
ಟಾಟಾ ಮೋಟಾರ್ಸ್ (Tata Motors) ತನ್ನ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್ ಟಿಗೋರ್‌ಗೆ ಹೊಸ ರೂಪ ನೀಡಿದ್ದು, ‘ಟಾಟಾ ಏರಿಸ್’ ಎಂಬ ಹೆಸರಿನಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. ಟಿಗೋರ್‌ಗೆ ಬದಲಿಯಾಗಿ ಬಂದಿರುವ ಏರಿಸ್‌ನಲ್ಲಿ ವಿನ್ಯಾಸದ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹೊಸ ಏರಿಸ್‌ನ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 5.29 ಲಕ್ಷ ಎಂದು Car&Bike ವರದಿ ತಿಳಿಸಿದೆ.
ಏರಿಸ್‌ನ ಹೊರ ವಿನ್ಯಾಸದಲ್ಲಿ ಟಿಗೋರ್‌ಗೆ ಹೋಲಿಸಿದರೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮುಂಭಾಗದಲ್ಲಿ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಹೊಸ ಗ್ರಿಲ್ ಮತ್ತು ಪರಿಷ್ಕೃತ ಬಂಪರ್‌ಗಳ ಜತೆಗೆ ಹೊಸ ವಿನ್ಯಾಸದ ಅಲಾಯ್ ಚಕ್ರಗಳೂ ಸಿಗುತ್ತವೆ.
ಹಿಂಭಾಗದಲ್ಲೂ ಹೊಸ ಟೇಲ್‌ಲ್ಯಾಂಪ್‌ಗಳು ಮತ್ತು ಬದಲಾದ ಬಂಪರ್ ವಿನ್ಯಾಸ ಕಾಣಬಹುದು. ಒಟ್ಟಾರೆ ಕಾರಿನ ವಿನ್ಯಾಸವನ್ನು ಟಿಗೋರ್‌ಗಿಂತ ಹೆಚ್ಚು ಆಧುನಿಕವಾಗಿ ಕಾಣುವಂತೆ ಮಾಡಲಾಗಿದೆ. ಹೊಸ ಬಣ್ಣಗಳ ಆಯ್ಕೆಯೂ ಏರಿಸ್‌ನಲ್ಲಿ ಲಭ್ಯವಿದೆ.
ಏರಿಸ್‌ನ ಒಳಾಂಗಣವನ್ನು ಟಾಟಾದ ಇತ್ತೀಚಿನ ಟಿಯಾಗೊ ಮಾದರಿಯ ವಿನ್ಯಾಸದಿಂದ ಪ್ರೇರಣೆ ಪಡೆದಂತಿದೆ. 10.24 ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಗಮನ ಸೆಳೆಯುತ್ತವೆ.
ಇದರ ಜೊತೆಗೆ 360 ಡಿಗ್ರಿ ಕ್ಯಾಮೆರಾ, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ವಿದ್ಯುತ್ ನಿಯಂತ್ರಿತ ಹಾಗೂ ಸ್ವಯಂಚಾಲಿತವಾಗಿ ಮಡಚಿಕೊಳ್ಳುವ ಸೈಡ್ ಮಿರರ್‌ಗಳಂತಹ ಸೌಲಭ್ಯಗಳೂ ಲಭ್ಯವಿವೆ.
Auto Tips: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕುತ್ತಿದ್ದೀರಾ? ಇಷ್ಟು ದಂಡ ಬೀಳಬಹುದು, ನಿಯಮ ತಿಳಿಯಿರಿ
ಎಂಜಿನ್ ವಿಚಾರದಲ್ಲಿ ಏರಿಸ್‌ನಲ್ಲಿ ಟಿಗೋರ್‌ನಲ್ಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 84 ಬಿಎಚ್‌ಪಿ ಶಕ್ತಿ ಮತ್ತು 113 ಎನ್‌ಎಂ ಟಾರ್ಕ್ ನೀಡುತ್ತದೆ. ಇದಕ್ಕೆ 5-ಸ್ಪೀಡ್ ಮ್ಯಾನುಯಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳಿವೆ. ಸಿಎನ್‌ಜಿ ಮಾದರಿಯಲ್ಲೂ 1.2 ಲೀಟರ್ ಎಂಜಿನ್ ಬಳಸಲಾಗಿದ್ದು, ಇದು 72 ಬಿಎಚ್‌ಪಿ ಶಕ್ತಿ ಮತ್ತು 96.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮಾದರಿಗೂ ಮ್ಯಾನುಯಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳಿವೆ.
ಹೊಸ ಏರಿಸ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಟಾಪ್ ರೂಪಾಂತರಗಳಲ್ಲಿ 360 ಡಿಗ್ರಿ ಕ್ಯಾಮೆರಾದಂತಹ ಸೌಲಭ್ಯವೂ ಲಭ್ಯವಿರಲಿದೆ.
ಟಿಗೋರ್‌ಗಿಂತ ಹೊಸ ವಿನ್ಯಾಸ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬಂದಿರುವ ಏರಿಸ್, ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಮುಂತಾದ ಕಾಂಪ್ಯಾಕ್ಟ್ ಸೆಡಾನ್‌ಗಳಿಗೆ ಪೈಪೋಟಿ ನೀಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ