AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Surya Ghar Yojana: ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಪಿಎಂ ಸೂರ್ಯಘರ್ ಯೋಜನೆಯ ಪೂರ್ಣ ವಿವರ

PM Surya Ghar Muft Bijli Yojana, complete guide: ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಬಹಳ ಮಾದರಿ ಕ್ರಮ. ಸೌರಫಲಕಗಳನ್ನು ಅಳವಡಿಸುವುದು ದುಬಾರಿ. ಆದರೆ ಸರ್ಕಾರದಿಂದ ನಡೆಸಲಾಗುವ ಪಿಎಂ ಸೂರ್ಯ ಘರ್ ಯೋಜನೆಯಲ್ಲಿ ಸಬ್ಸಿಡಿ ಸಿಗುತ್ತದೆ. ಈ ಯೋಜನೆ ಯಾವುದು, ಅದರ ಫಲಾನುಭವಿಯಾಗಿ ಲಾಭ ಪಡೆಯೋದು ಹೇಗೆ, ಅನ್ನೋದರ ಪೂರ್ತಿ ಮಾಹಿತಿ ಈ ಲೇಖನದಲ್ಲಿದೆ ನೋಡಿ.

PM Surya Ghar Yojana: ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಪಿಎಂ ಸೂರ್ಯಘರ್ ಯೋಜನೆಯ ಪೂರ್ಣ ವಿವರ
ಮೇಲ್ಛಾವಣಿ ಸೌರಫಲಕ
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Jul 29, 2024 | 11:54 AM

Share

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಯೋಜನೆಯು ಸೌರ ಫಲಕಗಳನ್ನು ಅಳವಡಿಸಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಈ ಸರ್ಕಾರಿ ಯೋಜನೆ ಹೊಂದಿದ್ದು, ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಪಿಎಂ ಸೂರ್ಯ ಘರ್ ಯೋಜನೆಯು ಭಾರತದಾದ್ಯಂತ 1 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ಕೇವಲ ಕುಟುಂಬಗಳಿಗೆ ಉಪಯೋಗವಾಗುವುದಷ್ಟೇ ಅಲ್ಲದೆ, ಸರಕಾರಕ್ಕೂ ವಿದ್ಯುತ್ ವೆಚ್ಚದಲ್ಲಿ ವರ್ಷಕ್ಕೆ 75,000 ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಪಿಎಂ ಸೂರ್ಯ ಘರ್ ಯೋಜನೆಯ ಪ್ರಯೋಜನಗಳು

  • ಮನೆಗಳಿಗೆ ಉಚಿತ ವಿದ್ಯುತ್
  • ಸರ್ಕಾರಕ್ಕೆ ಒಟ್ಟು ವಿದ್ಯುತ್ ವೆಚ್ಚದಲ್ಲಿ ಉಳಿತಾಯ
  • ನವೀಕರಿಸಬಹುದಾದ ಶಕ್ತಿಯ ಸದ್ಬಳಕೆ
  • ಕಡಿಮೆಯಾಗುವ ಇಂಗಾಲದ ಹೊರಸೂಸುವಿಕೆ.

ಯೋಜನೆಯ ಪ್ರಯೋಜನ ಪಡೆಯಲು ಮಾನದಂಡಗಳು

  • ಭಾರತೀಯ ಪ್ರಜೆಯಾಗಿರಬೇಕು
  • ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿ ಇರುವ ಮನೆಯನ್ನು ಹೊಂದಿರಬೇಕು
  • ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು
  • ಬೇರಾವುದೇ ಸೌರ ಯೋಜನೆಯಲ್ಲಿ ಈಗಾಗಲೇ ಇತರ ಸಬ್ಸಿಡಿ ಪಡೆದಿರಬಾರದು.

ಇದನ್ನೂ ಓದಿ: Mudra loan details: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ

ಪಿಎಂ ಸೂರ್ಯ ಘರ್ ಯೋಜನೆಯ ಪ್ರಯೋಜನ ಪಡೆಯುವ ವಿಧಾನ

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.pmsuryaghar.gov.in/
  • ಅಲ್ಲಿ ಮೊದಲಿಗೆ ನೊಂದಣಿ ಮಾಡಿಕೊಳ್ಳಿ. ಅದಕ್ಕೆ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ನಿಮ್ಮ ಡಿಸ್ಕಾಂ ಕಂಪನಿ ಹಾಗೂ ನಿಮ್ಮ ಮನೆಯ ವಿದ್ಯುತ್ ಬಿಲ್​ನಲ್ಲಿರುವ ಅಕೌಂಟ್ ನಂಬರ್ ನಮೂದಿಸಿ.
  • ಬಳಿಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ, ಬಳಿಕ ಪೋರ್ಟಲ್​ನ ನಿರ್ದೇಶನವನ್ನು ಅನುಸರಿಸಿ.
  • ಇದಾದ ಬಳಿಕ ಮುಂದಿನ ಹಂತದ್ದು…
  • ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು
  • ರೂಫ್‌ಟಾಪ್ ಸೋಲಾರ್‌ಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ನಿಮ್ಮ ಡಿಸ್ಕಾಂ ಕಂಪನಿಯು ಅರ್ಜಿಯನ್ನು ಪರಿಶೀಲಿಸಿ ಕಾರ್ಯಸಾಧ್ಯತೆಯ (Feasibility report) ಅನುಮೋದನೆಗಾಗಿ ನಿರೀಕ್ಷಿಸಿ. ಒಮ್ಮೆ ನಿಮಗೆ ಈ ಅನುಮೋದನೆ ಸಿಕ್ಕ ನಂತರ ನಿಮ್ಮ ಡಿಸ್ಕಮ್‌ನಲ್ಲಿ ನೋಂದಾಯಿತ ಮಾರಾಟಗಾರರು ಬಂದು ಸೌರಫಲಕಗಳನ್ನು ಸ್ಥಾಪಿಸುತ್ತಾರೆ.
  • ಅನುಸ್ಥಾಪನೆಯು (Installation) ಮುಗಿದ ನಂತರ ಸೌರಸ್ಥಾವರದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.
  • ನೆಟ್ ಮೀಟರ್ ಅನ್ನು ಸ್ಥಾಪಿಸಿದ ನಂತರ ಮತ್ತು ಡಿಸ್ಕಾಂನಿಂದ ಪರಿಶೀಲನೆ ನಡೆಯುತ್ತದೆ. ಅದಾದ ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಸರ್ಟಿಫಿಕೇಟ್ ನಿರ್ಮಾಣ ಆಗುತ್ತದೆ.

ಒಮ್ಮೆ ನೀವು ವರದಿಯನ್ನು ಪಡೆದ ನಂತರ ಪೋರ್ಟಲ್ ಮೂಲಕ ಬ್ಯಾಂಕ್ ಖಾತೆ ವಿವರಗಳು ಮತ್ತು ರದ್ದುಗೊಂಡ ಚೆಕ್ ಅನ್ನು ಸಲ್ಲಿಸಿ. 30 ದಿನಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿಯನ್ನು ಪಡೆಯಬಹುದು.

ಇದನ್ನೂ ಓದಿ: ಬದಲಾಗುತ್ತಿದೆ ಆರ್​​ಬಿಐ ನಿಯಮ… ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ…

ಪಿಎಂ ಸೂರ್ಯ ಘರ್ ಯೋಜನೆ, ಅರ್ಜಿಗೆ ಅಗತ್ಯವಿರುವ ದಾಖಲೆಗಳು

  1. ಗುರುತಿನ ಪುರಾವೆ
  2. ವಿಳಾಸದ ಪುರಾವೆ
  3. ವಿದ್ಯುತ್ ಬಿಲ್
  4. ಛಾವಣಿಯ ಮಾಲೀಕತ್ವದ ಪ್ರಮಾಣಪತ್ರ

ಲೇಖನ: ದರ್ಶನಿ ತಿಪ್ಪಾರೆಡ್ಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ