ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಅನಾವರಣ
ನವದೆಹಲಿ, ಆಗಸ್ಟ್ 21: ಜಿಎಸ್ಟಿ ಬಿಲ್ ಬಳಕೆಯನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಸರ್ಕಾರ ವಿನೂತನ ಕ್ರಮಕ್ಕೆ ಮುಂದಾಗಿದೆ. ಜಿಎಸ್ಟಿ ಬೆಲೆಪಟ್ಟಿ (Invoice) ಅಥವಾ ಇನ್ವಾಯ್ಸ್ ದಾಖಲೆಯನ್ನು ಮೊಬೈಲ್ ಆ್ಯಪ್ಗೆ ಅಪ್ಲೋಡ್ ಮಾಡುವ ವ್ಯಕ್ತಿಗಳಿಗೆ, ಲಕ್ಕಿ ಡ್ರಾ ಮೂಲಕ ಆಯ್ದು, 10 ಲಕ್ಷ ರೂನಿಂದ 1 ಕೋಟಿ ರೂವರೆಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ ಇದೆ. ವರದಿಗಳ ಪ್ರಕಾರ, ಇಂತಹದ್ದೊಂದು ಪ್ರಸ್ತಾಪ ಬಹಳ ದಿನಗಳಿಂದ ಇದೆಯಾದರೂ ಸರ್ಕಾರ ಈಗ ‘ಮೇರಾ ಬಿಲ್ ಮೇರಾ ಅಧಿಕಾರ್’ ಸ್ಕೀಮ್ ಅನ್ನು ಜಾರಿಗೊಳಿಸಲು ಹೊರಟಿದೆ ಎನ್ನಲಾಗಿದೆ.
ರೀಟೇಲ್ ಅಥವಾ ಹೋಲ್ಸೇಲ್ ಅಂಗಡಿಯಿಂದ ಪಡೆಯುವ ಇನ್ವಾಯ್ಸ್ ಅನ್ನು ‘ಮೇರಾ ಬಿಲ್ ಮೇರಾ ಅಧಿಕಾರ್’ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು. ಈ ದಾಖಲೆಯಲ್ಲಿ ಇನ್ವಾಯ್ಸ್ ನಂಬರ್, ಮಾರಾಟಗಾರರ ಜಿಎಸ್ಟಿನ್ ನಂಬರ್, ಪಾವತಿಯಾದ ಹಣದ ವಿವರ, ತೆರಿಗೆ ಮೊತ್ತ ಇವೆಲ್ಲವೂ ಒಳಗೊಂಡಿರಬೇಕು.
ಇದನ್ನೂ ಓದಿ: New Tax Rule: ಲೈಫ್ ಇನ್ಷೂರೆನ್ಸ್ ಪಾಲಿಸಿ ವಿಚಾರದಲ್ಲಿ ಹೊಸ ಆದಾಯ ತೆರಿಗೆ ನಿಯಮ; ವಿವರ ತಿಳಿಯಿರಿ
ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕಾದರೆ ಇನ್ವಾಯ್ಸ್ ಮೊತ್ತ ಕನಿಷ್ಠ 200 ರೂ ಆಗಿದ್ದಿರಬೇಕು. ಅಂದರೆ 200 ರೂಗಿಂತ ಹೆಚ್ಚು ಮೌಲ್ಯದ ವಸ್ತುವನ್ನು ಖರೀದಿಸಿ ಪಡೆದ ಬಿಲ್ ಆಗಿದ್ದಿರಬೇಕು. ಇಂಥ 25 ನೈಜ ಇನ್ವಾಯ್ಸ್ಗಳನ್ನು ಒಂದು ತಿಂಗಳಲ್ಲಿ ಒಬ್ಬ ವ್ಯಕ್ತಿ ಅಪ್ಲೋಡ್ ಮಾಡಬಹುದು.
ಪ್ರತೀ ತಿಂಗಳು ಲಕ್ಕಿ ಡ್ರಾ ಮೂಲಕ 500 ಇನ್ವಾಯ್ಸ್ಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳಿಗೆ ಲಕ್ಷ ರೂವರೆಗೂ ಬಹುಮಾನ ಇರುತ್ತದೆ. ಇನ್ನು, ಪ್ರತೀ ಮೂರು ತಿಂಗಳಿಗೊಮ್ಮೆ ಎರಡು ಇನ್ವಾಯ್ಸ್ಗಳನ್ನು ಲಕ್ಕಿ ಡ್ರಾ ಮೂಲಕ ಆರಿಸಿ 1 ಕೋಟಿ ರೂ ಬಹುಮಾನ ಕೊಡಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಪಾವತಿ ಮಾಡಿ ದಂಗಾದ ಜರ್ಮನ್ ಮಿನಿಸ್ಟರ್
ವ್ಯಾಪಾರದ ವೇಳೆ ಜಿಎಸ್ಟಿ ಬಿಲ್ ಕೇಳಿಪಡೆಯಲು ಗ್ರಾಹಕರನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ತೆರಿಗೆ ಕಳ್ಳತನ ತಪ್ಪಿಸಬಹುದು ಎಂಬುದು ಸರ್ಕಾರ ಅನಿಸಿಕೆ. ಈ ತಿಂಗಳೊಳಗೆಯೇ ಸ್ಕೀಮ್ ಅನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಜಿಎಸ್ಟಿ ನೆಟ್ವರ್ಕ್ ಈಗಾಗಲೇ ತೆರಿಗೆ ಪಾವತಿ ವ್ಯವಸ್ಥೆಯನ್ನು ಬಳಕೆದಾರಸ್ನೇಹಿ ಕಾರ್ಯವಾಗಿಸಿದೆ. ಮೊಬೈಲ್ ಆ್ಯಪ್ ಮತ್ತು ಪೋರ್ಟಲ್ನಲ್ಲಿ ನೊಂದಣಿ ಮಾಡಿಕೊಂಡು ಇನ್ವಾಯ್ಸ್ಗಳನ್ನು ಅಪ್ಲೋಡ್ ಮಾಡುವುದು ಬಹಳ ಸುಲಭ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ