ಅಲ್ಪಾವಧಿ ಮತ್ತು ದೀರ್ಘಾವಧಿ ಎರಡೂ ಬಗೆಯ ಹೂಡಿಕೆದಾರರಿಗೂ ಫಿಕ್ಸೆಡ್ ಡೆಪಾಸಿಟ್ಸ್ (ಎಫ್ಡಿ) ಅತ್ಯಂತ ಸುರಕ್ಷಿತ ಹಾಗೂ ಆದ್ಯತೆಯ ಹೂಡಿಕೆ ಆಯ್ಕೆಗಳಾಗಿವೆ. ಏಕೆಂದರೆ, ಖಾತ್ರಿ ರಿಟರ್ನ್ಸ್, ತೆರಿಗೆ ಅನುಕೂಲಗಳು, ನಗದೀಕರಣ ಮತ್ತು ಅನುಕೂಲಕರ ಅವಧಿ ಇಂಥ ಅಂಶಗಳೆಲ್ಲ ಸೇರಿಕೊಂಡಿವೆ. ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಖಾತ್ರಿ ಬಡ್ಡಿ ದರ ಬರುವುದರಿಂದ ಯಾರಿಗೆ ಹೂಡಿಕೆಯಲ್ಲಿ ರಿಸ್ಕ್ ಬೇಡ ಅಂತನ್ನಿಸುತ್ತದೋ, ಅದರಲ್ಲೂ ಹಿರಿಯ ನಾಗರಿಕರು ಭಾರತದಲ್ಲಿ ನಿವೃತ್ತಿ ನಂತರ ಎಫ್ಡಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೊವಿಡ್- 19 ಬಿಕ್ಕಟ್ಟು ಸಂದರ್ಭದಲ್ಲಿ ಆರ್ಥಿಕ ಸವಾಲಿರುವಾಗ, ಆರ್ಬಿಐ ರೆಪೋ ದರ ನಿರಂತರವಾಗಿ ಶೇ 4ರಷ್ಟಿದ್ದು, ಕಳೆದ ವರ್ಷದಿಂದ ಈಚೆಗೆ ಎಫ್ಡಿ ಮೇಲಿನ ಬಡ್ಡಿ ದರವು ಕಡಿಮೆ ಇದೆ. ಹಿರಿಯ ನಾಗರಿಕರಾಗಿದ್ದು, ಎಪ್ಡಿ ಮೇಲೆ ಹೂಡಿಕೆ ಮಾಡಬೇಕು ಎಂದಿರುವವರಿಗೆ ಇದು ಖಂಡಿತಾ ಗಂಭೀರವಾದ ವಿಷಯ. ಏಕೆಂದರೆ ಯಾವಾಗ ಎಫ್ಡಿ ಮೇಲೆ ಬಡ್ಡಿ ದರ ಕಡಿಮೆ ಆಯಿತೋ ಬಹುತೇಕ ಬ್ಯಾಂಕ್ಗಳು ಶೇ 4ರಿಂದ 5ಕ್ಕೆ ಇಳಿಸಿವೆ.
ಆದರೆ, ಕೆಲವು ಖಾಸಗಿ ಮತ್ತು ಸಣ್ಣ ಹಣಕಾಸು ಸಂಸ್ಥೆಗಳು ಸರಾಸರಿ ಬಡ್ಡಿ ದರಕ್ಕಿಂತ ಹೆಚ್ಚಿನದನ್ನು ನೀಡುತ್ತಿವೆ. ಆದ್ದರಿಂದ, ನಿಮಗೇನಾದರೂ 3ರಿಂದ 5 ವರ್ಷಗಳ ಅವಧಿಗೆ ಎಫ್.ಡಿ. ಮಾಡಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವು ಆಯ್ಕೆಗಳಿವೆ. 2 ಕೋಟಿ ರೂಪಾಯಿಯೊಳಗಿನ ಮೊತ್ತಕ್ಕೆ ಹೆಚ್ಚಿನ ಬಡ್ಡಿ ದರವನ್ನು ನೀಡುವ ಟಾಪ್ 5 ಬ್ಯಾಂಕ್ಗಳಿವು.
ಸಣ್ಣ ಹಣಕಾಸು ಬ್ಯಾಂಕ್ಗಳು
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.75, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7.25, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಅಕ್ಟೋಬರ್ 19, 2020ರಿಂದ ಅನ್ವಯ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.75, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7.25, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಮೇ 15, 2021ರಿಂದ ಅನ್ವಯ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.75, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7.25. ಮೇ 7, 2021ರಿಂದ ಅನ್ವಯ.
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.25, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.75, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 23, 2021ರಿಂದ ಅನ್ವಯ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.25, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.50, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.25, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 21, 2021ರಿಂದ ಅನ್ವಯ.
ಖಾಸಗಿ ಬ್ಯಾಂಕ್ಗಳು 3ರಿಂದ 5 ವರ್ಷದ ಅವಧಿಗೆ 2 ಕೋಟಿ ರೂ. ಒಳಗಿನ ಮೊತ್ತಕ್ಕೆ
ಇಂಡಸ್ಇಂಡ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಜೂನ್ 4, 2021ರಿಂದ ಅನ್ವಯ.
ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 7, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.50. ಮೇ 15, 2021ರಿಂದ ಅನ್ವಯ.
ಆರ್ಬಿಎಲ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6.10, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.60, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.50, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7. ಜೂನ್ 1, 2021ರಿಂದ ಅನ್ವಯ.
ಯೆಸ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 6, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6.50, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 6.25, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 7. ಜೂನ್ 3, 2021ರಿಂದ ಅನ್ವಯ.
ಕರೂರ್ ವೈಶ್ಯ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.65, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.15. ಜನವರಿ 11, 2021ರಿಂದ ಅನ್ವಯ.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು 3ರಿಂದ 5 ವರ್ಷದ ಅವಧಿಗೆ ಕೋಟಿ ರೂ. ಒಳಗಿನ ಮೊತ್ತಕ್ಕೆ
ಯೂನಿಯನ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.50, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 6, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.55, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.05. ಡಿಸೆಂಬರ್ 12, 2020ರಿಂದ ಅನ್ವಯ.
ಕೆನರಾ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.40, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.90, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.50, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 6.00. ಫೆಬ್ರವರಿ 8, 2021ರಿಂದ ಅನ್ವಯ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.10, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.60, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಜನವರಿ 8, 2021ರಿಂದ ಅನ್ವಯ.
ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.30, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.80, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಜೂನ್ 1, 2021ರಿಂದ ಅನ್ವಯ.
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಸಾಮಾನ್ಯ ಎಫ್ಡಿ 3 ವರ್ಷಕ್ಕೆ- ವಾರ್ಷಿಕ ಬಡ್ಡಿ ದರ ಶೇ 5.15, ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಗೆ ಶೇ 5.65, ಸಾಮಾನ್ಯ ಎಫ್ಡಿ 5 ವರ್ಷಕ್ಕೆ ಶೇ 5.30, ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ ಶೇ 5.80. ಮೇ 16, 2021ರಿಂದ ಅನ್ವಯ.
(ಮಾಹಿತಿ ಮೂಲ: ಬ್ಯಾಂಕ್ ವೆಬ್ಸೈಟ್ಗಳು)
ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ಗಳಿಗೆ ಸುತ್ತೋಲೆ
(Here are the top 5 banks with higher rate of interest on fixed deposits for 3 to 5 years term)