AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Purchasing Manufacturing Index: 2022 ಫೆಬ್ರವರಿಯಲ್ಲಿ 54.9ಕ್ಕೆ ತಲುಪಿ ಭಾರತ ಉತ್ಪಾದನಾ ವಲಯ ವಿಸ್ತರಣೆ

ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ (PMI) 2022ರ ಫೆಬ್ರವರಿ ತಿಂಗಳಿಗೆ 54.9ಕ್ಕೆ ವಿಸ್ತರಣೆ ಆಗಿದೆ. ಆ ಬಗೆಗಿನ ವಿವರವು ಈ ವರದಿಯಲ್ಲಿ ಇದೆ.

Purchasing Manufacturing Index: 2022 ಫೆಬ್ರವರಿಯಲ್ಲಿ 54.9ಕ್ಕೆ ತಲುಪಿ ಭಾರತ ಉತ್ಪಾದನಾ ವಲಯ ವಿಸ್ತರಣೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Mar 02, 2022 | 8:31 PM

Share

ಭಾರತೀಯ ಉತ್ಪಾದನಾ ವಲಯವು 2022ರ ಫೆಬ್ರವರಿಯಲ್ಲಿ ವಿಸ್ತರಣೆಯನ್ನು ಮುಂದುವರಿಸಿದೆ. ವಲಯದ ಉತ್ಪಾದನಾ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಜನವರಿಯಲ್ಲಿ 54 ಇದ್ದದ್ದು ಫೆಬ್ರವರಿಯಲ್ಲಿ 54.9ಕ್ಕೆ ಏರಿಕೆ ಕಂಡಿದೆ. 50ಕ್ಕಿಂತ ಹೆಚ್ಚಿನ ಚಟುವಟಿಕೆಯು ವಿಸ್ತರಣೆಯನ್ನು ಸೂಚಿಸುತ್ತದೆ. ಆದರೆ ಉಪ-50ರ ಒಳಗಿನ ಸಂಖ್ಯೆಯು ಕುಗ್ಗಿರುವುದರ ಸಂಕೇತವಾಗಿದೆ. ಮಾರ್ಚ್ 2ರಂದು ತನ್ನ ಪಿಎಂಐ ವರದಿಯನ್ನು ಬಿಡುಗಡೆ ಮಾಡಿದ ಐಎಚ್​ಎಸ್​ ಮಾರ್ಕಿಟ್ ಪ್ರಕಾರ, ಫೆಬ್ರವರಿಯಲ್ಲಿ ಹೊಸ ಕೆಲಸದ ಆರ್ಡರ್​ಗಳಲ್ಲಿ “ಬಲವಾದ ಹೆಚ್ಚಳ” ಕಂಡುಬಂದಿದೆ. ಹೊಸ ಕೆಲಸದೊಳಗೆ ಹೆಚ್ಚಳವು ಸಾಧಾರಣವಾಗಿದ್ದರೂ ಮೂರು ತಿಂಗಳಲ್ಲಿ ಅಂತಾರಾಷ್ಟ್ರೀಯ ಬೇಡಿಕೆಯು ಶೀಘ್ರವಾದ ವೇಗದಲ್ಲಿ ಏರಿದೆ.

“ಔಟ್‌ಪುಟ್ ಮತ್ತು ಹೊಸ ಆರ್ಡರ್‌ಗಳು ಬಲವಾದ ದರಗಳಲ್ಲಿ ವಿಸ್ತರಿಸಿದ್ದು, ಖರೀದಿ ಚಟುವಟಿಕೆಯು ಮುಂದುವರಿಯಿತು. ಅದೇ ಸಮಯದಲ್ಲಿ ಬ್ಯಾಕ್‌ಲಾಗ್‌ಗಳಲ್ಲಿ ನಿರಂತರ ಹೆಚ್ಚಳವು ಸಾಮರ್ಥ್ಯದ ಒತ್ತಡಗಳು ಮುಂದುವರಿದಂತೆ ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಉದ್ಯೋಗ ಮಟ್ಟಗಳಿಗೆ ಕಾರಣವಾಗಬಹುದು,” ಎಂದು ಐಎಚ್​ಎಸ್​ ಮಾರ್ಕಿಟ್‌ನ ಅರ್ಥಶಾಸ್ತ್ರಜ್ಞರಾದ ಶ್ರೀಯಾ ಪಟೇಲ್ ಹೇಳಿದ್ದಾರೆ. ಆದರೂ ಫೆಬ್ರವರಿಯಲ್ಲಿ ಉದ್ಯೋಗವು ಮೂರು ತಿಂಗಳಲ್ಲಿ ನಿಧಾನವಾದ ವೇಗದಲ್ಲಿ ಕುಸಿದಿದೆ. ಭಾರತೀಯ ಉತ್ಪಾದನಾ ವಲಯವು ಒಮಿಕ್ರಾನ್ ರೂಪಾಂತರದ ಮುಂಚೂಣಿಯಲ್ಲಿ ಮೂರನೇ ಅಲೆಯ “ಚಂಡಮಾರುತವನ್ನು ಎದುರಿಸಿದೆ” ಎಂದು ಪಟೇಲ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಉತ್ಪಾದನಾ ಚಟುವಟಿಕೆಯು ಸುಧಾರಿಸಿದ್ದರೂ ಬೆಲೆಗಳ ಬಗ್ಗೆ ಆತಂಕ ಉಳಿದಿದೆ. ಇನ್‌ಪುಟ್ ಬೆಲೆ ಹಣದುಬ್ಬರವು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ಆದರೆ ಅದು ಹೆಚ್ಚುತ್ತಲೇ ಇದ್ದು, ಇದರಿಂದಾಗಿ ತಯಾರಕರು ಕೆಲವು ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಒತ್ತಾಯಿಸಿದೆ. “ವೆಚ್ಚಗಳು ತೀವ್ರವಾಗಿ ಏರುತ್ತಿರುವ ಹೊರತಾಗಿಯೂ ಸಂಸ್ಥೆಗಳು ಈ ಹೊರೆಯ ಸ್ವಲ್ಪ ಭಾಗವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿದವು. ಇದರಿಂದಾಗಿ ಲಾಭದ ಮೇಲೆ ಒತ್ತಡವನ್ನು ಸೂಚಿಸಿದವು,” ಎಂದು ಪಟೇಲ್ ತಿಳಿಸಿದ್ದಾರೆ.

ಹೆಚ್ಚಿದ ಹಣದುಬ್ಬರವು ಆತಂಕಕಾರಿ ಆಗಿದ್ದು, ಇದು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಏರಿದೆ. ಇದು ಕಚ್ಚಾ ತೈಲ ಸೇರಿದಂತೆ ಜಾಗತಿಕ ಸರಕುಗಳ ಬೆಲೆಗಳನ್ನು ಹೆಚ್ಚಿಸಿದೆ. ಕೆಲವು ವಸ್ತುಗಳಿಗೆ ಹಣದುಬ್ಬರದ ಒತ್ತಡವನ್ನು ತಗ್ಗಿಸಲು ಸರ್ಕಾರವು ಪೂರೈಕೆ-ಕಡೆಯ ಸಂಬಂಧಿತ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮುಂದಿನ ವಾರ 5 ರಾಜ್ಯ ಚುನಾವಣೆಗಳಿಗೆ ಮತದಾನ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಭಾರತೀಯರು ಇದ್ದಾರೆ. ಫೆಬ್ರವರಿ 28ರಂದು ಬಿಡುಗಡೆಯಾದ ಮಾಹಿತಿಯು ಭಾರತದ ಜಿಡಿಪಿ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ 8.5ರಿಂದ ಅಕ್ಟೋಬರ್-ಡಿಸೆಂಬರ್​ ತ್ರೈಮಾಸಿಕದಲ್ಲಿ ಶೇ 5.4ಕ್ಕೆ ಕುಸಿದಿದೆ ಎಂದು ತೋರಿಸಿದೆ. ಇದು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಆಗಿದೆ.

ಇದನ್ನೂ ಓದಿ: Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್​ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ

Published On - 8:29 pm, Wed, 2 March 22

ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ