೆಯಲು ಆಗುವುದಿಲ್ಲ. ಗರಿಷ್ಠ ಎಂದರೆ 15 ವರ್ಷದ ಪಾಲಿಸಿ ಪಡೆಯಬಹುದು.
ಪಾಲಿಸಿ ಕಂತುಗಳನ್ನು ತಿಂಗಳಿಗಾದರೂ ಕಟ್ಟಬಹುದು, ಮೂರು ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮೆಯೂ ಕಟ್ಟಡಬಹುದು.
ನೀವು 20 ವರ್ಷ ಪಾಲಿಸಿ ಆಯ್ದುಕೊಂಡರೆ 8 ಲಕ್ಷ ರೂ ಪಡೆಯಲು ಹೇಗೆ ಸಾಧ್ಯವಾಗುತ್ತದೆ? ನೀವು ವರ್ಷಕ್ಕೆ 22,000 ರೂನಷ್ಟು ಪ್ರೀಮಿಯಮ್ ಅನ್ನು 20 ವರ್ಷ ಕಾಲ ಕಟ್ಟಿದರೆ, 4.30 ಲಕ್ಷ ರೂ ಕಟ್ಟಿದಂತಾಗುತ್ತದೆ. ನಿಮಗೆ ಬರುವ ರಿಟರ್ನ್ಸ್ 8 ಲಕ್ಷ ರೂ ಆಸುಪಾಸು ಇರುತ್ತದೆ. ಇಲ್ಲಿ ನೀವು ವರ್ಷಕ್ಕೆ 22,000 ರೂ ಸೇರಿಸಲು ದಿನಕ್ಕೆ ಸುಮಾರು 58 ರೂ ಸೇರಿಸುತ್ತಾ ಹೋಗಬೇಕಾಗುತ್ತದೆ. ತಿಂಗಳಿಗೆ 1,833 ರೂ ಕಟ್ಟಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ