ಮ್ಯುಚುವಲ್ ಫಂಡ್ ಜನಪ್ರಿಯವಾಗುತ್ತಿರುವ ಹೂಡಿಕೆ ಮಾರ್ಗ. ಮ್ಯೂಚುವಲ್ ಫಂಡ್ಗಳು ಹಣಕಾಸು ಮಾರುಕಟ್ಟೆಗಳಲ್ಲಿ ನಿಮ್ಮ ಪರವಾಗಿ ಹಣ ಹೂಡಿಕೆ ಮಾಡುತ್ತವೆ. ಅದರಲ್ಲಿ ಬಂದ ಲಾಭ ಅಥವಾ ನಷ್ಟದಲ್ಲಿ ನಿಮಗೂ ಪಾಲು ಸಿಗುತ್ತದೆ. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು ರಿಸ್ಕ್ ಎನಿಸುವವರಿಗೆ ಮ್ಯುಚುವಲ್ ಫಂಡ್, ಇಟಿಎಫ್ ಉತ್ತಮ ದಾರಿಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ನೂರಾರು ಮ್ಯೂಚುವಲ್ ಫಂಡ್ಗಳಿವೆ. ಇದರಲ್ಲೂ ನಾನಾ ವಿಧಗಳಿವೆ. ಈಕ್ವಿಟಿ ಮ್ಯೂಚುವಲ್ ಫಂಡ್, ಡೆಟ್ ಮ್ಯುಚುವಲ್ ಫಂಡ್, ಹೈಬ್ರಿಡ್ ಫಂಡ್, ಇಂಡೆಕ್ಸ್ ಫಂಡ್, ಸೆಕ್ಟೋರಲ್ ಫಂಡ್, ಥಿಮ್ಯಾಟಿಕ್ ಫಂಡ್ಗಳಿರುತ್ತವೆ.
ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಹೆಚ್ಚಿನ ಹೂಡಿಕೆಯನ್ನು ಷೇರುಗಳಿಗೆ ಹಾಕುತ್ತವೆ. ಡೆಟ್ ಫಂಡ್ಗಳು ಬಾಂಡ್ ಇತ್ಯಾದಿ ನಿಶ್ಚಿತ ಆದಾಯದ ಸಾಧನಗಳಿಲ್ಲಿ ಹೂಡಿಕೆ ಮಾಡುತ್ತವೆ. ಹೈಬ್ರಿಡ್ ಫಂಡ್ಗಳು ಈಕ್ವಿಟಿ ಮತ್ತು ಡೆಟ್ ಎರಡರಲ್ಲೂ ಹೂಡಿಕೆ ಮಾಡಿ ಸಮತೋಲನ ತರಲು ಯತ್ನಿಸುತ್ತವೆ.
ಇದನ್ನೂ ಓದಿ: ಬ್ಯಾಂಕ್ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…
ಇನ್ನೊಂದೆಡೆ ಇಂಡೆಕ್ಸ್ ಫಂಡ್ಗಳು ನಿರ್ದಿಷ್ಟ ಷೇರು ಸೂಚ್ಯಂಕಗಳನ್ನು ಅನುಸರಿಸುತ್ತವೆ. ಉದಾಹರಣೆಗೆ, ನಿಫ್ಟಿ 50, ಸೆನ್ಸೆಕ್ಸ್ 30, ನಿಫ್ಟಿ 100 ಇತ್ಯಾದಿ ಇಂಡೆಕ್ಸ್ಗಳಲ್ಲಿನ ಷೇರುಗಳಲ್ಲಿ ಇವು ಹೂಡಿಕೆ ಮಾಡುತ್ತವೆ. ಇನ್ನು ಥೀಮ್ಯಾಟಿಕ್ ಫಂಡ್ಗಳು ನಿರ್ದಿಷ್ಟ ಸೆಕ್ಟರ್ನ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ, ಟೆಕ್ನಾಲಜಿ, ಬ್ಯಾಂಕ್, ಹೆಲ್ತ್ಕೇರ್ ಇತ್ಯಾದಿ. ಹಾಗೆಯೇ, ಚಿನ್ನ, ಬೆಳ್ಳಿ ಇತ್ಯಾದಿ ಸರಕುಗಳ ಮೇಲೂ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ಗಳಿವೆ.
ಮ್ಯುಚುವಲ್ ಫಂಡ್ಗಳನ್ನು ನಿರ್ವಹಿಸಲು ಮ್ಯಾನೇಜರುಗಳಿರುತ್ತಾರೆ. ಅವರ ಜೊತೆ ಒಂದು ರೀಸರ್ಚ್ ತಂಡವೇ ಇರುತ್ತದೆ. ಯಾವ ಷೇರುಗಳಿಗೆ ಯಾವಾಗ ಹೂಡಿಕೆ ಮಾಡಬೇಕು, ಯಾವಾಗ ಹಿಂಪಡೆಯಬೇಕು ಎಂಬುದನ್ನು ಈ ತಂಡ ನಿರ್ಧರಿಸುತ್ತದೆ. ಈ ನಿರ್ವಹಣಾ ವೆಚ್ಚವನ್ನು ಗ್ರಾಹಕರು ಭರಿಸಬೇಕು. ಅದುವೇ ಮ್ಯುಚುವಲ್ ಫಂಡ್ನ ಎಕ್ಸ್ಪೆನ್ಸ್ ರೇಶಿಯೋ. ಒಂದೊಂದು ಫಂಡ್ಗಳ ಎಕ್ಸ್ಪೆನ್ಸ್ ರೇಶಿಯೋ ವ್ಯತ್ಯಾಸವಿರಬಹುದು. ಇಂಡೆಕ್ಸ್ ಫಂಡ್ಗಳ ನಿರ್ವಹಣೆಗೆ ಮ್ಯಾನೇಜರ್ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಅವುಗಳ ಎಕ್ಸ್ಪೆನ್ಸ್ ರೇಶಿಯೋ ಬಹಳ ಕಡಿಮೆ ಇರುತ್ತದೆ.
ಇದನ್ನೂ ಓದಿ: ಬ್ಯಾಂಕ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ನಾಮಿನಿ ನಿಯಮದಲ್ಲಿ ಬದಲಾವಣೆ; ಮಸೂದೆ ಮಂಡನೆಗೆ ಕೇಂದ್ರ ಸಜ್ಜು
ಝಿರೋಧಾ, ಗ್ರೋ, ಪೇಟಿಎಂ, ಏಂಜೆಲ್ ಒನ್ ಇತ್ಯಾದಿ ಬ್ರೋಕರ್ ಸಂಸ್ಥೆಗಳ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ನೀವು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಅಥವಾ ನೇರವಾಗಿ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್ಸೈಟ್ ಅಥವಾ ಆ್ಯಪ್ಗೆ ಹೋಗಿ ಅಲ್ಲಿಯೇ ನೇರವಾಗಿ ಹೂಡಿಕೆ ಮಾಡಬಹುದು. ಫಂಡ್ನಲ್ಲಿ ಹೂಡಿಕೆ ಮಾಡಲು ನೀವು ಕೆವೈಸಿ ಪೂರ್ಣಗೊಳಿಸಬೇಕು. ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಒದಗಿಸಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ