AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

Chinese CCTV cameras may face ban in India from 2026 April 1st: ಸರ್ಕಾರ ನಿಗದಿ ಮಾಡಿರುವ ಹೊಸ ಸೆಕ್ಯೂರಿಟಿ ಮಾನದಂಡಗಳನ್ನು ಅಳವಡಿಸದೇ ಇರುವ ಸಿಸಿಟಿವಿ ಕ್ಯಾಮರಾಗಳಿಗೆ ಭಾರತದ ಮಾರುಕಟ್ಟೆ ಬಾಗಿಲು ಮುಚ್ಚಲಿದೆ. ಹೈಕ್​ವಿಶನ್ ಇತ್ಯಾದಿ ಚೀನೀ ಸಿಸಿಟಿವಿ ತಯಾರಕರಿಗೆ ಭಾರತದಲ್ಲಿ ನಿರ್ಬಂಧ ಇರಲಿದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಏಪ್ರಿಲ್ 1ರಿಂದ ಇದು ಜಾರಿಯಾಗುತ್ತದೆ.

ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ
ಸಿಸಿಟಿವಿ ಕ್ಯಾಮರಾImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 30, 2026 | 3:26 PM

Share

ನವದೆಹಲಿ, ಮಾರ್ಚ್ 30: ಪ್ರಮಾಣೀಕೃತವಲ್ಲದ ಸಿಸಿಟಿವಿ ಕ್ಯಾಮರಾಗಳ ಮಾರಾಟವನ್ನು ಭಾರತ ಏಪ್ರಿಲ್ 1ರಿಂದ ನಿರ್ಬಂಧಿಸಿದೆ. ಇದರೊಂದಿಗೆ ಚೀನೀ ಮೂಲದ ಸಿಸಿ ಕ್ಯಾಮರಾಗಳಿಗೆ (Chinese origin CCTV cameras) ಭಾರತದಲ್ಲಿ ಮಾರಾಟ ಸಾಧ್ಯವಾಗದೇ ಹೋಗಬಹುದು. ಭಾರತದ ಮಾರುಕಟ್ಟೆಯಲ್ಲಿ ಉಪಸ್ಥಿತಿ ಹೊಂದಿರುವ ಹೈಕ್​ವಿಶನ್ (HikVision), ಡಹುವಾ ಟೆಕ್ನಾಲಜಿ (Dahua Technology), ಟಿಪಿ ಲಿಂಕ್ (TP-Link) ಇತ್ಯಾದಿ ಚೀನೀ ಬ್ರ್ಯಾಂಡ್ ಈ ಕ್ರಮದಿಂದ ಭಾರತದ ಸ್ಥಳೀಯ ಸಿಸಿಟಿವಿ ಕ್ಯಾಮರಾ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಸಿಸಿಟಿವಿ ಕ್ಯಾಮರಾದಲ್ಲಿ ಹೇಗೆ ನಿರ್ಬಂಧ?

ಸರ್ಕಾರವು ಸಿಸಿಟಿವಿ ಕ್ಯಾಮರಾ ಸಿಸ್ಟಂಗಳಿಗೆ ಹೊಸ ಸರ್ಟಿಫಿಕೇಶನ್ ನೀತಿ ರೂಪಿಸಿದೆ. ಅಂದರೆ, ಸರ್ಟಿಫೈಡ್ ಕ್ಯಾಮೆರಾಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಪ್ರವೇಶ ಸಿಗುತ್ತದೆ. ಚೀನಾ ನಿರ್ಮಿತ ಚಿಪ್​ಸೆಟ್​ಗಳನ್ನು ಬಳಸಿ ತಯಾರಿಸಲಾಗುವ ಸಿಸಿಟಿವಿ ಸಾಧನಗಳಿಗೆ ಸರ್ಟಿಫಿಕೇಶನ್ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ, ಚೀನಾ ಮೂಲದ ಸಿಸಿಟಿವಿ ಕ್ಯಾಮರಾ ಮತ್ತು ಸೆಕ್ಯೂರಿಟಿ ಸಿಸ್ಟಂಗಳು ಭಾರತದಲ್ಲಿ ನಿರ್ಬಂಧಿತಗೊಳ್ಳಲಿವೆ.

ಇದನ್ನೂ ಓದಿ: ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ

ಚೀನಾ ಸಿಸ್ಟಂಗಳ ಮೇಲೆ ಯಾಕೆ ಕ್ರಮ?

ಚೀನಾ ಮಾತ್ರವೇ ಅಲ್ಲ, ಯಾವುದೇ ವಿದೇಶೀ ನಿರ್ಮಿತ ಚಿಪ್​ಸೆಟ್ ಇತ್ಯಾದಿ ಬಳಸಿ ತಯಾರಾಗುವ ಸೆಕ್ಯೂರಿಟಿ ಸಿಸ್ಟಂಗಳಿಗೆ ಸರ್ಟಿಫಿಕೇಶನ್ ಸಿಗುವುದಿಲ್ಲ. ಸಿಸಿಟಿವಿ ಕ್ಯಾಮರಾಗಳು ಭದ್ರತಾ ದೃಷ್ಟಿಯಿಂದ ಬಹಳ ಮುಖ್ಯವಾದ ಸಾಧನಗಳಾಗಿವೆ. ಏರ್​ಪೋರ್ಟ್, ಸರ್ಕಾರಿ ಕಚೇರಿ ಇತ್ಯಾದಿ ಬಹಳ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸುವ ಕ್ಯಾಮೆರಾಗಳು ತುಂಬಾ ಮುಖ್ಯವಾದ ದತ್ತಾಂಶವನ್ನು ಸೆರೆಹಿಡಿಯಬಲ್ಲುದು.

ಈ ಉಪಕರಣಗಳು ವಿದೇಶೀ ಮೂಲದ್ದಾಗಿದ್ದರೆ ಸೂಕ್ಷ್ಮ ಮಾಹಿತಿಯು ವಿದೇಶಗಳಿಗೆ ರವಾನೆಯಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ರಾಷ್ಟ್ರೀಯ ಭದ್ರತೆಗೆ ಬಹಳ ಅಪಾಯ ಇರುತ್ತದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಸರ್ಕಾರ ಈ ಹಿಂದೆಯೇ ಪ್ರಮಾಣೀಕೃತ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಪ್ರಮಾಣಪತ್ರ ಪಡೆಯಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಉದ್ಯಮಕ್ಕೆ ಎರಡು ವರ್ಷ ಕಾಲಾವಕಾಶ ಕೊಡಲಾಗಿತ್ತು. ಸಿಸಿಟಿವಿ ತಯಾರಕರು ಚಿಪ್​ಸೆಟ್ ಇತ್ಯಾದಿ ಪ್ರಮುಖ ಬಿಡಿಭಾಗಗಳು ಯಾವ ದೇಶದಿಂದ ಬಂದಿರುವಂಥವು ಎಂಬುದನ್ನು ಬಹಿರಂಗಪಡಿಸಬೇಕು; ಪ್ರಮಾಣಿತ ಲ್ಯಾಬ್​ಗಳಲ್ಲಿ ಈ ಸಾಧನಗಳ ಪರೀಕ್ಷೆಯಾಗಬೇಕು. ದೂರದಿಂದಲೇ ಇದನ್ನು ಅನಧಿಕೃತವಾಗಿ ನಿಭಾಯಿಸಲ್ಪಡುತ್ತಿಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಗಬೇಕು. ಇವೇ ಮುಂತಾದ ಮಾನದಂಡಗಳು ಸಿಸಿಟಿವಿ ಉತ್ಪನ್ನಗಳಿಗೆ ಇವೆ.

ಹೊಸ ನಿಯಮಗಳ ಅಡಿಯಲ್ಲಿ ಇಲ್ಲಿಯವರೆಗೆ ಸರ್ಕಾರವು 507 ಸಿಸಿಟಿವಿ ಕ್ಯಾಮರಾ ಮಾಡಲ್​ಗಳಿಗೆ ಸರ್ಟಿಫಿಕೇಶನ್ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Mon, 30 March 26

Follow Us