ತಾಯಿಯ ಸೀರೆಯಲ್ಲಿ ಆಟವಾಡುತ್ತಿದ್ದ ಬಾಲಕನ ದುರಂತ ಅಂತ್ಯ..!
ಮನೆಯಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ ಎನ್ನುವುದೇನು ನಿಜ. ಆದರೂ ಮನೆಯಲ್ಲಿ ಹೆತ್ತವರು ಇದ್ದ ಸಮಯದಲ್ಲೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತದೆ. ಇದಕ್ಕೆ ಕಾರಣ ಮಕ್ಕಳ ಮೇಲಿನ ಅಜಾಗರೂಕತೆ. ಅಂತಹದೊಂದು ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಯಾಪರಾ ಪಂಚಶೀಲ್ ನಗರದಲ್ಲಿ ನಡೆದಿದೆ. ಎಲ್ಲರಂತೆ ಮನೆಯವರು ಮಗನನ್ನು ರೂಮ್ನಲ್ಲಿ ಆಟವಾಡಲು ಬಿಟ್ಟಿದ್ದರು. ಆದರೆ ಆ ಬಳಿಕ ಆತ ಏನು ಮಾಡುತ್ತಿದ್ದಾನೆ ಎಂದು ಗಮನಿಸಿರಲಿಲ್ಲ. ಇಷ್ಟೇ ಸಾಕಾಯ್ತು ದುರಂತ ಸಂಭವಿಸಲು. ಕೊಠಡಿಯಲ್ಲಿ ಆಡುವಾಡುತ್ತಿದ್ದ 12 ವರ್ಷದ ಮಾನವ್ ಕುಂಭಕರ್ ತನ್ನ ತಾಯಿಯ ಸೀರೆಯಿಂದ […]

ಮನೆಯಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ ಎನ್ನುವುದೇನು ನಿಜ. ಆದರೂ ಮನೆಯಲ್ಲಿ ಹೆತ್ತವರು ಇದ್ದ ಸಮಯದಲ್ಲೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತದೆ. ಇದಕ್ಕೆ ಕಾರಣ ಮಕ್ಕಳ ಮೇಲಿನ ಅಜಾಗರೂಕತೆ. ಅಂತಹದೊಂದು ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಯಾಪರಾ ಪಂಚಶೀಲ್ ನಗರದಲ್ಲಿ ನಡೆದಿದೆ. ಎಲ್ಲರಂತೆ ಮನೆಯವರು ಮಗನನ್ನು ರೂಮ್ನಲ್ಲಿ ಆಟವಾಡಲು ಬಿಟ್ಟಿದ್ದರು. ಆದರೆ ಆ ಬಳಿಕ ಆತ ಏನು ಮಾಡುತ್ತಿದ್ದಾನೆ ಎಂದು ಗಮನಿಸಿರಲಿಲ್ಲ. ಇಷ್ಟೇ ಸಾಕಾಯ್ತು ದುರಂತ ಸಂಭವಿಸಲು.
ಕೊಠಡಿಯಲ್ಲಿ ಆಡುವಾಡುತ್ತಿದ್ದ 12 ವರ್ಷದ ಮಾನವ್ ಕುಂಭಕರ್ ತನ್ನ ತಾಯಿಯ ಸೀರೆಯಿಂದ ಉಯ್ಯಾಲೆ ಮಾಡಿದ್ದ. ಮಗ ಆಟವಾಡುತ್ತಿರುವುದನ್ನು ನೋಡಿ ಕುಟುಂಬಸ್ಥರೂ ನಿರಾಳರಾಗಿದ್ದರು. ಆದರೆ ಉಯ್ಯಾಲೆಯಲ್ಲಿ ಆಡುವಾಡುತ್ತಿದ್ದ ಮಾನವ್ ಕೊರಳಿಗೆ ಸೀರೆ ಸುತ್ತಿಕೊಂಡಿದೆ. ಇತ್ತ ಕಿರುಚಲು ಆಗದೇ ಅತ್ತ ಇಳಿಯಲಾಗದೆ ಒದ್ದಾಡಿದ್ದಾನೆ. ಕೊನೆಗೆ ಸುತ್ತಿಕೊಂಡ ಸೀರೆ ನಿಧಾನಕ್ಕೆ ಬಿಚ್ಚಿಕೊಂಡಿದೆ. ಮಗನ ಯಾವುದೇ ಸದ್ದು ಕೇಳದಿದ್ದಾಗ ಮನೆಯವರು ಬಂದು ಕೊಠಡಿಯಲ್ಲಿ ನೋಡಿದ್ದಾರೆ. ಈ ವೇಳೆ ಉಯ್ಯಾಲೆಯಿಂದ ಬಿದ್ದು ಮಲಗಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ.
ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರಿಶೀಲಿಸಿ ಅದಾಗಲೇ ಪ್ರಾಣ ಹೋಗಿರುವುದು ತಿಳಿದು ಬಂದಿದೆ. ಇದಾಗ್ಯೂ ಪ್ರಾಣ ಹೋಗಲು ಕಾರಣವೇನು ಎಂದು ಪರಿಶೀಲಿಸಿದಾಗ ಗೊತ್ತಾಗಿದ್ದೇ ಕುತ್ತಿಗೆಗೆ ಸೀರೆ ಸುತ್ತಿಕೊಂಡಿರುವುದು. ಮೊದಲು ಆತ್ಮಹತ್ಯೆ ಎಂದುಕೊಂಡರೂ ಆ ಬಳಿಕ ಕುಟುಂಬದವರ ವಿಚಾರಣೆಯಿಂದ ಬಾಲಕ ಸೀರೆಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸಿಲುಕಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಘಟನೆ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ದುರ್ಗ್ ಕೊತ್ವಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ. ಮಾನವ್ ಐದನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಇದೀಗ ಮನೆಯವರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಪ್ರತಿಯೊಬ್ಬರು ಮಕ್ಕಳು ಒಂಟಿಯಾಗಿ ಆಟವಾಡುವಾಗ ಎಚ್ಚರಿಸುವುದು ಉತ್ತಮ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(12 year old boy playing with mother sari noose around neck died)
Published On - 9:23 pm, Wed, 2 February 22