
ಚೆನ್ನೈ, ಮೇ 5: ನಟ ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ.
ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.
ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?
ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.
ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್
ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ.
ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ.
ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ