PM Modi Meets Rakesh Jhunjhunwala: ಶತಕೋಟ್ಯಧಿಪತಿ ಹೂಡಿಕೆದಾರ ಜುಂಜುನ್​ವಾಲಾರನ್ನು ಭೇಟಿ ಮಾಡಿದ ಪ್ರಧಾನಿ

ಭಾರತದ ಅತ್ಯಂತ ಯಶಸ್ವಿ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾರನ್ನು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 5ನೇ ತಾರೀಕು ಭೇಟಿ ಮಾಡಿದ್ದಾರೆ. ಭಾರತದ ಆರ್ಥಿಕತೆ ಬಗ್ಗೆ ಜುಂಜುನ್​ವಾಲಾ ಹೊಂದಿರುವ ಪಾಸಿಟಿವ್ ನಿರೀಕ್ಷೆ ಬಗ್ಗೆ ಹೇಳಿಕೊಂಡಿದ್ದಾರೆ.

PM Modi Meets Rakesh Jhunjhunwala: ಶತಕೋಟ್ಯಧಿಪತಿ ಹೂಡಿಕೆದಾರ ಜುಂಜುನ್​ವಾಲಾರನ್ನು ಭೇಟಿ ಮಾಡಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಕೇಶ್​ ಜುಂಜುನ್​ವಾಲಾರನ್ನು ಅ.5ರಂದು ಭೇಟಿಯಾದರು
Follow us
TV9 Web
| Updated By: Srinivas Mata

Updated on:Oct 06, 2021 | 11:27 AM

ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 5ನೇ ತಾರೀಕಿನಂದು ನವದೆಹಲಿಯಲ್ಲಿ ಹಿರಿಯ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾರನ್ನು ಭೇಟಿ ಆಗಿದ್ದು, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಒನ್​ ಅಂಡ್​ ಓನ್ಲಿ” ಜುಂಜುನ್​ವಾಲಾ ಅವರ ಈ ಭೇಟಿಯಿಂದ ಬಹಳ ಸಂತೋಷ ಆಯಿತು. ಅವರು ಬಹಳ “ಉತ್ಸಾಹಿಗಳು ಹಾಗೂ ಒಳನೋಟ ಇರುವವರು” ಎಂದು ಬಣ್ಣಿಸಿದ್ದಾರೆ. ಪ್ರಧಾನಿ ತಮ್ಮ ಟ್ವೀಟ್​ನಲ್ಲಿ, ಜುಂಜುನ್​ವಾಲಾ ಭಾರತದ ಬಗ್ಗೆ ಬಹಳ ಸಕಾರಾತ್ಮಕ (ಬುಲ್ಲಿಷ್) ಆಗಿರುವುದಾಗಿ ಹೇಳಿದ್ದಾರೆ. ವಾರಗಳ ಹಿಂದಷ್ಟೇ ಜುಂಜುನ್​ವಾಲಾ ಅವರು ರೀಟೇಲ್​ ಹೂಡಿಕೆದಾರರು ಉತ್ತಮ ರಿಟರ್ನ್ಸ್​ಗಾಗಿ ಅಮೆರಿಕದಲ್ಲಿ ಅಲ್ಲ, ಭಾರತದಲ್ಲೇ ಹೂಡಿಕೆ ಮಾಡಬೇಕು ಎಂದಿದ್ದರು. ದಯವಿಟ್ಟು ಅಮೆರಿಕದಲ್ಲಿ ಹೂಡಿಕೆ ಮಾಡಬೇಡಿ. ಮನೆಯ ಆಹಾರವೇ ಚೆನ್ನಾಗಿರುವಾಗ ಏಕೆ ಹೊರಗೆ ತಿಂತೀರಿ. ಭಾರತವನ್ನು ನಂಬಿ. ಭಾರತೀಯರೇ ಹೂಡಿಕೆ ಮಾಡಿ ಮತ್ತು ಶ್ರೀಮಂತರಾಗಿ ಎಂದು ಜೂನ್​ 21ರಂದು ಸಿಎನ್​ಬಿಸಿ- ಟಿವಿ18ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಭಾರತದ ಆರ್ಥಿಕತೆಯು ಆರೋಗ್ಯಕರ ಬೆಳವಣಿಗೆಯನ್ನು ಕಂಡಿರುವುದರಿಂದ ಭಾರತೀಯ ಮಾರ್ಕೆಟ್​ ಬಗ್ಗೆ ಸಕಾರಾತ್ಮಕವಾಗಿ ಇರುವುದಾಗಿ ಹಲವು ಸಲ ಜುಂಜುನ್​ವಾಲಾ ಹೇಳಿದ್ದರು. ಅಂದಹಾಗೆ ಭಾರತದಲ್ಲೇ ಅತ್ಯಂತ ಯಶಸ್ವಿ ಹೂಡಿಕೆದಾರ ಎನಿಸಿಕೊಂಡಿದ್ದಾರೆ ರಾಕೇಶ್​ ಜುಂಜುನ್​ವಾಲಾ. ಆರ್ಥಿಕತೆಯು ಮೇಲೇರುವ (ಟೇಕ್ ಆಫ್) ಹಂತದಲ್ಲಿದೆ. ನಾವು ಎನ್​ಪಿಎ ಚಕ್ರವನ್ನು ದಾಟಿ ಬಂದಿದ್ದೇವೆ ಮತ್ತು ಜನ್​ ಧನ್, ಐಬಿಸಿ, ರೇರಾ, ಗಣಿಗಾರಿಕೆಯಲ್ಲಿನ ಸುಧಾರಣೆಗಳು, ಕಾರ್ಮಿಕ ಮತ್ತು ಕೃಷಿ ಕಾನೂನುಗಳು ಹೀಗೆ ಹಲವು ಬದಲಾವಣೆಗಳನ್ನು ದಾಟಿದ್ದೇವೆ. ಭಾರತೀಯರು ಉತ್ತಮ ಹಾಗೂ ದೀರ್ಘವಾದ ಆರ್ಥಿಕ ಬೆಳವಣಿಗೆಯ ಹೊಸ್ತಿಲಲ್ಲಿದ್ದಾರೆ. ಭಾರತದ ಆರ್ಥಿಕತೆಯಲ್ಲಿಇ ರಚನಾತ್ಮಕ ಬದಲಾವಣೆಯು ಮುನ್ನೆಲೆಗೆ ಬರಲಿದೆ ಎಂದು ಈ ವರ್ಷದ ಆರಂಭದಲ್ಲಿ ಅವರು ಹೇಳಿದ್ದರು.

ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಜುಂಜುನ್​ವಾಲಾ ಮತ್ತು ಅವರ ಕುಟುಂಬ ಸಹ ಇದೆ. ಈಚೆಗೆ ಬಿಡುಗಡೆ ಆದ ಐಐಎಫ್​ಎಲ್ ವೆಲ್ತ್​ ಹ್ಯುರನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ, ಜುಂಜುನ್​ವಾಲಾ ಅವರ ಕುಟುಂಬದ ಆಸ್ತಿ ಮೌಲ್ಯ 22,300 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: Sovereign Rating: ಭಾರತದ ಸವರನ್ ರೇಟಿಂಗ್ ಸ್ಥಿರಕ್ಕೆ ಅಪ್​ಗ್ರೇಡ್​ ಮಾಡಿದ ಮೂಡೀಸ್; ಏನಿದು Baa3 ರೇಟಿಂಗ್?

Stock Market Tips: 60 ಸಾವಿರ ಪಾಯಿಂಟ್ಸ್​ ತಲುಪಿದ ನಂತರ ಷೇರು ಮಾರ್ಕೆಟ್​ ಮುಂದೆ ಏನಾಗಬಹುದು?

Published On - 11:24 am, Wed, 6 October 21