AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

I-WFA: ಎಲ್ಲಿಂದಾದರೂ ಕೆಲಸ ಮಾಡುವ ಫ್ರೇಮ್​ವರ್ಕ್ ಅಭಿವೃದ್ಧಿಗೆ ಹಾರ್ವರ್ಡ್ ಜತೆಗೆ ಐಟಿಸಿ ಇನ್​ಫೋಟೆಕ್ ಸಹಭಾಗಿತ್ವ

ಬೆಂಗಳೂರು ಮೂಲದ ಐಟಿಸಿ ಇನ್​ಫೋಟೆಕ್​ನಿಂದ ಐ- ಡಬ್ಲ್ಯುಎಫ್​ಎ ಫ್ರೇಮ್​ವರ್ಕ್​ ಅನ್ನು ಬೆಂಗಳೂರು ಮೂಲದ ಐಟಿ ಕಂಪೆನಿ ಐಟಿಸಿ ಇನ್​ಫೋಟೆಕ್​ನಿಂದ ಅಭಿವೃದ್ಧಿ ಮಾಡಲಾಗುತ್ತಿದೆ.

I-WFA: ಎಲ್ಲಿಂದಾದರೂ ಕೆಲಸ ಮಾಡುವ ಫ್ರೇಮ್​ವರ್ಕ್ ಅಭಿವೃದ್ಧಿಗೆ ಹಾರ್ವರ್ಡ್ ಜತೆಗೆ ಐಟಿಸಿ ಇನ್​ಫೋಟೆಕ್ ಸಹಭಾಗಿತ್ವ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Nov 11, 2021 | 1:42 PM

ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಐಟಿಸಿ ಇನ್​ಫೋಟೆಕ್​ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಸಹಯೋಗದಲ್ಲಿ “ವಿಶಿಷ್ಟ ಮತ್ತು ಕೈಗಾರಿಕೆಯಿಂದ ವ್ಯಾಖ್ಯಾನಿಸಲಾದ” ಉತ್ಪಾದಕತೆ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ಹಾರ್ವರ್ಡ್​ ಬಿಜಿನೆಸ್ ಸ್ಕೂಲ್​ನ ಲುಮ್ರಿ ಫ್ಯಾಮಿಲಿ ಅಸೋಸಿಯೇಟ್ ಪ್ರೊಫೆಸರ್ ಪೃಥ್ವಿರಾಜ್ ಚೌಧರಿ ಜತೆಯಾಗಲಿದೆ. ಐಟಿಸಿ ಇನ್​ಫೋಟೆಕ್​ನ ವರ್ಕ್ ಫ್ರಮ್ ಎನಿವೇರ್ (I-WFA) ಫ್ರೇಮ್​ವರ್ಕ್ ಗುರಿಯು ಅತ್ಯುತ್ತಮ ಫಲಿತಾಂಶ ನೀಡಲು ಗ್ರಾಹಕರು ಮತ್ತು ಉದ್ಯೋಗಿಗಳಿಗೆ ದಕ್ಷವಾದ ಮತ್ತು ತಡೆರಹಿತವಾದ ಕಾರ್ಯ ನಿರ್ವಹಣೆ ಫ್ರೇಮ್​ವರ್ಕ್ ಒದಗಿಸುವುದಾಗಿದೆ. ಫೀಡ್​ಬ್ಯಾಕ್ ಇನ್​ಸೈಟ್ಸ್​ ಎಂಬ ಸಂಶೋಧನಾ ಸಂಸ್ಥೆಯು ವಿವಿಧ ಭೌಗೋಳಿಕ ಪ್ರದೇಶದಲ್ಲಿ ಕೈಗೊಂಡ ಉದ್ಯೋಗಿಗಳು ಮತ್ತು ಗ್ರಾಹಕರ ಸಮೀಕ್ಷೆಗಳ ದತ್ತಾಂಶದ ಆಧಾರದಲ್ಲಿ ಈ ಫ್ರೇಮ್​ವರ್ಕ್ ರೂಪಿಸಲಾಗುವುದು. ಐಟಿಸಿ ಇನ್​ಫೋಟೆಕ್​ನ ಗ್ರಾಹಕರ ಮತ್ತು ಸಿಬ್ಬಂದಿ ಕೇಂದ್ರಿತ ಕಾರ್ಯತಂತ್ರ ಸ್ತಂಬದಂತೆ ಈ ಫ್ರೇಮ್​ವರ್ಕ್ ಇರಲಿದೆ.

ತಂತ್ರಜ್ಞಾನವು ಕೇವಲ ಉದ್ಯಮದ ಫಲಿತಾಂಶಕ್ಕೆ ಮಾತ್ರ ಸಹಾಯ ಮಾಡುತ್ತಿರುವುದಲ್ಲ. ಇದರ ಜತೆಗೆ ಭವಿಷ್ಯದಲ್ಲಿನ ಉದ್ಯೋಗಗಳು- ಡಿಜಿಟಲ್, ವಿತರಣೆ, ಆರಾಮ, ಫಲಿತಾಂಶ ಆಧಾರಿತ ಮತ್ತು ಸುರಕ್ಷತೆಯ ಮರುವ್ಯಾಖ್ಯಾನ ಇದಾಗಲಿದೆ. ಐಟಿಸಿ ಇನ್​ಫೋಟೆಕ್ ಹೇಳಿರುವಂತೆ, ಹೊಸ ರೀತಿಯ ಆವಿಷ್ಕಾರದ ಮಾರ್ಗದಲ್ಲಿ ಹಂಚಿಕೆಯಾದ ಉದ್ಯೋಗ ಸ್ಥಳ ಮಾದರಿಯಲ್ಲಿ ಈ ಫ್ರೇಮ್​ವರ್ಕ್​ನಿಂದ ವಿಕೇಂದ್ರೀಕೃತ ಉದ್ಯೋಗಿಗಳ ಬಲದ ಮೂಲಕ ಸಾಧ್ಯವಾಗುತ್ತದೆ.

“ಪೃಥ್ವಿ ಅವರ ಜತೆಗೆ ಕೆಲಸ ಮಾಡುತ್ತಾ ನಾವು ಈ ಫ್ರೇಮ್​ವರ್ಕ್ ನಿರ್ಮಿಸುತ್ತಿದ್ದೇವೆ. ಗ್ರಾಹಕರ ದೃಷ್ಟಿಯಿಂದ ಉತ್ಪಾದಕತೆ ಹಾಗೂ ಉದ್ಯೋಗಿಗಳ ದೃಷ್ಟಿಯಿಂದ ಆರಾಮದಾಯಕ ಆಗಿದೆಯೇ ಎಂದು ದತ್ತಾಂಶದ ಭದ್ರತೆಯನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಈ ಡೇಟಾ ಚಾಲಿತ ಫ್ರೇಮ್​ವರ್ಕ್​ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಬಗೆಯ ಉದ್ಯೋಗ ಸ್ಥಳ ಮಾಡೆಲ್​ ಅನ್ನು ರೂಪಿಸಲು ಸಹಾಯ ಆಗುತ್ತದೆ. ಮತ್ತು ಅದರಲ್ಲಿ ನಾವಿರುತ್ತೇವೆ ಎಂಬ ವಿಶ್ವಾಸ ಇದೆ,” ಎಂದು ಐಟಿಸಿ ಇನ್ಫೋಟೆಕ್​ ಎಂ.ಡಿ. ಮತ್ತು ಸಿಇಒ ಸುದೀಪ್ ಸಿಂಗ್ ಹೇಳಿದ್ದಾರೆ.

ಇಡೀ ವಿಶ್ವದಾದ್ಯಂತ ಈಗಿರುವ ಪ್ರಶ್ನೆ ಏನೆಂದರೆ, ಎಲ್ಲ ಕೈಗಾರಿಕೆಗಳವರು ಎಲ್ಲಿಂದಾದರೂ ಕೆಲಸ ಮಾಡುವ ಸಾಧ್ಯತೆ ಇದೆಯಾ? ಇದು ಸಾಧ್ಯವಾಗಲು ಏನು ಮಾಡಬೇಕಿದೆ ಎಂದು ನೋಡುತ್ತಿದ್ದಾರೆ. I-WFA ಎಂಬುದು ಕಂಪೆನಿಗೆ ಮೌಲ್ಯ ತುಂಬುವ ಶಕ್ತಿ ಹೊಂದಿದೆ. ಎಲ್ಲಿಂದ ಬೇಕಾದರೂ ನೇಮಿಸಿಕೊಳ್ಳುವ ಅವಕಾಶ ಒದಗಿಸುತ್ತದೆ. ಉದ್ಯೋಗಸ್ಥಳ ಒಳಗೊಳ್ಳುವಿಕೆ, ಹೆಚ್ಚಿದ ಉತ್ಪಾದಕತೆ, ವೆಚ್ಚ ಉಳಿತಾಯ ಮತ್ತು ಕಾರ್ಯ ನಿರ್ವಹಣೆ ಅನುಕೂಲಗಳನ್ನು ಒದಗಿಸುತ್ತದೆ ಎಂದು ಹಾರ್ವರ್ಡ್ ಬಿಜಿನೆಸ್ ಸ್ಕೂಲ್​ನ ಚೌಧರಿ ಹೇಳುತ್ತಾರೆ.

ಇದನ್ನೂ ಓದಿ: ಡಿಸೆಂಬರ್​ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ

Published On - 1:39 pm, Thu, 11 November 21

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ