AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ

HDFC bank, Bandhan bank and Punjab National Bank's new ATM rules from April 1st: ಹೊಸ ಹಣಕಾಸು ವರ್ಷದಿಂದ (2026ರ ಏಪ್ರಿಲ್ 1ರಿಂದ) ವಿವಿಧ ಬ್ಯಾಂಕುಗಳು ತಮ್ಮ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ ಮಾಡಿವೆ. ಎಚ್​ಡಿಎಫ್​ಸಿ ಬ್ಯಾಂಕ್ ಎಟಿಎಂಗಳಲ್ಲಿ ಯುಪಿಐ ಬಳಸಿ ಕ್ಯಾಷ್ ವಿತ್​ಡ್ರಾ ಮಾಡಿದರೆ ಅದನ್ನು ಒಂದು ಎಟಿಎಂ ಟ್ರಾನ್ಸಾಕ್ಷನ್ ಎಂದು ಪರಿಗಣಿಸಲಾಗುತ್ತದೆ. ಪಿಎನ್​ಬಿಯಲ್ಲಿ ದಿನದ ಎಟಿಎಂ ಕ್ಯಾಷ್ ವಿತ್​ಡ್ರಾಯಲ್ ಮಿತಿಯನ್ನು ಕಡಿಮೆ ಮಾಡಲಾಗಿದೆ.

ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ
ಯುಪಿಐ ಆಧಾರಿತ ಎಟಿಎಂ ವಿತ್​ಡ್ರಾಯಲ್Image Credit source: Lankasri
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 30, 2026 | 1:30 PM

Share

ನವದೆಹಲಿ, ಮಾರ್ಚ್ 30: ಎಚ್​ಡಿಎಫ್​ಸಿ ಬ್ಯಾಂಕ್, ಬಂಧನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಹೊಸ ಹಣಕಾಸು ವರ್ಷದಿಂದ ಎಟಿಎಂ ಬಳಕೆಯ ನಿಯಮಗಳಲ್ಲಿ (ATM transaction rules) ಬದಲಾವಣೆ ಮಾಡಿವೆ. ಯುಪಿಐ ಆಧಾರಿತ ಎಟಿಎಂ ವಿತ್​ಡ್ರಾಯಲ್, ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಇತ್ಯಾದಿ ನಿಯಮಗಳ ಪರಿಷ್ಕರಣೆ ಮಾಡಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಚಾಲನೆಗೆ ಬರಲಿವೆ.

ಎಚ್​ಡಿಎಫ್​ಸಿ ಬ್ಯಾಂಕ್ ಎಟಿಎಂ ನಿಯಮಗಳು

ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಹಲವು ಎಟಿಎಂಗಳಲ್ಲಿ ಯುಪಿಐ ಆಧಾರಿತ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ನೀಡುತ್ತದೆ. ಯುಪಿಐ ಮೂಲಕ ಎಟಿಎಂನಲ್ಲಿ ಮಾಡಲಾಗುವ ಪ್ರತೀ ಟ್ರಾನ್ಸಾಕ್ಷನ್ ಅನ್ನೂ ಮಾಮೂಲಿಯ ಎಟಿಎಂ ಟ್ರಾನ್ಸಾಕ್ಷನ್ ಎಂದೇ ಪರಿಗಣಿಸಲಾಗುತ್ತದೆ. ಅಂದರೆ, ಎಟಿಎಂ ಫ್ರೀ ಯೂಸೇಜ್ ಲಿಮಿಟ್​ ಲೆಕ್ಕಾಚಾರಕ್ಕೆ ಇದು ಬರುತ್ತದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಎಚ್​ಡಿಎಫ್​ಸಿ ಬ್ಯಾಂಕ್​ನ ಗ್ರಾಹಕರು ಆ ಬ್ಯಾಂಕ್​ನ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಕ್ಯಾಷ್ ವಿತ್​ಡ್ರಾ ಮಾಡಿದರೆ ಶುಲ್ಕ ಇರುವುದಿಲ್ಲ. ನೀವು ಎಟಿಎಂ ಕಾರ್ಡ್ ಬಳಸಿ ತಿಂಗಳಿಗೆ ಐದು ಬಾರಿ ಕ್ಯಾಷ್ ವಿತ್​ಡ್ರಾ ಮಾಡುತ್ತೀರಿ. ನಂತರ ಯುಪಿಐ ಬಳಸಿ ಎಟಿಎಂನಲ್ಲಿ ಒಮ್ಮೆ ಕ್ಯಾಷ್ ವಿತ್​ಡ್ರಾ ಮಾಡುತ್ತೀರಿ. ಆಗ ನಿಮ್ಮ ಎಟಿಎಂ ಟ್ರಾನ್ಸಾಕ್ಷನ್ ಸಂಖ್ಯೆ 6ಕ್ಕೆ ಏರುತ್ತದೆ. ಇದು ಐದು ಉಚಿತ ಟ್ರಾನ್ಸಾಕ್ಷನ್ ಮಿತಿ ಮೀರಿದಂತಾಗುತ್ತದೆ. ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್​ಗೆ 23 ರೂ ಶುಲ್ಕ ಇರುತ್ತದೆ.

ಬಂಧನ್ ಬ್ಯಾಂಕ್ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಪರಿಷ್ಕರಣೆ

ಬಂಧನ್ ಬ್ಯಾಂಕ್​ನ ಎಟಿಎಂಗಳಲ್ಲಿ ಅದರ ಗ್ರಾಹಕರು ತಿಂಗಳಿಗೆ ಐದು ಬಾರಿ ಉಚಿತವಾಗಿ ಹಣದ ಟ್ರಾನ್ಸಾಕ್ಷನ್ ಮಾಡಬಹುದು. ಹಣಕಾಸು ಅಲ್ಲದ ಟ್ರಾನ್ಸಾಕ್ಷನ್​ಗಳಿಗೆ ಮಿತಿ ಇಲ್ಲ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಆರು ಮೆಟ್ರೋ ನಗರಗಳಲ್ಲಿ ಬೇರೆ ಬ್ಯಾಂಕ್ ಎಟಿಎಂಗಳಾದರೆ ಮೂರು ಉಚಿತ ಟ್ರಾನ್ಸಾಕ್ಷನ್​ಗೆ ಅವಕಾಶ ಇದೆ. ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ಟ್ರಾನ್ಸಾಕ್ಷನ್​ಗೆ ಅವಕಾಶ ಇದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ವಿತ್​ಡ್ರಾಯಲ್ ಮಿತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಬೇರೆ ಬೇರೆ ಡೆಬಿಟ್ ಕಾರ್ಡ್​ಗಳಿಗೆ ದಿನದ ವಿತ್​ಡ್ರಾಯಲ್ ಮಿತಿಯಲ್ಲಿ ಬದಲಾವಣೆ ಮಾಡಿದೆ. ಅದರ ಪ್ಲಾಟಿನಂ, ಗೋಲ್ಡ್ ಮತ್ತು ಬ್ಯುಸಿನೆಸ್ ಡೆಬಿಟ್ ಕಾರ್ಡ್​ಗಳಿಂದ ಎಟಿಎಂಗಳಲ್ಲಿ ಕ್ಯಾಷ್ ವಿತ್​ಡ್ರಾ ಮಾಡುವ ಮಿತಿಯನ್ನು ಒಂದು ಲಕ್ಷ ರೂನಿಂದ 50,000 ರೂಗೆ ಇಳಿಸಿದೆ.

ಪಿಎನ್​ಬಿಯ ಸಿಗ್ನೇಚರ್ ಡೆಬಿಟ್ ಕಾರ್ಡ್​ಗಳಾದರೆ ದಿನದ ವಿತ್​ಡ್ರಾಯಲ್ ಮಿತಿ 1.5 ಲಕ್ಷ ರೂನಿಂದ 75,000 ರೂಗೆ ಇಳಿಯಲಿದೆ. ಮೇಲೆ ತಿಳಿಸಿದ ವಿವಿಧ ಬ್ಯಾಂಕುಗಳ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಏಪ್ರಿಲ್ 1ರಿಂದ ಚಾಲನೆಗೆ ಬರಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More