ಟಿವಿ9 ಕನ್ನಡ ಪ್ರಸ್ತುತಿಯಲ್ಲಿ ರಿಯಲ್ ಎಸ್ಟೇಟ್ ಎಕ್ಸ್​ಪೋ 2021 “ಸ್ವೀಟ್​ ಹೋಮ್” ನ.19ರಿಂದ 21ರ ತನಕ

ಟಿವಿ9 ಕನ್ನಡ ಪ್ರಸ್ತುತಿಯಲ್ಲಿ ರಿಯಲ್ ಎಸ್ಟೇಟ್ ಎಕ್ಸ್​ಪೋ 2021 ಸ್ವೀಟ್​ ಹೋಮ್ ನ.19ರಿಂದ 21ರ ತನಕ
ಸಾಂದರ್ಭಿಕ ಚಿತ್ರ

ಟಿವಿ9 ಕನ್ನಡ ಪ್ರಾಯೋಜಕತ್ವದಲ್ಲಿ ರಿಯಲ್ ಎಸ್ಟೇಟ್ ಎಕ್ಸ್​ಪೋ 2021 ಸ್ವೀಟ್ ಹೋಮ್ ನವೆಂಬರ್ 19ರಿಂದ 21ರ ತನಕ ಆಯೋಜಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

Nov 15, 2021 | 12:11 PM

ಟಿವಿ9 ಕನ್ನಡ​ ಪ್ರಸ್ತುತ ಪಡಿಸುವಂಥ 11ನೇ ಅವತರಣಿಕೆಯ ರಿಯಲ್ ಎಸ್ಟೇಟ್ ಎಕ್ಸ್​ಪೋ 2021 “ಸ್ವೀಟ್​ ಹೋಮ್” ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಇರುವ ನಂದಿ ಲಿಂಕ್ ಮೈದಾನದಲ್ಲಿ ನವೆಂಬರ್ 19, 2021ರಿಂದ ನವೆಂಬರ್ 21, 2021ರ ತನಕ ನಡೆಯಲಿದೆ. “ಸ್ವೀಟ್​ ಹೋಮ್​”ನಲ್ಲಿ ಒನ್​ ಸ್ಟಾಪ್ ಸಲ್ಯೂಷನ್ ದೊರೆಯುತ್ತದೆ. ಬ್ಯಾಂಕ್/ಹಣಕಾಸು ಸೌಲಭ್ಯದಿಂದ ಮೊದಲುಗೊಂಡು ಸಮಕಾಲೀನ ಇಂಟಿರೀಯರ್ಸ್ ಮತ್ತು ಫರ್ನಿಷಿಂಗ್ಸ್ ತನಕ ಎಲ್ಲವೂ ಒಂದೇ ಕಡೆ ದೊರೆಯುತ್ತದೆ. ಅಂದರೆ ಯಾರಿಗಾದರೂ ತಮ್ಮ ಕನಸಿನ ಮನೆಯನ್ನು ಸ್ವಂತದ್ದಾಗಿಸಿಕೊಳ್ಳಲು ಮತ್ತು ರೂಪಿಸಿಕೊಳ್ಳಲು ಬೇಕಾದಂಥ ಎಲ್ಲವನ್ನೂ ಒದಗಿಸುತ್ತದೆ. ಈ ಎಕ್ಸ್​ಪೋನ ಪ್ರಮುಖ ವೈಶಿಷ್ಟ್ಯ ಏನೆಂದರೆ, ಸಮಾಜದ ಎಲ್ಲ ಸೆಗ್ಮೆಂಟ್​ ಅನ್ನು ಗುರಿ ಆಗಿಸಿಕೊಂಡಿದೆ. ವ್ಯಾಪಕವಾದ ಮಾಧ್ಯಮ ಕವರೇಜ್, ಮಾರಾಟ ಮತ್ತು ಬ್ರ್ಯಾಂಡಿಂಗ್ ಅದ್ಭುತ ಅವಕಾಶ, ಸಂದರ್ಶಕರಿಗೆ ಉಚಿತ ಪ್ರವೇಶ ದೊರೆಯುತ್ತದೆ.

ಟಿವಿ9 ಕನ್ನಡ, ಮುದ್ರಣ ಮಾಧ್ಯಮ, ಎಫ್​ಎಂ ರೇಡಿಯೋಗಳಿಂದ ಕಾರ್ಯಕ್ರಮದ ಪೂರ್ವ ಮತ್ತು ನಂತರದ ಕವರೇಜ್ ದೊರೆಯುತ್ತದೆ. ಇಂಥ ದೊಡ್ಡ ಎಕ್ಸ್​ಪೋದಲ್ಲಿ ಪ್ರಾಯೋಜಕತ್ವ ನೀಡುವ ಅವಕಾಶಗಳಿವೆ. ಟೈಟಲ್ ಪ್ರಾಯೋಜಕತ್ವ, ಅಸೋಸಿಯೇಟ್ ಪ್ರಾಯೋಜಕತ್ವ, ಸಹ ಪ್ರಾಯೋಜಕತ್ವ, ಪ್ಲಾಟಿನಂ, ಗೋಲ್ಡ್- (ಬಿ- ಸ್ಟಾಲ್), ಸಿಲ್ವರ್ (ಸಿ-ಸ್ಟಾಲ್) ವಿವಿಧ ಅಳತೆಗಳಲ್ಲಿ ಲಭ್ಯವಿವೆ.

ಯಾವುದೇ ಮಾಹಿತಿಗಾಗಿ ರಾಜಶೇಖರ್ ಮೊಬೈಲ್ ಸಂಖ್ಯೆ- 9980945137, ಇಮೇಲ್ ಐಡಿ- rajshekhar.g@tv9.com ಸಂಪರ್ಕಿಸಬಹುದು. ಹೈದರಾಬಾದ್ ಎಂ.ಎನ್.ಆಚಾರ್ಯ ಮೊ. 9948299698, ದೆಹಲಿ ವಿಕಾಸ್ 9810266385, ಗುಜರಾತ್ ಮೌಲಿಕ್ ಶಾಸ್ 9909941613, ಮುಂಬೈ ನಿನಾದ್ 9930653586, ಚೆನ್ನೈ ದೇವಿ 9840989410, ಕೋಲ್ಕತ್ತಾ ಮೊಹುವ ರಾಯ್ 8334872780, ಕೇರಳ ಸಾಜನ್ 9497784085 ಸಂಪರ್ಕಿಸಬಹುದು.

ಟಿವಿ9 ಕನ್ನಡ ಪ್ರಾದೇಶಿಕ ಸುದ್ದಿ ಪ್ರಸಾರದಲ್ಲಿ ಹೊಸ ಟ್ರೆಂಡ್ ಸಿದ್ಧ ಮಾಡಿದ ಸಂಸ್ಥೆ. ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ್ದಷ್ಟೇ ಅಲ್ಲ, 2006ರಿಂದ ಈಚೆಗೆ ಜಾಗತಿಕ ಮಟ್ಟದಲ್ಲೇ ಅತಿ ಹೆಚ್ಚು ವೀಕ್ಷಣೆ ಮಾಡುತ್ತಿರುವ ಚಾನೆಲ್ ಟಿವಿ9 ಕನ್ನಡ. ಮುಕ್ತ ಹಾಗೂ ನಿರ್ಭೀತ ಪತ್ರಿಕೋದ್ಯಮದ ಬ್ರ್ಯಾಂಡ್ ಎನಿಸಿಕೊಳ್ಳುವ ಮೂಲಕ ನಾಗರಿಕರನ್ನು ಸಬಲಗೊಳಿಸುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada