ಬೆಂಗಳೂರು: ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದವನ ಬಂಧನ

ಇನ್​​ಸ್ಟಾಗ್ರಾಂ ಮೂಲಕ ಆರ್ಡರ್ ಮಾಡಿ ವಿದೇಶದಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಲೇಜೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದ್ದು, ಹಲವು ವಿಚಾರಗಳು ಬಯಲಾಗಿವೆ. ವಿವರ ಇಲ್ಲಿದೆ.

ಬೆಂಗಳೂರು: ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದವನ ಬಂಧನ
ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಪ್ಲ್ಯಾನ್: ಐವರು ಆರೋಪಿಗಳ ಬಂಧನ
Edited By:

Updated on: Sep 10, 2024 | 12:15 PM

ಬೆಂಗಳೂರು, ಸೆಪ್ಟೆಂಬರ್ 10: ಇನ್​​ಸ್ಟಾಗ್ರಾಂ ಮೂಲಕ ಆರ್ಡರ್ ಮಾಡಿ ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ಆರೋಪಿ ತೌನೇಶ್ ಎಂಬಾತನನ್ನು ಬೆಂಗಳೂರು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1.22 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಂಧ್ರಹಳ್ಳಿಯ ಕಾಲೇಜೊಂದರ ಬಳಿ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಆರೋಪಿ ಬಳಿಯಿದ್ದ 2 ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ತೌನೇಶ್​ಗೆ ಕೇರಳ ಮೂಲದ ಸೈಜು ಎಂಬಾತನಿಂದ ಹೈಡ್ರೋ ಗಾಂಜಾ ಬರುತ್ತಿತ್ತು ಎನ್ನಲಾಗಿದೆ.

ತೌನೇಶ್​ಗೆ ಒಂದು ವರ್ಷದ ಹಿಂದೆ ಇನ್​​ಸ್ಟಾಗ್ರಾಂನಲ್ಲಿ ಸೈಜು ಪರಿಚಯವಾಗಿದ್ದ. ಈತ ವಿಮಾನ ನಿಲ್ದಾಣದಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ. ಸಿಂಥೆಟಿಕ್ ಪೇಪರ್​​ನಲ್ಲಿ ಸುತ್ತಿ ಬಿಸ್ಕೆಟ್ ಬಾಕ್ಸ್​ನಲ್ಲಿ ಗಾಂಜಾ ತರಲಾಗುತ್ತಿತ್ತು. ಸಿಂಥೆಟಿಕ್ ಪೇಪರ್​​ನಲ್ಲಿ ಸುತ್ತಿರುವುದರಿಂದ ವಾಸನೆ ಕೂಡ ಬರುತ್ತಿರಲಿಲ್ಲ. ಜೊತೆಗೆ, ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಎಂಬುದು ಗೊತ್ತಾಗುತ್ತಿರಲಿಲ್ಲ.

ಬಟ್ಟೆ ವ್ಯಾಪಾರಿಯಾಗಿರುವ ತೌನೇಶ್ 2020 ರಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ 4 ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಮಾಲೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಕೋಲಾರ ಜಿಲ್ಲೆಯ ಜಿಲ್ಲೆ ಮಾಲೂರು ತಾಲೂಕಿನ ಬ್ಯಾಲಹಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಾಲೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನವಾಗಿದೆ.

ಇದನ್ನೂ ಓದಿ: ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ವಾಷಿಂಗ್​ ಮಷಿನ್​ನಲ್ಲಿ ಬಚ್ಚಿಟ್ಟಿದ್ದ ಮಹಿಳೆ

ಬಿಹಾರ ಮೂಲದ ರಂಜನ್ ಕುಮಾರ್, ಬಾಮ್ ಬಾಮ್ ಕುಮಾರ್ ಭಾರತಿ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 36 ಸಾವಿರ ರೂ. ಬೆಲೆಬಾಳುವ 850 ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us