ಬೆಂಗಳೂರು, ಏಪ್ರಿಲ್ 8: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒ (EPFO) ಹೊಸ ಫೀಚರ್ ಪರಿಚಯಿಸಿದೆ. ಇಲ್ಲಿ ಇಪಿಎಫ್ ಅಕೌಂಟ್ ಹೊಂದಿರುವ ಉದ್ಯೋಗಿಗಳು ಯೂನಿವರ್ಸಲ್ ಅಕೌಂಟ್ ನಂಬರ್ ಸೃಷ್ಟಿಸಲು ಅಥವಾ ಸಕ್ರಿಯಗೊಳಿಸಲು ಆಧಾರ್ ಆಧಾರಿತವಾದ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (Aadhaar based FAT) ಬಳಸುವ ಫೀಚರ್ ಅನ್ನು ಪರಿಚಯಿಸಲಾಗಿದೆ. ಇದರಿಂದ ಯುಎಎನ್ ಸಕ್ರಿಯಗೊಳಿಸುವ ಕ್ರಿಯೆ ಸುಗಮಗೊಳ್ಳಲಿದೆ.
ಯುಎಎನ್ ಎಂಬುದು ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗೆ ಸೃಷ್ಟಿಸಲಾಗುವ ಅನನ್ಯ ಸಂಖ್ಯೆ. ಒಬ್ಬ ಉದ್ಯೋಗಿ ಒಂದೇ ಯುಎಎನ್ ಸಂಖ್ಯೆ ಇಟ್ಟುಕೊಳ್ಳಬಹುದು. ಈ ಸಂಖ್ಯೆ ಅಡಿಯಲ್ಲಿ ಆ ಉದ್ಯೋಗಿಯ ಎಲ್ಲಾ ಇಪಿಎಫ್ ಖಾತೆಗಳು ಸೇರುತ್ತವೆ. ಉದ್ಯೋಗಿಯು ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆ ರಚನೆ ಮಾಡಲಾಗುತ್ತದಾದರೂ ಯುಎಎನ್ ಒಂದೇ ಇರುತ್ತದೆ. ಹೊಸ ಉದ್ಯೋಗ ಸ್ಥಳದಲ್ಲಿ ಯುಎಎನ್ ನಂಬರ್ ತಿಳಿಸಿದರೆ ಸಾಕು, ಇಪಿಎಫ್ ಖಾತೆಗೆ ಯುಎಎನ್ ಅನ್ನು ಲಿಂಕ್ ಮಾಡಬಹುದು.
ಉದ್ಯೋಗಿ ಕೆಲಸ ಮಾಡುವ ಕಂಪನಿ ವತಿಯಿಂದ ಯುಎಎನ್ ಸೃಷ್ಟಿಸಲಾಗುತ್ತದೆ. ಈ ವೇಳೆ, ತಂದೆಯ ಹೆಸರು, ಮೊಬೈಲ್ ನಂಬರ್ ಇತ್ಯಾದಿ ವೈಯಕ್ತಿಕ ಮಾಹಿತಿಯಲ್ಲಿ ತಪ್ಪುಗಳಾಗುವುದು ಸಾಮಾನ್ಯವಾಗಿದೆ. ಹಾಗೆಯೇ, ಯುಎಎನ್ ರಚಿಸಲಾದರೂ ಆ ಬಗ್ಗೆ ಉದ್ಯೋಗಿಗೆ ಅರಿವಿರುವುದಿಲ್ಲ. ಎಷ್ಟೋ ಬಾರಿ ಉದ್ಯೋಗಿಗೆ ತನ್ನ ಯುಎಎನ್ ಸಂಖ್ಯೆ ಏನು ಎಂಬುದು ಗೊತ್ತಿರುವುದಿಲ್ಲ. ಇದರಿಂದಾಗಿ ಸಾಕಷ್ಟು ಯುಎಎನ್ಗಳು ಸಕ್ರಿಯಗೊಳ್ಳದೇ ಹಾಗೇ ಇವೆ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ
ಇಪಿಎಫ್ಒ ವತಿಯಿಂದ 1.26 ಕೋಟಿ ಯುಎಎನ್ ನೀಡಲಾಗಿದೆ. ಇದರಲ್ಲಿ ಶೇ. 35ರಷ್ಟು ಮಾತ್ರವೇ ಆ್ಯಕ್ಟಿವೇಟ್ ಆಗಿರುವುದು. ಯುಎಎನ್ ಆ್ಯಕ್ಟಿವೇಟ್ ಆಗಿದ್ದರೆ ಆನ್ಲೈನ್ನಲ್ಲಿ ಇಪಿಎಫ್ ವಹಿವಾಟನ್ನು ಸುಲಭವಾಗಿ ಮಾಡಬಹುದು.
ಉಮಂಗ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್ಡಿ ಆ್ಯಪ್ ಮೂಲಕ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಯುಎಎನ್ ಜನರೇಟ್ ಮಾಡಬಹುದು. ಈ ಎರಡು ಆ್ಯಪ್ಗಳು ನಿಮ್ಮಲ್ಲಿ ಇಲ್ಲದಿದ್ದರೆ ಡೌನ್ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್
ಆಧಾರ್ ಮೂಲಕ ದೃಢೀಕರಣ ಆಗುವುದರಿಂದ ವ್ಯಕ್ತಿಯ ಗುರುತು ನಿಖರವಾಗಿರುತ್ತದೆ. ಬಹಳ ಸುಲಭವಾಗಿ ಯುಎಎನ್ ಜನರೇಟ್ ಮಾಡಬಹುದು. ಯುಎಎನ್ ಆ್ಯಕ್ಟಿವೇಶನ್ ಕೂಡ ಇದೇ ಪ್ರಕ್ರಿಯೆಯಲ್ಲಿ ಮಾಡಬಹುದು.
ಯುಎಎನ್ ಆ್ಯಕ್ಟಿವೇಟ್ ಆದ ಬಳಿಕ ಉದ್ಯೋಗಿಗಳು ಇಪಿಎಫ್ನ ಪಾಸ್ಬುಕ್ ಇತ್ಯಾದಿ ಸರ್ವಿಸ್ಗಳನ್ನು ಪಡೆಯಬಹುದು. ಆನ್ಲೈನ್ನಲ್ಲಿ ಇಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ