
ನವದೆಹಲಿ, ನವೆಂಬರ್ 8: ಹೊಸ ವರ್ಷದಿಂದ ಹೊಸ ಸೆಕ್ಯೂರಿಟಿ ಫೀಚರ್ಸ್ ಇರುವ ಹೊಸ ‘ಚೆಕ್ ಟ್ರಂಕೇಶನ್ ಸಿಸ್ಟಮ್’ (CTS) ಚೆಕ್ ಬುಕ್‌ಗಳು ಕಡ್ಡಾಯವಾಗಿ ಬರಲಿವೆ ಎಂಬ ಸಂದೇಶಗಳು ಹರಿದಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸುದ್ದಿಯನ್ನು ತಳ್ಳಿಹಾಕಿದೆ. ಇಂಥ ಯಾವುದೇ ಪ್ರಸ್ತಾಪ ಆರ್‌ಬಿಐ ಬಳಿ ಇಲ್ಲ. ಇದು ಸದ್ಯಕ್ಕೆ ದೂರವಾದ ಮತ್ತು ದಾರಿ ತಪ್ಪಿಸುವ ಸುಳ್ಳು ವರದಿ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಚೆಕ್ ಬುಕ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಡಿಸೆಂಬರ್ 31, 2026 ರ ನಂತರ ಹಳೆಯ ಚೆಕ್ ಬುಕ್‌ಗಳು ಅಮಾನ್ಯವಾಗುತ್ತವೆ ಎಂಬ ವಾದಗಳು ಸಂಪೂರ್ಣವಾಗಿ ತಪ್ಪು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ: ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ
ಅಧಿಕೃತ ಮಾಹಿತಿಯಷ್ಟೇ ನಂಬಲು ಮನವಿ: ಬ್ಯಾಂಕಿಂಗ್ ನಿಯಮಗಳು ಮತ್ತು ಚೆಕ್ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬದೆ, ಕೇವಲ ಆರ್‌ಬಿಐನ ಅಧಿಕೃತ ಪ್ರಕಟಣೆಗಳು ಮತ್ತು ವೆಬ್‌ಸೈಟ್ ಮೂಲಕ ಬರುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಆರ್‌ಬಿಐ ಎಚ್ಚರಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ
ಆರ್‌ಬಿಐ ಟ್ವೀಟ್
ಈ ಮೇಲಿನ ಅಂಶಗಳನ್ನೊಳಗೊಂಡ ನೋಟೀಸ್ ಅನ್ನು ಆರ್‌ಬಿಐ ಹೆಸರಿನಲ್ಲಿ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ. ಇದೆಲ್ಲಾ ವದಂತಿ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ