
ನವದೆಹಲಿ, ಸೆಪ್ಟೆಂಬರ್ 3: ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದೆ. ಇನ್ಮುಂದೆ ಬಳಕೆದಾರರು ವಿದ್ಯುತ್, ಅಡುಗೆ ಅನಿಲ, ನೀರು, ಕ್ರೆಡಿಟ್ ಕಾರ್ಡ್ ಮತ್ತು ಫಾಸ್ಟ್ಯಾಗ್ ಬಿಲ್‌ಗಳನ್ನು ನೇರವಾಗಿ ವಾಟ್ಸ್‌ಆ್ಯಪ್ ಆ್ಯಪ್ ಮೂಲಕವೇ ಪಾವತಿಸಬಹುದಾಗಿದೆ. ಭಾರತದಾದ್ಯಂತ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸುಲಭಗೊಳಿಸಲು ಮೆಟಾ ಸಂಸ್ಥೆಯು ‘ಭಾರತ್ ಕನೆಕ್ಟ್’ (BBPS) ನೆಟ್‌ವರ್ಕ್ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಹಂತ-ಹಂತವಾಗಿ ಪರಿಚಯಿಸುತ್ತಿದೆ.
ಇದನ್ನೂ ಓದಿ: ಎಐ ಆರ್ಥಿಕತೆ ನಿರ್ಮಿಸಲು ಭಾರತದ ವೇಗ ಹೆಚ್ಚಬೇಕು: ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್
ಸದ್ಯ ಇದು ಒಮ್ಮೆಗೇ ಎಲ್ಲರ ವಾಟ್ಸಾಪ್ನಲ್ಲೂ ಕಾಣಿಸದಿರಬಹುದು. ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ದಿನಗಳಲ್ಲಿ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರೆಲ್ಲರಿಗೂ ಈ ಫೀಚರ್ ಲಭ್ಯವಾಗಲಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಪತ್ನಿಯ ಮೊದಲ ಭೇಟಿ, ಹ್ಯಾರಿಸ್ನ ಊಟ, ಇಲ್ಲು ಹಬ್ಬ, ಫ್ಲಾಪಿ ಡಿಸ್ಕ್… ಐಐಟಿ ಖರಗ್ಪುರ್ನ ದಿನಗಳನ್ನು ಮೆಲುಕಿಸಿದ ಗೂಗಲ್ ಬಾಸ್
ಯುಪಿಐ, ಬಿಲ್ ಪಾವತಿ, ಟಿಕೆಟ್ ಬುಕಿಂಗ್ ಎಲ್ಲವೂ ಒಂದೇ ಪ್ಲಾಟ್ಫಾರ್ಮ್ನಲ್ಲಿ ಲಭ್ಯ ಇರುವುದು ಭಾರತಕ್ಕೆ ಹೊಸದಲ್ಲ. ಪೇಟಿಎಂ, ಫೋನ್ಪೇ ಪ್ಲಾಟ್ಫಾರ್ಮ್ಗಳು ಕೂಡ ಇಂಥ ಬಹುಸೇವೆಗಳನ್ನು ಒದಗಿಸುತ್ತವೆ. ಗೂಗಲ್ ಪೇ ಹಾಗೂ ಇತರ ಯುಪಿಐ ಆ್ಯಪ್ಗಳಲ್ಲೂ ಈ ಸೇವೆಗಳು ಲಭ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ