AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

Know what happens if Credit Card not used for long time: ಹಣಕಾಸು ಸಂಸ್ಥೆಗಳು ವ್ಯಕ್ತಿಗಳಿಗೆ ಸಾಲ ಕೊಡುವಾಗ ಅವರ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ರಿಪೋರ್ಟ್ ಅನ್ನು ಗಮನಿಸುತ್ತಾರೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿರಲು ಕ್ರೆಡಿಟ್ ಕಾರ್ಡ್ ನಿರ್ವಹಣೆ ಮತ್ತು ಸಾಲ ನಿರ್ವಹಣೆ ಸರಿ ಇದೆಯಾ ಎಂಬುದನ್ನು ನೋಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸದಿದ್ದರೆ ಸ್ಕೋರ್ ಕಡಿಮೆ ಆಗದೇ ಹೋದರೂ ಬೇರೆ ಬೇರೆ ಸಂಕೀರ್ಣ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?
ಕ್ರೆಡಿಟ್ ಕಾರ್ಡ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 24, 2026 | 6:08 PM

Share

ಕ್ರೆಡಿಟ್ ಕಾರ್ಡ್ ಎಂದರೆ ಬಹಳ ಜನರು ಹೌಹಾರಿ ದೂರ ಓಡುತ್ತಾರೆ. ಇನ್ನೂ ಹಲವರು ಸಾಲು ಸಾಲಾಗಿ ಕ್ರೆಡಿಟ್ ಕಾರ್ಡ್​ಗಳನ್ನು ಪಡೆದು ಇಎಂಐಗಳ ಗಾಳಕ್ಕೆ ಬೀಳುತ್ತಾರೆ. ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ (Credit Card) ಪಡೆದು, ಅದನ್ನು ಬಳಸದೆ ಹಾಗೇ ಬಿಟ್ಟಿರುತ್ತಾರೆ. ಕಾರ್ಡ್ ಬಳಸದೆ ಬಹಳ ಕಾಲ ಬಿಟ್ಟರೆ ಏನಾಗುತ್ತೆ? ಕಾರ್ಡ್ ಬಳಸದೇ ಇರುವುದು ಹಣಕಾಸು ದೃಷ್ಟಿಯಿಂದ ಉತ್ತಮ ಕ್ರಮ ಅನಿಸಬಹುದು. ಆದರೆ, ಕ್ರೆಡಿಟ್ ಸ್ಕೋರ್ ದೃಷ್ಟಿಯಿಂದ ಇದು ತುಸು ಸಂಕೀರ್ಣವಾಗಿದೆ.

‘ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಿದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಿಲ್ಲ ಎನ್ನುವುದು ಹೌದು. ಆದರೆ, ಕಾರ್ಡ್ ಬಳಕೆ ದೀರ್ಘಾವಧಿಯವರೆಗೆ ಇಲ್ಲದಿದ್ದಾಗ ಕ್ರೆಡಿಟ್ ಹಿಸ್ಟರಿಯ ಅವಧಿ ಕಡಿಮೆ ಆಗುತ್ತದೆ. ಇದರಿಂದ ಕ್ರೆಡಿಟ್ ಕಾರ್ಡ್ ಕಂಪನಿ ನಿಮ್ಮ ಅಕೌಂಟ್ ಮುಚ್ಚಬಹುದು. ಇದು ಒಟ್ಟಾರೆ ಯುಟಿಲೈಸೇಶನ್ ರೇಶಿಯೋ ಹೆಚ್ಚಲು ಕಾರಣವಾಗಬಹುದು. ಆ ಮೂಲಕ ಕ್ರೆಡಿಟ್ ಸ್ಕೋರ್​ಗೆ ಸ್ವಲ್ಪ ಹಿನ್ನಡೆಗೆ ಕಾರಣವಾಗಬಹುದು’ ಎಂದು ಝ್ಯಾಗಲ್ ಕಂಪನಿಯ ಎಕ್ಸಿಕ್ಯೂಟಿವ್ ಛೇರ್ಮನ್ ರಾಜ್ ಪಿ ನಾರಾಯಣಂ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್

ಕ್ರೆಡಿಟ್ ಹಿಸ್ಟರಿ ಅವಧಿ ಕಡಿಮೆ ಇದ್ದರೆ ಏನು ಸಮಸ್ಯೆ?

ಸಾಲ ಪಡೆಯಬೇಕೆನ್ನುವವರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಸ್ಕೋರ್ ಹೆಚ್ಚಿಸಬೇಕೆಂದರೆ ಉತ್ತಮ ಕ್ರೆಡಿಟ್ ಹಿಸ್ಟರಿ ಇರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ವೆಚ್ಚ ಮಾಡುವುದು, ಸರಿಯಾದ ಸಮಯಕ್ಕೆ ಹಣ ಪಾವತಿಸುವುದು, ಇಎಂಐ ಕಟ್ಟುವುದು ಇವು ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತವೆ.

ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ನಿರ್ವಹಣೆ ಹೇಗಿದೆ, ನಿಮಗೆ ಸಾಲ ತೀರಿಸುವ ಜವಾಬ್ದಾರಿ ಮತ್ತು ಶಕ್ತಿ ಇದೆಯಾ ಎಂಬುದನ್ನು ಗಮನಿಸುತ್ತವೆ. ಇಲ್ಲಿ ಕ್ರೆಡಿಟ್ ಸ್ಕೋರ್ ಜೊತೆಗೆ ಕ್ರೆಡಿಟ್ ಹಿಸ್ಟರಿಯೂ ಗಣನೆಗೆ ಬರುತ್ತದೆ.

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಬಹಳ ಕಾಲ ಉಪಯೋಗಿಸುವುದನ್ನು ನಿಲ್ಲಿಸಿದ್ದರೆ ಅಕೌಂಟ್ ಮುಚ್ಚಬಹುದು. ಇದರಿಂದ ಕ್ರೆಡಿಟ್ ಹಿಸ್ಟರಿ ಮೊಟಕುಗೊಳ್ಳಬಹುದು. ಇದರ ಬದಲು ಕ್ರೆಡಿಟ್ ಕಾರ್ಡ್ ಅನ್ನು ಯಾವಾಗಲಾದರೊಮ್ಮೆಯಾದರೂ ಉಪಯೋಗಿಸಿ, ಬಿಲ್ ಅನ್ನು ಸಕಾಲಕ್ಕೆ ಪಾವತಿಸುತ್ತಿದ್ದರೆ ಕ್ರೆಡಿಟ್ ಹಿಸ್ಟರಿ ಬೆಳೆಯುತ್ತಿರುತ್ತದೆ. ನಿಮಗೆ ಮುಂದೆ ಸಾಲಗಳು ಸಿಗುವುದು ಸುಲಭವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು