Sugar production in Karnataka: ಸಕ್ಕರೆ ರಫ್ತು ನಿಷೇಧ ಸಾಧ್ಯತೆ ನಡುವೆಯೇ ಕರ್ನಾಟಕದಲ್ಲಿ ಉತ್ಪಾದನೆ ಭಾರೀ ಕುಸಿತ

2022-23ನೇ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ, ಕರ್ನಾಟಕದ ಉತ್ಪಾದನೆಯು ಹಿಂದಿನ ಅಂದಾಜಿನ 5.6 ಮಿಲಿಯನ್ ಟನ್‌ಗಳಿಂದ 5.7 ಮಿಲಿಯನ್ ಟನ್‌ಗಳಿಗೆ ಹೆಚ್ಚಳವಾಗಿತ್ತು. 2022-23 ರಲ್ಲಿ ಮಹಾರಾಷ್ಟ್ರದಲ್ಲಿ ಉತ್ಪಾದನೆ ಕುಸಿತವಾಗಿದ್ದು, ಅಲ್ಲಿ ಹಿಂದಿನ ವರ್ಷದ 12.2 ಮಿಲಿಯನ್ ಟನ್‌ಗಳ ಬದಲು 10.5 ಮಿಲಿಯನ್ ಟನ್‌ಗಳಷ್ಟು ಆಗಿತ್ತು.

Sugar production in Karnataka: ಸಕ್ಕರೆ ರಫ್ತು ನಿಷೇಧ ಸಾಧ್ಯತೆ ನಡುವೆಯೇ ಕರ್ನಾಟಕದಲ್ಲಿ ಉತ್ಪಾದನೆ ಭಾರೀ ಕುಸಿತ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Aug 28, 2023 | 6:51 AM

ಬೆಂಗಳೂರು, ಆಗಸ್ಟ್ 28: ಭಾರತದ ಮೂರನೇ ಅತಿ ದೊಡ್ಡ ಕಬ್ಬು ಉತ್ಪಾದಕ ಕರ್ನಾಟಕವು (Karnataka) ನೈಋತ್ಯ ಮುಂಗಾರು ಮಳೆಯ ಕೊರತೆ ಹಿನ್ನೆಲೆಯಲ್ಲಿ ಸಕ್ಕರೆ ಮಾರುಕಟ್ಟೆ ವರ್ಷ 2023-24 ರಲ್ಲಿ (ಸೆಪ್ಟೆಂಬರ್ 2024 ರಲ್ಲಿ ಕೊನೆಗೊಳ್ಳುತ್ತದೆ) ಸಕ್ಕರೆ ಉತ್ಪಾದನೆಯಲ್ಲಿ (Sugar Production) ಶೇ 20 ರಷ್ಟು ಕುಸಿತ ವರದಿಯಾಗುವ ಸಾಧ್ಯತೆ ಇದೆ. ಈವರೆಗಿನ ಲೆಕ್ಕಾಚಾರದಿಂದ ಇದು ತಿಳಿದುಬಂದಿದೆ. ಕಬ್ಬು ಪಕ್ವವಾಗಲು ಸಮಯ ಬೇಕಾಗಿರುವುದರಿಂದ ಕಬ್ಬು ಅರೆಯುವುದನ್ನು ಸ್ವಲ್ಪ ಸಮಯದವರೆಗೆ ಮುಂದೂಡುವಂತೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಮನವಿ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

2023 ರ ಜುಲೈಯಲ್ಲಿ ‘ರಾಯಿಟರ್ಸ್’ ಸುದ್ದಿಸಂಸ್ಥೆಯ ಮಾಡಿದ್ದ ವರದಿಯ ಪ್ರಕಾರ, ಕರ್ನಾಟಕದ ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಶೇ 55 ರಷ್ಟು ಮಳೆಯ ಕೊರತೆಯಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಈ ಶೇಕಡಾವಾರು ಪ್ರಮಾಣವು 71 ರಷ್ಟು ಹೆಚ್ಚಾಗಿದೆ. ಈ ರಾಜ್ಯಗಳು ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯ ಮಳೆಗೆ ಸಾಕ್ಷಿಯಾಗುತ್ತವೆ.

2022-23ನೇ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ, ಕರ್ನಾಟಕದ ಉತ್ಪಾದನೆಯು ಹಿಂದಿನ ಅಂದಾಜಿನ 5.6 ಮಿಲಿಯನ್ ಟನ್‌ಗಳಿಂದ 5.7 ಮಿಲಿಯನ್ ಟನ್‌ಗಳಿಗೆ ಹೆಚ್ಚಳವಾಗಿತ್ತು. 2022-23 ರಲ್ಲಿ ಮಹಾರಾಷ್ಟ್ರದಲ್ಲಿ ಉತ್ಪಾದನೆ ಕುಸಿತವಾಗಿದ್ದು, ಅಲ್ಲಿ ಹಿಂದಿನ ವರ್ಷದ 12.2 ಮಿಲಿಯನ್ ಟನ್‌ಗಳ ಬದಲು 10.5 ಮಿಲಿಯನ್ ಟನ್‌ಗಳಷ್ಟು ಆಗಿತ್ತು.

ಕರ್ನಾಟಕವು 71 ಸಕ್ಕರೆ ಕಾರ್ಖಾನೆಗಳನ್ನು ಹೊಂದಿದೆ, ಅವುಗಳಲ್ಲಿ ಗರಿಷ್ಠ ಸಂಖ್ಯೆ (24) ಬೆಳಗಾವಿ ಜಿಲ್ಲೆಯಲ್ಲಿ ಬರುತ್ತದೆ.

2022-23ರಲ್ಲಿ ಭಾರತದ ಸಕ್ಕರೆ ಉತ್ಪಾದನೆಯು 32.8 ಮಿಲಿಯನ್ ಟನ್‌ ಇದ್ದರೆ, 2023-24ರಲ್ಲಿ 31.7 ಮಿಲಿಯನ್ ಟನ್‌ಗಳಷ್ಟು ಇರಲಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ (ಐಎಸ್‌ಎಂಎ) ಅಧ್ಯಕ್ಷರನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.

ಇದನ್ನೂ ಓದಿ: ಭಾರತದಿಂದ ಏಳು ವರ್ಷದಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧ ಸಾಧ್ಯತೆ

ಐಎಸ್‌ಎಂಎ ಅಂದಾಜು ಪ್ರಕಾರ ದೇಶೀಯ ಬಳಕೆ 27.5 ಮಿಲಿಯನ್ ಟನ್‌ಗಳಾಗಿವೆ. 2022-23 ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ, ದೇಶವು 6.1 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಿದೆ. ಆದರೆ ಈ ವರ್ಷ ಸಕ್ಕರೆ ಬೆಲೆಯಲ್ಲಿ ಸಂಭವನೀಯ ಏರಿಕೆಯನ್ನು ತಡೆಯುವುದಕ್ಕಾಗಿ ರಫ್ತು ಕಡಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಜಾಗತಿಕ ಸಕ್ಕರೆ ಮಾರುಕಟ್ಟೆಯಲ್ಲಿ ಕೂಡ ಈಗಾಗಲೇ ಭಾರತದಲ್ಲಿ ನಿರೀಕ್ಷಿತ ಉತ್ಪಾದನೆಗಿಂತ ಕಡಿಮೆಯಾಗಿದೆ. ಅತಿಹೆಚ್ಚು ಸಕ್ಕರೆ ರಫ್ತು ಮಾಡುವ ಬ್ರೆಜಿಲ್​​ನಲ್ಲಿ ಕೂಡ ಈ ಬಾರ ಉತ್ಪಾದನೆ ಕುಸಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ