ಬ್ಯಾಂಕ್ ನೌಕರರ ಪಿಂಚಣಿ ಮೊತ್ತವನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ
ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಉದ್ಯೋಗಿಗಳಿಗೆ NPS ನಿಯಮಗಳನ್ನು ಬದಲಾಯಿಸಿದ್ದು, ಅದರಂತೆ ಸರ್ಕಾರವು ಪ್ರತಿ ತಿಂಗಳು ಬ್ಯಾಂಕಿಂಗ್ ಉದ್ಯೋಗಿಗಳ ಪಿಂಚಣಿ ನಿಧಿಯಲ್ಲಿ ಶೇಕಡಾ 40 ರಷ್ಟು ಹೆಚ್ಚು ಜಮಾ ಮಾಡಲಿದೆ.
ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳ (PSB) ನೌಕರರ ಪಿಂಚಣಿ ಮೊತ್ತವನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಶೇ. 14 ಕ್ಕೆ ಏರಿಸಿದೆ. ಪಿಟಿಐ ವರದಿಯ ಪ್ರಕಾರ ಎನ್‌ಪಿಎಸ್ ಅಡಿಯಲ್ಲಿ ನೌಕರರ ಪಿಂಚಣಿಗಾಗಿ ಪಿಎಸ್‌ಬಿಯ ಕೊಡುಗೆಯನ್ನು ಶೇಕಡಾ 10 ರಿಂದ 14 ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ತಿಳಿಸಿದೆ. ಆದಾಗ್ಯೂ, ಎನ್‌ಪಿಎಸ್ ಅಡಿಯಲ್ಲಿ ನೌಕರರ ಕನಿಷ್ಠ ಕೊಡುಗೆ ಶೇಕಡಾ 10 ರಲ್ಲೇ ಮುಂದುವರಿಯಲಿದೆ ಎಂದು ಡಿಎಫ್ಎಸ್ ಕಾರ್ಯದರ್ಶಿ ದೇಬಶಿಶ್ ಪಾಂಡ ತಿಳಿಸಿದ್ದಾರೆ.
ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಉದ್ಯೋಗಿಗಳಿಗೆ NPS ನಿಯಮಗಳನ್ನು ಬದಲಾಯಿಸಿದ್ದು, ಅದರಂತೆ ಸರ್ಕಾರವು ಪ್ರತಿ ತಿಂಗಳು ಬ್ಯಾಂಕಿಂಗ್ ಉದ್ಯೋಗಿಗಳ ಪಿಂಚಣಿ ನಿಧಿಯಲ್ಲಿ ಶೇಕಡಾ 40 ರಷ್ಟು ಹೆಚ್ಚು ಜಮಾ ಮಾಡಲಿದೆ. NPS ನಿಧಿಯಲ್ಲಿ ಬ್ಯಾಂಕಿನ ಕೊಡುಗೆಯನ್ನು ಶೇಕಡಾ 10 ರಿಂದ 14 ಕ್ಕೆ ಹೆಚ್ಚಿಸಲಾಗಿದೆ.
ಪ್ರಸ್ತುತ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುವ ನೌಕರರ ಪಿಂಚಣಿ ನಿಧಿಯಲ್ಲಿ (NPS) ಬ್ಯಾಂಕುಗಳ ಕೊಡುಗೆ 10 ಪ್ರತಿಶತ ಇದ್ದು, ಇದೀಗ ಇದನ್ನು ಶೇಕಡಾ 14ಕ್ಕೆ ಹೆಚ್ಚಿಸಲಾಗಿದೆ. ಆದರೂ ಉದ್ಯೋಗಿ ನೀಡುವ ಕನಿಷ್ಠ ಕೊಡುಗೆಯನ್ನು ಶೇಕಡಾ 10 ಕ್ಕೆ ನಿಗದಿಪಡಿಸಲಾಗಿದೆ. ಇದರ ಲೆಕ್ಕಾಚಾರವನ್ನು ಮೂಲ ವೇತನ ಮತ್ತು ನ್ಯಾಯ ಭತ್ಯೆಯ ಆಧಾರದ ಮೇಲೆ ಮಾಡಲಾಗುತ್ತದೆ. ಹಾಗೆಯೇ ಹೆಚ್ಚುವರಿ ಭತ್ಯೆ ಮತ್ತು ಮೂಲ ವೇತನವನ್ನು ಸೇರಿಸುವ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ. ಈ ಪ್ರಕಟಣೆಯೊಂದಿಗೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳಿಗೆ ಎನ್‌ಪಿಎಸ್ ನಿಯಮವು ಕೇಂದ್ರ ಉದ್ಯೋಗಿಗಳಂತಾಗಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ, ಕೇಂದ್ರ ಉದ್ಯೋಗಿಗಳಿಗೆ ಸರ್ಕಾರದಿಂದ ನೀಡಲಾಗುವ ಕೊಡುಗೆಯನ್ನು ಮೂಲ ಮತ್ತು ನ್ಯಾಯ ಭತ್ಯೆಯ 14 ಪ್ರತಿಶತದಷ್ಟು ಮತ್ತು ನೌಕರರ ಕನಿಷ್ಠ ಕೊಡುಗೆಯನ್ನು 10 ಪ್ರತಿಶತದಷ್ಟು ಇರಿಸಲಾಗಿದೆ. ಈಗ ಬ್ಯಾಂಕಿಂಗ್ ಉದ್ಯೋಗಿಗಳಿಗೂ ಇದರ ಲಾಭ ಸಿಗಲಿದೆ. ಈ ನಿಯಮದ ಅನುಷ್ಠಾನದಿಂದಾಗಿ, ಬ್ಯಾಂಕಿಂಗ್ ಉದ್ಯೋಗಿಗಳ ನಿವೃತ್ತಿ ನಿಧಿ ಹೆಚ್ಚಾಗಲಿದೆ.
ಇದರ ಹೊರತಾಗಿ, ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಉದ್ಯೋಗಿಗಳ ಮರಣದ ನಂತರ ಕುಟುಂಬ ಪಿಂಚಣಿಗೆ ಸಂಬಂಧಿಸಿದ ನಿಯಮಗಳನ್ನು ಬದಲಿಸಿದೆ. ಬ್ಯಾಂಕ್ ಉದ್ಯೋಗಿ ಸತ್ತರೆ, ಅವರ ಕುಟುಂಬವು ಕೊನೆಯ ಸಂಬಳದ ಶೇ. 30 ರಷ್ಟು ಪಿಂಚಣಿಯಾಗಿ ಪಡೆಯಲಿದ್ದಾರೆ. ಈ ಮೊದಲು ಮರಣ ಹೊಂದಿದ್ದ ಉದ್ಯೋಗಿ ಕುಟುಂಬಕ್ಕೆ ಪಿಂಚಣಿ 9284 ರೂ. ನೀಡಲಾಗುತ್ತಿತ್ತು.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(PSBs’ pension contribution for employees to 14 per cent)