ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

Post Office provides better alternatives to Bank deposit plans: ಅಂಚೆ ಕಚೇರಿಯಲ್ಲಿರುವ ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಟೈಮ್ ಡೆಪಾಸಿಟ್ ಪ್ಲಾನ್​ಗಳೂ ಇವೆ. 1, 2, 3 ಮತ್ತು 5 ವರ್ಷದ ಡೆಪಾಸಿಟ್ ಪ್ಲಾನ್​ಗಳಿವೆ. ಕಮರ್ಷಿಯಲ್ ಬ್ಯಾಂಕುಗಳಿಗೆ ಹೋಲಿಸಿದರೆ ಈ ಪೋಸ್ಟ್ ಆಫೀಸ್ ಡೆಪಾಸಿಟ್ ಪ್ಲಾನ್​ಗಳು ಹೆಚ್ಚು ರಿಟರ್ಸ್ ಕೊಡುತ್ತವೆ. ಐದು ವರ್ಷದ ಟಿಡಿಯಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದರೆ ನಾಲ್ಕೂವರೆ ಲಕ್ಷ ರೂ ಬಡ್ಡಿಯೇ ಸಿಗುತ್ತದೆ.

ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್
ಹಣ
Image Credit source: Shutterstock

Updated on: Apr 02, 2026 | 4:40 PM

ಇವತ್ತಿನ ಷೇರು ಮಾರುಕಟ್ಟೆ ಅಲುಗಾಟದಲ್ಲಿ ನಿಶ್ಚಿತ ಠೇವಣಿಗಳು ಹೆಚ್ಚು ಸುರಕ್ಷಿತ, ಹೆಚ್ಚು ಉಪಯುಕ್ತ ಎನಿಸಿವೆ. ಎಫ್​ಡಿಗಳನ್ನು ಇಡಲು ಬ್ಯಾಂಕ್​ಗಳಲ್ಲಿ ವಿವಿಧ ಪ್ಲಾನ್​ಗಳಿವೆ. ಸಹಕಾರಿ ಬ್ಯಾಂಕುಗಳು, ಎನ್​ಬಿಎಫ್​ಸಿಗಳು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ಕೀಮ್ಸ್ ಹೊಂದಿವೆ. ಪೋಸ್ಟ್ ಆಫೀಸ್​ಗಳಲ್ಲೂ (Post Office) ಫಿಕ್ಸೆಡ್ ಡೆಪಾಸಿಟ್ ರೀತಿಯ ಟೈಮ್ ಡೆಪಾಸಿಟ್ ಪ್ಲಾನ್​ಗಳಿವೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುವ ಮಂದಿಗೆ ಈ ನಾನಾ ಆಯ್ಕೆಗಳಿವೆ. ಆದರೆ, ಯಾವುದು ಉತ್ತಮ?

ಬ್ಯಾಂಕ್ ಎಫ್​ಡಿಗಿಂತ ಪೋಸ್ಟ್ ಆಫೀಸ್​ನಲ್ಲಿ ಹೆಚ್ಚು ಬಡ್ಡಿ

ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಾದ ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಇತ್ಯಾದಿ ಕಡೆ 7 ದಿನದಿಂದ ಹಿಡಿದು 10 ವರ್ಷದವರೆಗೆ ವಿವಿಧ ಅವಧಿಗೆ ಫಿಕ್ಸೆಡ್ ಡೆಪಾಸಿಟ್​ಗಳನ್ನು ಆಫರ್ ಮಾಡಲಾಗುತ್ತದೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಪೋಸ್ಟ್ ಆಫೀಸ್​ನಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ 4 ಆಯ್ಕೆಗಳಿವೆ. 1 ವರ್ಷ, 2, 3 ಮತ್ತು 5 ವರ್ಷದ ಟೈಮ್ ಡೆಪಾಸಿಟ್ ಪ್ಲಾನ್​ಗಳಿವೆ. 1 ವರ್ಷದ ಟಿಡಿಗೆ ಶೇ. 6.9 ಬಡ್ಡಿ ಇದೆ. 2 ವರ್ಷ, 3 ವರ್ಷ ಮತ್ತು 5 ವರ್ಷದ ಟೈಮ್ ಡೆಪಾಸಿಟ್​ಗಳಿಗೆ ಕ್ರಮವಾಗಿ ಶೇ. 7, ಶೇ. 7.1 ಮತ್ತು ಶೇ. 7.5 ಬಡ್ಡಿ ಸಿಗುತ್ತದೆ.

ಬ್ಯಾಂಕ್ ಎಫ್​ಡಿ ದರಗಳನ್ನು ಹೋಲಿಕೆ ಮಾಡಲು 1 ವರ್ಷದ ಮತ್ತು 5 ವರ್ಷದ ಪ್ಲಾನ್​ಗಳನ್ನು ಪರಿಗಣಿಸಬಹುದು. ಪೋಸ್ಟ್ ಆಫೀಸ್​ನಲ್ಲಿ 1 ವರ್ಷದ ಟೈಮ್ ಡೆಪಾಸಿಟ್​ಗೆ ಶೇ. 6.9 ಬಡ್ಡಿ ಸಿಗುತ್ತದೆ. ಉಳಿದ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಶೇ. 6.25 ಬಡ್ಡಿ ಇದೆ. 5 ವರ್ಷದ ಎಫ್​ಡಿಗೆ ಶೇ. 6.05ರಿಂದ ಶೇ. 6.50ರವರೆಗೆ ಬಡ್ಡಿ ಆಫರ್ ಮಾಡಲಾಗುತ್ತಿದೆ. ಆದರೆ, ಪೋಸ್ಟ್ ಆಫೀಸ್​ನಲ್ಲಿ 5 ವರ್ಷದ ಟಿಡಿಗೆ ಶೇ. 7.5 ಬಡ್ಡಿ ಕೊಡಲಾಗುತ್ತದೆ.

ಸಹಕಾರಿ ಬ್ಯಾಂಕು ಮತ್ತು ಎನ್​ಬಿಎಫ್​ಸಿಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತದೆಯಾದರೂ ರಿಸ್ಕ್ ಹೆಚ್ಚು. ಒಟ್ಟಾರೆ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತಕ್ಕೆ (5 ಲಕ್ಷ ರೂ ಮೇಲ್ಪಟ್ಟ) ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಪೋಸ್ಟ್ ಆಫೀಸ್​ನಲ್ಲಿ ಸಂಪೂರ್ಣ ಮೊತ್ತಕ್ಕೆ ಸರ್ಕಾರದ ಖಾತ್ರಿ ಇರುತ್ತದೆ. ಹೀಗಾಗಿ, ಇಲ್ಲಿಯ ಯಾವುದೇ ಹೂಡಿಕೆ ಪೂರ್ಣ ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕ. ನೀವು 5 ವರ್ಷದ ಟೈಮ್ ಡೆಪಾಸಿಟ್​ನಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದರೆ, ನಾಲ್ಕೂವರೆ ಲಕ್ಷ ರೂನಷ್ಟು ಬಡ್ಡಿಯೇ ಪ್ರಾಪ್ತವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us