ವಾಹನ ನಿಲುಗಡೆಗೆ ವಿಚಾರವಾಗಿ ಜಗಳ, ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ವಿಡಿಯೋ ವೈರಲ್
ವಾಹನ ನಿಲುಗಡೆ ಮಾಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕೊಲೆಯ ಹಂತಕ್ಕೆ ತಲುಪಿರುವ ಘಟನೆ ಗಾಜಿಯಾಬಾದ್ ಉಪಾಹಾರ ಗೃಹದಲ್ಲಿ ನಡೆದಿದೆ.

ದೆಹಲಿ: ವಾಹನ ನಿಲುಗಡೆ ಮಾಡುವ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ಮಾತಿಗೆ ಮಾತು ಬೆಳೆದು ಕೊಲೆಯ ಹಂತಕ್ಕೆ ತಲುಪಿರುವ ಘಟನೆ ಗಾಜಿಯಾಬಾದ್ ಉಪಾಹಾರ ಗೃಹದಲ್ಲಿ ನಡೆದಿದೆ. ಉಪಾಹಾರ ಗೃಹ ಹೊರಗೆ ವಾಹನ ನಿಲುಗಡೆ ಮಾಡುವ ವಿಚಾರವಾಗಿ ನಿನ್ನೆ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.ನಿನ್ನೆ ರಾತ್ರಿ ವರುಣ್ ಎಂಬುವವರು ತನ್ನ ಕಾರನ್ನು ಉಪಾಹಾರ ಗೃಹದ ಹೊರಗೆ ನಿಲ್ಲಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಕ್ಕದ ವಾಹನದ ಬಾಗಿಲು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ಕಾರು ನಿಲ್ಲಿಸಲಾಗಿತ್ತು. ಇದು ವರುಣ್ ಮತ್ತು ಇನ್ನೊಂದು ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದವು ಸ್ವಲ್ಪದರಲ್ಲೇ ಹೊಡೆದಾಟಕ್ಕೆ ತಿರುಗಿ ವರುಣನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಯಿತು.
ಇದರಿಂದ ವರುಣ ರಸ್ತೆಬದಿಯಲ್ಲೆ ಕೊಲೆಯಾಗಿದ್ದಾನೆ. ಆತನಿಗೆ ಇಟ್ಟಿಗೆಯಿಂದ ಹೊಡೆಯುವ ವಿಡಿಯೋವನ್ನು ರಸ್ತೆ ಭಾಗದಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವರುಣ್ ಎಂಬ ವ್ಯಕ್ತಿಯನ್ನು ಹೊಡೆಯುತ್ತಿರವುದನ್ನು ಕಾಣಬಹುದು. ವರುಣ್ ಉಪಾಹಾರ ಗೃಹದ ಹತ್ತಿರದಲ್ಲೇ ವಾಸವಾಗಿದ್ದು ಮತ್ತು ಡೈರಿ ವ್ಯಾಪಾರವನ್ನು ನಡೆಸುತ್ತಿದ್ದರು. ಅವರ ತಂದೆ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿ.
#Ghaziabad ढाबे पर गाड़ी पार्क करने को लेकर हुए विवाद के रिटायर्ड दरोगा के बेटे के सिर पर ईंट मारकर हत्या कर दी गयी, घटना टीलामोड थाना क्षेत्र का है।घटना की लाइव वीडियो वायरल @ghaziabadpolice @SspGhaziabad pic.twitter.com/RH0PmLGxru
— Suman Chaudhary (@SumanCh22775734) October 26, 2022
ಗಾಯಗೊಂಡ ವರುಣ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಇಂತಹ ಘಟನೆಗಳು ನಡೆಯುತ್ತಿರುವುದು ಗಾಜಿಯಾಬಾದ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಬೀದಿಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಕ್ರಮ ಕೈಗೊಳ್ಳವಲ್ಲಿ ಪೊಲೀಸರ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವರುಣ್ ಅವರ ಸಂಬಂಧಿಕರು, ಸ್ಥಳೀಯ ಪೊಲೀಸರು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
Published On - 2:50 pm, Wed, 26 October 22




