AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ 'ಟೆಂಪಲ್' ಹೆಲ್ತ್-ಟೆಕ್ ಸಾಧನವು ವೈದ್ಯಕೀಯ ವಲಯದಲ್ಲಿ ವಿವಾದ ಸೃಷ್ಟಿಸಿದೆ. ರೂ 85,000 ಬೆಲೆಯ ಈ ಸಾಧನವನ್ನು ವೈದ್ಯರು "ವೈಜ್ಞಾನಿಕ ವಂಚನೆ" ಎಂದು ಆರೋಪಿಸಿದ್ದು, ಕ್ಲಿನಿಕಲ್ ಸಾಕ್ಷ್ಯಗಳ ಕೊರತೆ ಪ್ರಶ್ನಿಸಿದ್ದಾರೆ. ಗೋಯಲ್ ಟೆಂಪಲ್ ವೈದ್ಯಕೀಯ ಸಾಧನವಲ್ಲ, ಫಿಟ್‌ನೆಸ್ ಟ್ರ್ಯಾಕರ್ ಎಂದು ಸಮರ್ಥಿಸಿಕೊಂಡಿದ್ದಾರೆ. ಮೆದುಳಿನ ರಕ್ತಸಂಚಾರ, ಮೆಟಬಾಲಿಕ್ ವೆಚ್ಚ ಅಳೆಯುವ ಫೀಚರ್ಸ್ ಕುರಿತು ತೀವ್ರ ಚರ್ಚೆ ನಡೆದಿದೆ.

ಜೊಮಾಟೊ ಸಂಸ್ಥಾಪಕರ ‘ಟೆಂಪಲ್’ ಸುತ್ತ ವಿವಾದ; ವೈದ್ಯರ ಆಕ್ಷೇಪಣೆಗಳು, ದೀಪಿಂದರ್ ಗೋಯಲ್ ಅವರ ಪ್ರತಿಕ್ರಿಯೆ
ದೀಪಿಂದರ್ ಗೋಯಲ್ ಅವರ ಟೆಂಪಲ್ ಸಾಧನImage Credit source: X user @deepigoyal
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2026 | 12:11 PM

Share

ನವದೆಹಲಿ, ನವೆಂಬರ್ 8: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಹೆಲ್ತ್-ಟೆಕ್ ಸಂಸ್ಥೆಯು ಟೆಂಪಲ್ ಎನ್ನುವ ಸಾಧನವೊಂದನ್ನು ಪರಿಚಯಿಸಿದೆ. 85,000 ರೂ ಬೆಲೆಯ ಈ ಸಾಧನವು ಈಗಾಗಲೇ ಚಾಲ್ತಿಯಲ್ಲಿರುವ ಬೇರೆ ಬೇರೆ ಕಂಪನಿಗಳ ಸಾಧನಗಳಿಗಿಂತ ಬಹಳ ಹೆಚ್ಚಿನ ಬೆಲೆ ಹೊಂದಿದೆ. ಆದರೆ, ಫಿಟ್ನೆಸ್ ಟ್ರ್ಯಾಕರ್ ಮಾತ್ರವಲ್ಲ, ಇನ್ನೂ ಹೆಚ್ಚಿನ ಗಂಭೀರವಾದ ಮತ್ತು ಉಪಯುಕ್ತವಾದ ಫೀಚರ್ಸ್ ಅನ್ನು ಟೆಂಪಲ್ ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಒಂದು ವರ್ಗದ ವೈದ್ಯಕೀಯ ಸಮುದಾಯವು ಟೆಂಪಲ್​ನ ಕೆಲ ಫೀಚರ್ಸ್ ಮತ್ತು ದುಬಾರಿ ಬೆಲೆಯನ್ನು ಪ್ರಶ್ನಿಸಿದೆ. ಇದು ಈಗ ಟೆಂಪಲ್ ಕಂಪನಿ ಸಂಸ್ಥಾಪಕ ದೀಪಿಂದರ್ ಗೋಯಲ್ ಮತ್ತು ಕೆಲ ವೈದ್ಯರ ಮಧ್ಯೆ ಏಟು ತಿರುಗೇಟು ಎನ್ನುವಂತಹ ಹೇಳಿಕೆ ಪ್ರತಿಹೇಳಿಕೆಗಳು ಬರುತ್ತಿವೆ. ಆನ್​ಲೈನ್​ಲಲ್ಲಿ ಚರ್ಚೆಗಳು ನಡೆದಿವೆ.

ಪ್ರಖ್ಯಾತ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ (TheLiverDoc) ಸೇರಿದಂತೆ ಹಲವು ವೈದ್ಯರು ಈ ಸಾಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಡಾ. ಲಿವರ್‌ಡಾಕ್ ಅವರು, “ಹಣೆಯ ಮೇಲ್ಭಾಗದ ರಕ್ತನಾಳಗಳ ಚಲನೆಯನ್ನು ಅಳೆದು ಮೆದುಳಿನ ಆಂತರಿಕ ರಕ್ತಸಂಚಾರವನ್ನು (Cerebral Blood Flow) ಕಂಡುಹಿಡಿಯಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಪೀರ್-ರಿವ್ಯೂಡ್ ವೈಜ್ಞಾನಿಕ ಆಧಾರಗಳಿಲ್ಲ. ಇದು ಸೈಂಟಿಫಿಕ್ ಫ್ರಾಡ್ (ವಿಜ್ಞಾನದ ಹೆಸರಿನ ವಂಚನೆ)” ಎಂದು ಆರೋಪಿಸಿದ್ದಾರೆ.

ಎಐಐಎಂಎಸ್ (AIIMS) ವೈದ್ಯರು ಸೇರಿದಂತೆ ನರರೋಗ ತಜ್ಞರು, ಕ್ಲಿನಿಕಲ್ ಸಾಕ್ಷ್ಯಗಳಿಲ್ಲದೆ ಪ್ರಮುಖ ನರರೋಗ ಅಥವಾ ಜೈವಿಕ ವಯಸ್ಸಾಗುವಿಕೆಯ ಮುನ್ಸೂಚನೆ ನೀಡುವುದು ಅಸಾಧ್ಯ ಎಂದು ಎಚ್ಚರಿಸಿದ್ದಾರೆ. ಲಿವರ್​ಡಾಕ್ ಅವರಂತೂ ಟೆಂಪಲ್ ಸಾಧನವನ್ನು ಒಂದು ಸ್ಕ್ಯಾಮ್ ಎಂದು ಕರೆದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಹಳೆಯ ಫೋನ್‌ಗಳಲ್ಲಿ ಬ್ಯಾಟರಿ ಉಬ್ಬುವುದೇಕೆ? ಇದು ಎಷ್ಟು ಅಪಾಯಕಾರಿ?

ದೀಪಿಂದರ್ ಗೋಯಲ್ ಪ್ರತಿಕ್ರಿಯೆಗಳು

ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ವಿವಾದ ಬಿಸಿಯೇರಿದಾಗ ದೀಪಿಂದರ್ ಗೋಯಲ್ ತೀವ್ರವಾಗಿ ತಿರುಗೇಟು ನೀಡಿದರು. ವೈದ್ಯಕೀಯ ಸಮುದಾಯವು ಸುಮ್ಮನೆ ಆಕ್ರೋಶ ಹೊರಹಾಕುತ್ತಿದೆ ಎಂದು ಒಂದು ವಿಸ್ತೃತ ಪೋಸ್ಟ್ ಮೂಲಕ ಬೇಸರ ಹೊರಹಾಕಿದರು.

ವೈದ್ಯರ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸುತ್ತಾ, “ನಮ್ಮ ವಿಜ್ಞಾನದ ಬಗ್ಗೆ ನಮಗೆ ನಂಬುಗೆ ಇದೆ. ಈ ಉತ್ಪನ್ನವು ಅದರ ಬೆಲೆಗೆ ಯೋಗ್ಯವಾಗಿದೆ ಎನಿಸುತ್ತದೆ. ಸಾರ್ವಜನಿಕರು ಇದರ ಯೋಗ್ಯತೆಯನ್ನು ನಿರ್ಧರಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದರು.

ದೀಪಿಂದರ್ ಗೋಯಲ್ ಅವರ ಪೋಸ್ಟ್

ಟೆಂಪಲ್ ಸಾಧನದ ಮೂಲಕ ತಮಗೆ ಹಣ ಮಾಡುವ ಉದ್ದೇಶ ಇಲ್ಲ. ತಮ್ಮ ಬಳಿ ಹಲವು ತಲೆಮಾರುಗಳಿಗೆ ಆಗುಷ್ಟು ಹಣ ಇದೆ. ಈ ಸಾಧನವನ್ನು ತಯಾರಿಸಲೆಂದು ತಾನು ಜೊಮಾಟೊವನ್ನು ಬಿಟ್ಟು ಬಂದಿದ್ದೇನೆ. ಇದರ ಆರ್ ಅಂಡ್ ಡಿ ಗಾಗಿ ಸಾಕಷ್ಟು ಹಣ ವ್ಯಯಿಸಿದ್ದೇವೆ. ಟೆಂಪಲ್ ಸಾಧನ ಚೆನ್ನಾಗಿಲ್ಲದಿದ್ದರೆ ಅಥವಾ ಉಪಯುಕ್ತವಿಲ್ಲದಿದ್ದರೆ ಜನರು ಖರೀದಿಸುವುದಿಲ್ಲ. ಕೆಲವರು ಆರೋಪಿಸುವಂತೆ ಇದು ಯಾವುದೋ ಸ್ಕ್ಯಾಮ್ ಅಲ್ಲ ಎಂದು ದೀಪಿಂದರ್ ಗೋಯಲ್ ಹೇಳಿದರು.

ಇದಕ್ಕೆ ಲಿವರ್​ಡಾಕ್ ಹಾಗೂ ಇತರ ಕೆಲ ವೈದ್ಯರು ಆನ್​ಲೈನ್​ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆಂಪಲ್​ನದ್ದು ಕೆಟ್ಟ ವಿಜ್ಞಾನ. ಯಾವುದೇ ಕ್ಲಿನಿಕಲ್ ಟ್ರಯಲ್ ನಡೆದಿಲ್ಲ. ಇದು ವಂಚನೆ. ದೀಪಿಂದರ್ ಮತ್ತವರ ತಂಡ ಎಷ್ಟು ದಿನ ಜನರನ್ನು ಯಾಮಾರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಲಿವರ್ ಡಾಕ್ ಅವರ ಪೋಸ್ಟ್

ಇದರ ಮಧ್ಯೆ ದೀಪಿಂದರ್ ಗೋಯಲ್ ಅವರು ವೈದ್ಯರಿಗೆ ಕ್ಷಮೆಯಾಚಿಸಿದ್ದಾರೆ. “ವೈದ್ಯರನ್ನು ಅಥವಾ ವೈದ್ಯಕೀಯ ರಂಗವನ್ನು ಕೀಳಾಗಿ ಕಾಣುವುದು ನನ್ನ ಉದ್ದೇಶವಾಗಿರಲಿಲ್ಲ. ವೈದ್ಯರ ಕಾಳಜಿಗಳನ್ನು ಗೌರವಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಲಿವರ್​ಡಾಕ್ ಅವರ ಪೋಸ್ಟ್

ಉಪಕರಣದ ಸಮರ್ಥನೆ: ಕ್ಷಮೆ ಕೋರಿದ ನಂತರವೂ ಉಪಕರಣದ ವಿಜ್ಞಾನವನ್ನು ಗೋಯಲ್ ಬಲವಾಗಿ ಸಮರ್ಥಿಸಿಕೊಂಡರು. “ಟೆಂಪಲ್ ಎಂಬುದು ವೈದ್ಯಕೀಯ ಸಾಧನವಲ್ಲ (Not a medical device), ಇದು ಕೇವಲ ಫಿಟ್‌ನೆಸ್ ಮತ್ತು ವೆಲ್‌ನೆಸ್ (Fitness & Wellness) ಟ್ರ್ಯಾಕರ್. ಆದ್ದರಿಂದ ಇದಕ್ಕೆ ಕ್ಲಿನಿಕಲ್ ಟ್ರಯಲ್ ನಿಯಮಗಳು ಅನ್ವಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಡಾ. ರಿಷಬ್ ಜೈನ್ ಅವರ ಪೋಸ್ಟ್

ದೀಪಿಂದರ್ ಅವರ ಕ್ಷಮೆಯಾಚನೆಯ ಪೋಸ್ಟ್

ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ

‘ಟೆಂಪಲ್’ ಉಪಕರಣದ ಪ್ರಮುಖ ಫೀಚರ್ಸ್

ಕಂಪನಿ ಹೇಳಿಕೊಂಡ ಪ್ರಕಾರ ಟೆಂಪಲ್ ಸಾಧನ ಹಾಗು ಅದರಲ್ಲಿರುವ ಫೀಚರ್ಸ್ ಆಕರ್ಷಕ ಎನಿಸುತ್ತವೆ. ಈ ಸಾಧನವನ್ನು ಕಣ್ಣು ಮತ್ತು ಕಿವಿ ಮಧ್ಯೆ ಇರುವ ಹಣೆ ಭಾಗದಲ್ಲಿ ಅಂಟಿಸಬಹುದು. ಇದರ ಪ್ರಮುಖ ಫೀಚರ್ಸ್ ಇಂತಿವೆ:

  • ರೂಮ್-ಡೆಫ್ (Room-Deaf) ವಾಯ್ಸ್ ಎಐ ಕಂಪಾನಿಯನ್: ಸಾಮಾನ್ಯ ಸ್ಮಾರ್ಟ್‌ಫೋನ್ ಅಥವಾ ಇಯರ್‌ಫೋನ್‌ಗಳಲ್ಲಿರುವಂತೆ ಇದರಲ್ಲಿ ಮೈಕ್ರೋಫೋನ್ (Microphone) ಇರುವುದಿಲ್ಲ. ಬದಲಿಗೆ, ಬಳಕೆದಾರರು ಮಾತನಾಡುವಾಗ ಉಂಟಾಗುವ ಮೂಳೆಯ ಶಬ್ದದ ಕಂಪನಗಳನ್ನು (Vibrations) ಸಂವೇದಕಗಳ (Sensors) ಮೂಲಕ ಗ್ರಹಿಸುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಶಬ್ದಗಳು ಅಥವಾ ಇತರರ ಧ್ವನಿಯನ್ನು ಕಡೆಗಣಿಸಿ (Room-Deaf), ಕೇವಲ ಧರಿಸಿದ ವ್ಯಕ್ತಿಯ ಧ್ವನಿಯನ್ನು ಮಾತ್ರ ನೆಟ್‌ವರ್ಕ್ ಗ್ರಹಿಸುತ್ತದೆ.
  • ಎಂಟ್ರೋಪಿ ಬಯೋಮಾರ್ಕರ್: ಮಾನವ ದೇಹವು ಜೀವಂತವಾಗಿರಲು ಅನುಭವಿಸುವ ನೈಜ-ಸಮಯದ ಪಚನ ವೆಚ್ಚವನ್ನು (Metabolic cost of being alive) ಇದು 1 ರಿಂದ 250 ರ ಅಳತೆಯಲ್ಲಿ (Scale) ಲೆಕ್ಕಹಾಕುತ್ತದೆ. ಬಳಕೆದಾರರು ತೀವ್ರ ವ್ಯಾಯಾಮದಲ್ಲಿದ್ದಾಗ ಹೆಚ್ಚಿನ ಅಂಕಗಳನ್ನು ಮತ್ತು ಆಳವಾದ ಧ್ಯಾನ/ವಿಶ್ರಾಂತಿಯಲ್ಲಿದ್ದಾಗ ಕಡಿಮೆ ಅಂಕಗಳನ್ನು ಇದು ತೋರಿಸುತ್ತದೆ.
  • ಬ್ರೈನ್-ಫ್ಲೋ ಇಂಡೆಕ್ಸ್ (BrainFlow Index): ಹಣೆಯ ಮೇಲ್ಭಾಗದಲ್ಲಿ ಆಪ್ಟಿಕಲ್ ಸೆನ್ಸಾರ್ (Optical Sensor) ಬಳಸಿ, ಮೆದುಳಿನ ರಕ್ತಸಂಚಾರದಲ್ಲಾಗುವ ಪ್ರಾದೇಶಿಕ ಬದಲಾವಣೆಗಳನ್ನು ಮತ್ತು ಆಕ್ಸಿಜನ್ ಮಟ್ಟವನ್ನು ಆಪ್ಟಿಕಲ್ ಮಾಪನದ ಮೂಲಕ ಟ್ರ್ಯಾಕ್ ಮಾಡುತ್ತದೆ.
  • ಮೊಮೆಂಟಮ್ ಮೇಟ್ರಿಕ್ (Momentum Metric): ಹೃದಯದ ಬಡಿತ, ದೇಹದ ಚಟುವಟಿಕೆ ಮತ್ತು ಎಂಟ್ರೋಪಿ ದತ್ತಾಂಶವನ್ನು ಸಂಯೋಜಿಸಿ, ಬಳಕೆದಾರರ ದಿನನಿತ್ಯದ ಒಟ್ಟಾರೆ ಶಾರೀರಿಕ ಪ್ರದರ್ಶನ ಮತ್ತು ವಿಶ್ರಾಂತಿಯ ಅಗತ್ಯತೆಯನ್ನು ‘ಮೊಮೆಂಟಮ್’ ರೂಪದಲ್ಲಿ ಪ್ರದರ್ಶಿಸುತ್ತದೆ.

ದೀಪಿಂದರ್ ಗೋಯಲ್ ಅವರು ತಮ್ಮ ಒಂದು ಪೋಸ್ಟ್​ನಲ್ಲಿ, ಟೆಂಪಲ್ ಸಾಧನದಲ್ಲಿ ಇನ್ನೂ ಬಹಿರಂಗಪಡಿಸದೇ ಇರುವ ಅಚ್ಚರಿಯ ಕೆಲ ಫೀಚರ್ಸ್ ಇವೆ ಎಂದಿದ್ದಾರೆ. ಇವೆಲ್ಲವೂ ಅದು ಮಾರುಕಟ್ಟೆಗೆ ಬಂದ ಬಳಿಕ ತಿಳಿಯಬಹುದು. ಸದ್ಯ, ನವೆಂಬರ್ 1ರಿಂದ ಪ್ರೀ ಆರ್ಡರ್ ಅವಕಾಶ ತೆರೆಯಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು