ಸ್ಟಾರ್ಟಪ್ಗೆ ಸರ್ಕಾರದಿಂದ 50 ಲಕ್ಷ ರೂವರೆಗೆ ಸೀಡ್ ಫಂಡಿಂಗ್; ಹಣ ಪಡೆಯುವ ಕ್ರಮ
Startup India seed funding: ಭಾರತ ಸರ್ಕಾರ ಸ್ಟಾರ್ಟಪ್ಗಳಿಗೆ ಉತ್ತೇಜಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಸ್ಟಾರ್ಟಪ್ ಇಂಡಿಯಾ ಪ್ರಮುಖವಾದುದು. ನೀವು ಸ್ಟಾರ್ಟಪ್ ಆರಂಭಿಸುತ್ತಿರುವಿರಾದರೆ ಸೀಡ್ ಫಂಡಿಂಗ್ ಹೇಗೆ ಪಡೆಯುವುದು ಎನ್ನುವ ಕ್ರಮಾವಳಿ ಇಲ್ಲಿದೆ. ಡಿಪಿಐಐಟಿ ಪ್ರಮಾಣಪತ್ರ ಪಡೆದ ಸ್ಟಾರ್ಟಪ್ಗಳಿಗೆ ಸೀಡ್ ಫಂಡಿಂಗ್ ನೀಡಲಾಗುತ್ತದೆ. ಇವುಗಳ ಮಾಹಿತಿ ಈ ಲೇಖನದಲ್ಲಿದೆ...
ನವದೆಹಲಿ, ನವೆಂಬರ್ 29: ದೇಶದಲ್ಲಿ ಆರ್ಥಿಕತೆ ವಿಸ್ತಾರವಾಗಿ ಬೆಳೆಯಲು ಸಣ್ಣ ಉದ್ದಿಮೆಗಳ ಅವಶ್ಯಕತೆ ಬಹಳ ಇದೆ. ಅದರಲ್ಲೂ ಸ್ಟಾರ್ಟಪ್ಗಳ ಪಾತ್ರ ಬಹಳ ಮಹತ್ವದ್ದು. ಇವುಗಳಿಗೆ ಉತ್ತೇಜಿಸಲು ಸರ್ಕಾರ ಕೆಲ ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಸ್ಟಾರ್ಟಪ್ ಇಂಡಿಯಾವೂ ಒಂದು. ಈ ಸ್ಟಾರ್ಟಪ್ ಇಂಡಿಯಾ ಯೋಜನೆಯಲ್ಲಿ ಸರ್ಕಾರದಿಂದ ಸೀಡ್ ಫಂಡಿಂಗ್ ಒದಗಿಸಲಾಗುತ್ತದೆ. ಅಂದರೆ, ನಿಮ್ಮ ಸ್ಟಾರ್ಟಪ್ಗೆ ಆರಂಭಿಕ ಬಂಡವಾಳ ಸಿಗುತ್ತದೆ. 50 ಲಕ್ಷ ರೂವರೆಗೆ ಸಾಲಕ್ಕೆ ಅವಕಾಶ ಇರುತ್ತದೆ. ಸಾಲಕ್ಕೆ ಬಡ್ಡಿಯೂ ಬಹಳ ಕಡಿಮೆ ಇದೆ.
ಪ್ರೀತೇಶ್ ಲಖಾನಿ ಎನ್ನುವ ವ್ಯಕ್ತಿಯೊಬ್ಬರು ತನ್ನ ಸ್ಟಾರ್ಟಪ್ಗೆ ಸರಕಾರದಿಂದ ಹೇಗೆ ಸಾಲ ಸಿಕ್ಕಿತು ಎನ್ನುವ ಪೂರ್ಣ ವಿವರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರಿಗೆ ಶೇ. 5ರ ವಾರ್ಷಿಕ ಬಡ್ಡಿದರದಲ್ಲಿ 30 ಲಕ್ಷ ರೂ ಸಾಲ ಸಿಕ್ಕಿದೆ. ಅಂದರೆ ತಿಂಗಳಿಗೆ ಅರ್ಧ ಪ್ರತಿಶತಕ್ಕಿಂತಲೂ ಕಡಿಮೆ ಬಡ್ಡಿ ಬಡ್ಡಿಯಲ್ಲಿ ಸಾಲ ಪ್ರಾಪ್ತವಾಗಿದೆ. 50 ಲಕ್ಷ ರೂ ಸಾಲಕ್ಕೆ ನೀವು ಒಂದು ವರ್ಷದಲ್ಲಿ ಕಟ್ಟುವ ಬಡ್ಡಿ ಎರಡೂವರೆ ಲಕ್ಷ ರೂ ಮಾತ್ರವೇ.
GOI is giving at 5% to startups. We have it. https://t.co/fHwGZo2YNZ pic.twitter.com/2aL3DtWqO5
— Pritesh Lakhani (@priteshlakhani) November 28, 2024
ಇದನ್ನೂ ಓದಿ: ಮ್ಯೂಚುವಲ್ ಫಂಡ್ನಲ್ಲಿ ಎಷ್ಟು ವಿಧ, ಹೇಗೆ ಹೂಡಿಕೆ? ಇಲ್ಲಿದೆ ಮಾಹಿತಿ
ಸ್ಟಾರ್ಟಪ್ಗೆ ಆರಂಭಿಕ ಬಂಡವಾಳ ಪಡೆಯುವ ಕ್ರಮ…
ಸ್ಟಾರ್ಟಪ್ಗಳಿಗೆ ಸೀಡ್ ಫಂಡಿಂಗ್ ಸಿಗಬೇಕೆಂದರೆ ಅವು ಡಿಪಿಐಐಟಿ ಸರ್ಟಿಫಿಕೇಟ್ ಪಡೆದಿರಬೇಕು. ಸ್ಟಾರ್ಟಪ್ ಇಂಡಿಯಾ ವೆಬ್ಸೈಟ್ಗೆ ಹೋಗಿ ನೊಂದಾಯಿಸಬೇಕು. ಈ ವೆಬ್ಸೈಟ್ ವಿಳಾಸ ಇಂತಿದೆ: www.startupindia.gov.in/
ಇಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಡಿಪಿಐಐಟಿ ಸರ್ಟಿಫಿಕೇಟ್ ಸಿಗಲು ಒಂದೆರಡು ತಿಂಗಳಾಗಬಹುದು. ಡಿಪಿಐಐಟಿ ಪ್ರಮಾಣಪತ್ರ ಸಿಗುವವರೆಗೂ ನೀವು ಸೀಡ್ ಫಂಡಿಂಗ್ ಪಡೆಯಲು ಆಗುವುದಿಲ್ಲ.
ನಿಮ್ಮ ಸ್ಟಾರ್ಟಪ್ಗೆ ಡಿಪಿಐಐಟಿ ಮಾನ್ಯತೆ ಸಿಕ್ಕ ಬಳಿಕ ಸ್ಟಾರ್ಟಪ್ ಇಂಡಿಯಾ ವೆಬ್ಸೈಟ್ನ ಸೀಡ್ಫಂಡ್ ಪೋರ್ಟಲ್ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಪೋರ್ಟಲ್ನ ಲಿಂಕ್ ಇಲ್ಲಿದೆ: seedfund.startupindia.gov.in
ಇಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು.
ಮೂರು ಇನ್ಕ್ಯುಬೇಟರ್ಗಳನ್ನು ಆಯ್ದುಕೊಳ್ಳಬೇಕು. ಇವರ ಪೈಕಿ ಒಬ್ಬರು ನಿಮ್ಮ ಆಹ್ವಾನವನ್ನು ಒಪ್ಪಿಕೊಳ್ಳಬೇಕು.
ನೀವು ಇನ್ಕುಬೇಟರ್ ಅನ್ನು ಸಂಪರ್ಕಿಸಿ ಮಾತುಕತೆ ನಡೆಸಬಹುದು. ಇವರು ನಿಮ್ಮ ಸ್ಟಾರ್ಟಪ್ಗೆ ಆರಂಭಿಕ ಸಾಲ ಕೊಡಬೇಕಾ, ಬೇಡವಾ, ಅಥವಾ ಸಾಲ ಕೊಡುವುದಾದರೆ 50 ಲಕ್ಷ ರೂನಲ್ಲಿ ಎಷ್ಟು ಮೊತ್ತವನ್ನು ಕೊಡಬಹುದು ಎಂಬುದನ್ನು ನಿರ್ಧರಿಸುತ್ತಾರೆ.
ಇದನ್ನೂ ಓದಿ: 2047ರೊಳಗೆ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಭಾರತದ ಔಷಧ ಉದ್ಯಮ
ನಿಮ್ಮ ಸ್ಟಾರ್ಟಪ್ಗೆ ಬಂಡವಾಳ ಎಷ್ಟು ಅವಶ್ಯ ಎಂಬ ವಿವರ…
ಇಲ್ಲಿ ಬಹಳ ಮುಖ್ಯ ಸಂಗತಿ ಎಂದರೆ ನಿಮ್ಮ ಸ್ಟಾರ್ಟಪ್ ಏನು, ಅದು ಲಾಭದ ಕಂಪನಿಯಾಗಲು ಏನೇನು ಪ್ಲಾನ್ಗಳು ನಿಮ್ಮಲ್ಲಿವೆ, ಸಾಲದ ಹಣವನ್ನು ಹೇಗೆ ವಿನಿಯೋಗಿಸುತ್ತೀರಿ ಎಂಬೆಲ್ಲಾ ವಿವರವನ್ನು ನೀವು ಸಿದ್ಧಪಡಿಸಿಕೊಂಡು ಇನ್ಕ್ಯುಬೇಟರ್ ಮುಂದೆ ಪ್ರಸ್ತುತಪಡಿಸಬೇಕಾಗಬಹುದು. ಅವರಿಗೆ ನಿಮ್ಮ ಕಾನ್ಸೆಪ್ಟ್ ಉತ್ತಮ ಇದೆ ಎನಿಸಿದಲ್ಲಿ ಗರಿಷ್ಠ ಸಾಲ ಕೊಡಿಸಲು ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ