AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Withdrawal: 5 ವರ್ಷಕ್ಕಿಂತ ಮುಂಚೆ ಪಿಎಫ್​ ವಿಥ್​ ಡ್ರಾ ಮಾಡುತ್ತಿದ್ದೀರಾ? ಯಾವಾಗ ತೆರಿಗೆ ಬೀಳಲ್ಲ ಎಂಬ ಮಾಹಿತಿ ಇಲ್ಲಿದೆ

ಒಂದು ಕಡೆಯಲ್ಲಿ ನಿರಂತರವಾಗಿ 5 ವರ್ಷದ ಸೇವೆ ಪೂರ್ತಿ ಆಗಿಲ್ಲ. ಈಗ ಪಿಎಫ್ ಹಣ ವಿಥ್​ ಡ್ರಾ ಮಾಡಬಹುದಾ? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಅದಕ್ಕೆ ಉತ್ತರವಾಗಿ ಈ ಲೇಖನ ಇದೆ.

PF Withdrawal: 5 ವರ್ಷಕ್ಕಿಂತ ಮುಂಚೆ ಪಿಎಫ್​ ವಿಥ್​ ಡ್ರಾ ಮಾಡುತ್ತಿದ್ದೀರಾ? ಯಾವಾಗ ತೆರಿಗೆ ಬೀಳಲ್ಲ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 20, 2021 | 11:36 AM

Share

ಪಿಎಫ್ (Employees Provident Fund) ಹಣದ ವಿಥ್​ ಡ್ರಾ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಈ ಪೈಕಿ ಪ್ರಾಥಮಿಕ ಪ್ರಶ್ನೆ ಏನೆಂದರೆ, 5 ವರ್ಷದ ಸೇವೆ ಪೂರ್ತಿ ಆಗಿಲ್ಲ. ಈಗ ಹಣ ವಿಥ್​ ಡ್ರಾ ಮಾಡಬಹುದಾ? ಅದಕ್ಕೆ ಎಷ್ಟು ತೆರಿಗೆ ಬೀಳುತ್ತದೆ? ಹೀಗೆ. ಆದಾಯ ತೆರಿಗೆ ನಿಯಮಾವಳಿ ಪ್ರಕಾರವಾಗಿ, ಒಂದು ಕಡೆ ಐದು ವರ್ಷ ಪೂರ್ತಿ ಕೆಲಸ ಮಾಡದೆ ಪಿಎಫ್ ಹಣವನ್ನು ವಿಥ್ ಡ್ರಾ ಮಾಡಿದರೆ ಆ ಮೊತ್ತಕ್ಕೆ ತೆರಿಗೆ ಬೀಳುತ್ತದೆ. ಆದರೆ ಇಪಿಎಫ್ ನಿಯಮಾವಳಿಯಂತೆ, ಉದ್ಯೋಗಿಯು ಒಂದು ತಿಂಗಳು ನಿರುದ್ಯೋಗಿಯಾದಲ್ಲಿ ಪಿಎಫ್​ನ ಒಟ್ಟು ಮೊತ್ತದ ಶೇ 75ರಷ್ಟು ವಿಥ್​ಡ್ರಾ ಮಾಡಬಹುದು. ಈ ಹಿಂದೆ ಒಂದು ತಿಂಗಳ ನಂತರ ವಿಥ್​ ಡ್ರಾ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಉದ್ಯೋಗಿಯು 2 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯಕ್ಕೆ ನಿರುದ್ಯೋಗಿಯಾಗಿದ್ದಲ್ಲಿ ಬಾಕಿ ಶೇ 25ರಷ್ಟು ವಿಥ್​ ಡ್ರಾ ಮಾಡಲು ಅವಕಾಶ ಮಾಡಲಾಗುತ್ತದೆ ಮತ್ತು ಪಿಎಫ್​ ಮೊತ್ತವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗುತ್ತದೆ. ಇದರರ್ಥ ಏನೆಂದರೆ. ಒಬ್ಬ ಉದ್ಯೋಗಿ ಉದ್ಯೋಗ ಕಳೆದುಕೊಂಡ ನಂತರ ಎರಡು ತಿಂಗಳ ತನಕ ನಿರುದ್ಯೋಗಿಯಾಗಿ ಉಳಿದಲ್ಲಿ ಶೇ 100ರಷ್ಟು ಮೊತ್ತವನ್ನು ವಿಥ್​ ಡ್ರಾ ಮಾಡಬಹುದು.

ಆದರೆ, ಈ ನಿಯಮಾವಳಿಯಲ್ಲಿ ಮಹಿಳೆಯರಿಗೆ ವಿನಾಯಿತಿ ಇದೆ. ಮಹಿಳೆಯು ಕೆಲಸಕ್ಕೆ ರಾಜೀನಾಮೆ ನೀಡಿ, ಮದುವೆ ಆಗುತ್ತಿದ್ದಾರೆ ಎಂದಾದಲ್ಲಿ 2 ತಿಂಗಳು ಕಾಯಬೇಕು ಅಂತೇನೂ ಇಲ್ಲ. ಇನ್ನು 54 ವರ್ಷ ದಾಟಿದ ಮೇಲೆ ಯಾವುದೇ ಸಂದರ್ಭದಲ್ಲಾದರೂ ಪಿಎಫ್ ಮೊತ್ತದ ಶೇ 90ರಷ್ಟು ಮೊತ್ತ ವಿಥ್​ ಡ್ರಾ ಮಾಡಬಹುದು. 54 ವರ್ಷದ ನಂತರ, ಆದರೆ ನಿವೃತ್ತಿಗೆ ಒಂದು ವರ್ಷದೊಳಗೆ ಈ ಎರಡರಲ್ಲಿ ಯಾವುದು ನಿಧಾನವೋ ಅದರ ಆಧಾರವಾಗಿ ಇರುತ್ತದೆ. ಬಹಳ ಜನಕ್ಕೆ ಗೊತ್ತಿಲ್ಲದ ಸಂಗತಿ ಏನೆಂದರೆ, ನಿರಂತರವಾಗಿ 5 ವರ್ಷಗಳ ಕಾಲ ಒಂದು ಕಡೆ ಉದ್ಯೋಗ ಮಾಡದಿದ್ದಲ್ಲಿ ಆಗ ಇಪಿಎಫ್ ವಿಥ್ ಡ್ರಾ ಮಾಡಿದರೆ ಅದಕ್ಕೆ ತೆರಿಗೆ ಆಗುತ್ತದೆ. ಆದರೆ 5 ವರ್ಷದ ನಿರಂತರವಾದ ಸೇವೆ ನಂತರ ಮೊತ್ತವನ್ನು ವಿಥ್​ ಡ್ರಾ (ಅಸಲು ಹಾಗೂ ಅದರ ಮೇಲಿನ ಬಡ್ಡಿ) ತೆರಿಗೆಯಿಂದ ವಿನಾಯಿತಿ ಸಿಗುತ್ತದೆ.

5 ವರ್ಷದೊಳಗೇ ಪಿಎಫ್ ವಿಥ್​ ಡ್ರಾಗೆ ಕೆಲವು ಸನ್ನಿವೇಶಗಳಲ್ಲಿ ಅವಕಾಶ ಇದ್ದು, ಅವು ಹೀಗಿವೆ: * ಉದ್ಯೋಗಿಯ ಅನಾರೋಗ್ಯ ಕಾರಣಗಳಿಗೆ ಅಥವಾ ಉದ್ಯೋಗದಾತರೇ ಉದ್ಯಮವನ್ನು ನಿಲ್ಲಿಸಿದ ಸಂದರ್ಭದಲ್ಲಿ ವಿಥ್​ ಡ್ರಾ ಮಾಡಬಹುದು. * ಉದ್ಯೋಗದಾತರ ಹತೋಟಿಯನ್ನೂ ಮೀರಿ ಏನಾದರೂ ಕಾರಣಗಳಿದ್ದು, ವಿಥ್​ ಡ್ರಾ ಮಾಡಿದಲ್ಲಿ ಅದಕ್ಕೂ ತೆರಿಗೆ ವಿನಾಯಿತಿ ಇದೆ. * ಇಪಿಎಫ್ ಯೋಜನೆ ಅಡಿಯಲ್ಲಿ ಯಾವುದೇ ಮುಂಗಡವನ್ನು ಪಡೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಅನ್ವಯ ಆಗಲ್ಲ. * ಒಂದು ವೇಳೆ ವಿಥ್​ ಡ್ರಾ ಮೊತ್ತ 50,000 ರೂಪಾಯಿಗಿಂತ ಕಡಿಮೆ ಇದ್ದಾಗ ಅಥವಾ ಉದ್ಯೋಗದಾತರು ಉದ್ಯಮವನ್ನೇ ಪೂರ್ತಿಯಾಗಿ ಮುಚ್ಚಿದಾಗ ಟಿಡಿಎಸ್ ಅನ್ವಯ ಆಗಲ್ಲ. * ವಿಥ್ ಡ್ರಾ ಮೊತ್ತವು 50,000 ರೂಪಾಯಿಗಿಂತ ಹೆಚ್ಚಿದ್ದು, ಸೇವೆ ಸಲ್ಲಿಸಿದ್ದು 5 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಚಂದಾದಾರರು 15G/15H ಫಾರ್ಮ್​ ಸಲ್ಲಿಸಬಹುದು, ಆ ವರ್ಷದ ಆದಾಯವು ತೆರಿಗೆ ಮಿತಿಯೊಳಗೆ ಇದ್ದರೆ ಟಿಡಿಎಸ್​ನಿಂದ ವಿನಾಯಿತಿ ಸಿಗುತ್ತದೆ.

ಇನ್ನು ಕೊವಿಡ್- 19 ಕಾರಣಕ್ಕೆ ಉದ್ಭವಿಸಿರುವ ಹಣಕಾಸು ತುರ್ತಿಗೆ ಪಿಎಫ್​ನಿಂದ ಅಡ್ವಾನ್ಸ್ ಪಡೆದುಕೊಳ್ಳಬಹುದು. ಅದನ್ನು ಮರುಪಾವತಿಸುವ ಅಗತ್ಯವಿಲ್ಲ. ಸದಸ್ಯರು ಮೂರು ತಿಂಗಳಿಗೆ ಸಮವಾಗಿ ಬೇಸಿಕ್ ಪೇ (ಮೂಲವೇತನ) ಹಾಗೂ ಡಿಯರ್​ನೆಸ್ ಅಲೋವೆನ್ಸ್ (ಡಿಎ) ಅಥವಾ ತಮ್ಮ ಪಿಎಫ್​ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇ 75ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ವಿಥ್​ ಡ್ರಾ ಮಾಡಬಹುದು. ಪಿಎಫ್​ ಅಡ್ವಾನ್ಸ್ ಕ್ಲೇಮ್ ಮಾಡುವಾಗ Purpose ಎಂದಿರುವಲ್ಲಿ “Outbreak Of Pandemic (Covid- 19)” ಎಂಬುದನ್ನು ಆಯ್ಕೆ ಮಾಡಬೇಕು.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

(If PF money withdraw before the completion of continuous service of 5 years. How to calculate tax on it? Here is an explainer)

Published On - 11:35 am, Tue, 20 July 21

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?