ಆರ್​ಬಿಐ ಹರಸಾಹಸ ಪಟ್ಟರೂ ನಿಲ್ಲದ ರುಪಾಯಿ ಮೌಲ್ಯ ಕುಸಿತ; ಮೊದಲ ಬಾರಿಗೆ 95ರ ಮೈಲಿಗಲ್ಲು ದಾಟಿದ ಭಾರತೀಯ ಕರೆನ್ಸಿ

Rupee plunges below 95 mark against US dollar for first time: ಅಮೆರಿಕದ ಡಾಲರ್ ಕರೆನ್ಸಿ ಎದುರು ರುಪಾಯಿ ಮೌಲ್ಯ 95.21ರ ಮಟ್ಟಕ್ಕೆ ಕುಸಿದಿದೆ. ರುಪಾಯಿ ಈ 95ರ ಮೈಲಿಗಲ್ಲು ದಾಟಿದ್ದು ಇದೇ ಮೊದಲು. ಈಕ್ವಿಟಿ ಮಾರುಕಟ್ಟೆಯಿಂದ ಫಾರೀನ್ ಪೋರ್ಟ್​​ಫೋಲಿಯೋ ಹೂಡಿಕೆಗಳು ಸತತವಾಗಿ ನಿರ್ಗಮಿಸುತ್ತಿರುವುದು ರುಪಾಯಿಯನ್ನು ದುರ್ಬಲಗೊಳಿಸುತ್ತಿದೆ. ತೈಲ ಬೆಲೆ ಏರಿಕೆಯೂ ಕೂಡ ರುಪಾಯಿಗೆ ಹಿನ್ನಡೆ ತಂದಿದೆ.

ಆರ್​ಬಿಐ ಹರಸಾಹಸ ಪಟ್ಟರೂ ನಿಲ್ಲದ ರುಪಾಯಿ ಮೌಲ್ಯ ಕುಸಿತ; ಮೊದಲ ಬಾರಿಗೆ 95ರ ಮೈಲಿಗಲ್ಲು ದಾಟಿದ ಭಾರತೀಯ ಕರೆನ್ಸಿ
ರುಪಾಯಿ

Updated on: Mar 30, 2026 | 5:24 PM

ನವದೆಹಲಿ, ಮಾರ್ಚ್ 30: ಭಾರತದ ಕರೆನ್ಸಿಯಾದ ರುಪಾಯಿ ಅಮೆರಿಕದ ಡಾಲರ್ (US dollar vs Indian Rupee) ಎದುರು ಕುಸಿತ ಕಾಣುವುದು ಮುಂದುವರಿದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರುಪಾಯಿ ಮೌಲ್ಯವು 95ರ ಗಡಿದಾಟಿ ಕುಸಿತ ಕಂಡಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್ ಎದುರು ರುಪಾಯಿ 95.21 ಮಟ್ಟಕ್ಕೆ ಕುಸಿಯಿತು. ಭಾರತದ ಕರೆನ್ಸಿ ಮೌಲ್ಯದ ಕುಸಿತವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಕೈಗೊಂಡ ಕೆಲ ಕ್ರಮಗಳು ನಿರೀಕ್ಷಿತ ಫಲ ಕೊಡಲಿಲ್ಲ.

ವಿದೇಶೀ ಹೂಡಿಕೆಗಳ ಹೊರಹರಿವು ಸತತವಾಗಿ ನಡೆಯುತ್ತಿರುವುದು ರುಪಾಯಿ ಮೇಲೆ ಒತ್ತಡ ಹಾಕಿದೆ. ಬ್ಯಾಂಕುಗಳ ವಿದೇಶೀ ವಿನಿಮಯ ಸ್ಥಾನಗಳಿಗೆ ಆರ್​ಬಿಐ ಮಿತಿ ಹಾಕಿದರೂ ಅದರಿಂದ ರುಪಾಯಿ ಮೌಲ್ಯ ಕುಸಿತ ತಡೆಯಲು ಆಗಲಿಲ್ಲ.

ಇದನ್ನೂ ಓದಿ: ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ರುಪಾಯಿ ಕುಸಿತಕ್ಕೆ ಏನು ಕಾರಣಗಳು?

ಹಿಂದಿನ ಪ್ಯಾರಾದಲ್ಲೇ ಹೇಳಿದಂತೆ, ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳ ಹೊರಹರಿವು ಮುಂದುವರಿದಿರುವುದು ರುಪಾಯಿ ಕುಸಿತಕ್ಕೆ ಕಾರಣಗಳಲ್ಲಿ ಒಂದು. ಹಾಗೆಯೇ, ತೈಲ ಬೆಲೆ ಹೆಚ್ಚಿರುವುದರಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಕರೆನ್ಸಿ ಮೌಲ್ಯ ಕುಸಿತ, ಆಮದು ವೆಚ್ಚದ ಏರಿಕೆ, ಇವೆರಡು ಕೂಡ ರುಪಾಯಿ ಮೇಲೆ ಡಬಲ್ ಎಫೆಕ್ಟ್ ಕೊಟ್ಟಿದೆ.

ಕಚ್ಛಾ ತೈಲ ಬೆಲೆ ಅಧಿಕ ಮಟ್ಟದಲ್ಲಿರುವುದು ಭಾರತದ ಆರ್ಥಿಕತೆಗೂ ಹಿನ್ನಡೆ ತರುವ ಸಾಧ್ಯತೆ ಹೊಂದಿದೆ. ಇವೆಲ್ಲವೂ ಕೂಡ ಈಕ್ವಿಟಿ ಮಾರುಕಟ್ಟೆಯನ್ನೂ ಕೆಳಗೆ ನೂಕುತ್ತಿವೆ.

ಇದನ್ನೂ ಓದಿ: ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ

ಡಾಲರ್ ಎದುರು ರುಪಾಯಿ ಕಂಡಿರುವ ಕುಸಿತವು 10 ವರ್ಷದ ಬಾಂಡ್ ಯೀಲ್ಡ್ (Bond Yield) ಅನ್ನು ಹೆಚ್ಚಿಸಿದೆ. ಬಾಂಡ್ ಯೀಲ್ಡ್ ಶೇ. 7ರ ಮಟ್ಟ ದಾಟಿದೆ. 2024ರ ಜುಲೈ ನಂತರ, ಅಂದರೆ ಎರಡು ವರ್ಷದಲ್ಲಿ ಇದು ಅತಿಹೆಚ್ಚಿನ ಬಾಂಡ್ ಯೀಲ್ಡ್ ಮಟ್ಟವಾಗಿದೆ. ಆರ್​ಬಿಐ ತನ್ನ ಮುಂದಿನ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಹೆಚ್ಚಿಸುವ ಒತ್ತಡಕ್ಕೆ ಸಿಲುಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us