ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ
Government announces interest rates for small savings schemes for 2026 April-June quarter: 2026ರ ಏಪ್ರಿಲ್, ಮೇ, ಜೂನ್ ತ್ರೈಮಾಸಿಕ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ಪರಿಷ್ಕೃತ ಬಡ್ಡಿದರಗಳನ್ನು ಘೋಷಿಸಿದೆ. ಹಿಂದಿನ ಕ್ವಾರ್ಟರ್ನಲ್ಲಿ ಇದ್ದ ಬಡ್ಡಿದರಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಸತತ ಎಂಟು ತ್ರೈಮಾಸಿಕ ಅವಧಿಗಳಿಂದಲೂ ಇದೇ ಬಡ್ಡಿದರ ಇದೆ.

ನವದೆಹಲಿ, ಮಾರ್ಚ್ 31: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರವನ್ನು ಪ್ರತೀ ಕ್ವಾರ್ಟರ್ಗೆ ಪರಿಷ್ಕರಿಸುತ್ತದೆ. 2026ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಗೆ (April-June quarter) ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ಕ್ವಾರ್ಟರ್ ಆದ ಜನವರಿ-ಮಾರ್ಚ್ ಅವಧಿಯಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಸತತ ಎಂಟು ಕ್ವಾರ್ಟರ್ಗಳಿಂದಲೂ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಕೊನೆಯ ಬಾರಿ ಬಡ್ಡಿದರದಲ್ಲಿ ಬದಲಾವಣೆ ಆಗಿದ್ದು 2024ರ ಜನವರಿ-ಮಾರ್ಚ್ ಕ್ವಾರ್ಟರ್ನಲ್ಲಿ.
2026ರ ಏಪ್ರಿಲ್-ಜೂನ್ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳ ವಾರ್ಷಿಕ ಬಡ್ಡಿದರ
- ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2 ವಾರ್ಷಿಕ ಬಡ್ಡಿದರ
- ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1 ಬಡ್ಡಿ
- ಕಿಸಾನ್ ವಿಕಾಸ್ ಪತ್ರ ಸ್ಕೀಮ್: ಶೇ. 7.5 ಬಡ್ಡಿ
- ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಸಿ): ಶೇ. 7.7 ಬಡ್ಡಿ
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
- ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಶೇ. 4 ಬಡ್ಡಿದರ
- ಪೋಸ್ಟ್ ಆಫೀಸ್ 1 ವರ್ಷದ ಠೇವಣಿ: ಶೇ. 6.9 ಬಡ್ಡಿದರ
- ಪೋಸ್ಟ್ ಆಫೀಸ್ 2 ವರ್ಷದ ಠೇವಣಿ: ಶೇ. 7 ಬಡ್ಡಿದರ
- ಪೋಸ್ಟ್ ಆಫೀಸ್ 3 ವರ್ಷದ ಠೇವಣಿ: ಶೇ. 7.1 ಬಡ್ಡಿದರ
- ಪೋಸ್ಟ್ ಆಫೀಸ್ 5 ವರ್ಷದ ಠೇವಣಿ: ಶೇ. 7.5 ಬಡ್ಡಿದರ
- ಪೋಸ್ಟ್ ಆಫೀಸ್ 5 ವರ್ಷದ ಆರ್ಡಿ: ಶೇ. 6.70 ಬಡ್ಡಿದರ
- ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8.2 ಬಡ್ಡಿದರ
ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು
ಇಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆಂದು ರೂಪಿಸಲಾದ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಿಗೆ ಗರಿಷ್ಠ ಬಡ್ಡಿದರ ಸಿಗುತ್ತದೆ. ರಾಷ್ಟ್ರೀಯ ಉಳಿತಾಯಪತ್ರ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೂ ಉತ್ತಮ ಬಡ್ಡಿದರ ಸಿಗುತ್ತದೆ.
ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಹೇಗೆ ನಿಗದಿ?
ಸಣ್ಣ ಉಳಿತಾಯ ಯೋಜನೆಗಳಿಗೆ ಪ್ರತೀ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ನಿಗದಿ ಮಾಡಲು ಶ್ಯಾಮಲಾ ಗೋಪಿನಾಥ್ ಕಮಿಟಿ ಶಿಫಾರಸು ಮಾಡಿರುವ ಸೂತ್ರವನ್ನು ಉಪಯೋಗಿಸಲಾಗುತ್ತದೆ. ಈ ಸೂತ್ರವು ಮಾರುಕಟ್ಟೆ ಜೋಡಿತವಾಗಿರುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?
ಗವರ್ನ್ಮೆಂಟ್ ಸೆಕ್ಯೂರಿಟಿಗಳ ಯೀಲ್ಡ್, ಹಣದುಬ್ಬರ ಮತ್ತು ಆರ್ಬಿಐ ಮಾನಿಟರಿ ಪಾಲಿಸಿಯ ಅಂಶಗಳು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದ ಮೇಲೆ ಪ್ರಭಾವ ಬೀರಬಹುದು. 2016ರಿಂದಲೂ ಸರ್ಕಾರ ಇಂತಹದ್ದೊಂದು ಸೂತ್ರ ಇಟ್ಟುಕೊಂಡು ಪ್ರತೀ ಕ್ವಾರ್ಟರ್ಗೆ ಬಡ್ಡಿದರ ಪರಿಷ್ಕರಣೆ ಮಾಡುತ್ತದೆ. ಈ ಹಿಂದೆ ವಾರ್ಷಿಕವಾಗಿ ಬಡ್ಡಿದರ ಪರಿಷ್ಕರಿಸಲಾಗುತ್ತಿತ್ತು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
