ಪ್ರೀತಿಸಿ ಮದುವೆಯಾದವನಿಂದಲೇ ನರಕ, ಮಗಳನ್ನು ರಕ್ಷಿಸಲು ಪೋಷಕರಿಂದ ಕಾನೂನು ಹೋರಾಟ
ದಾವಣಗೆರೆ: ಆಕೆ ಮುದ್ದು ಹುಡುಗಿ. ಸಾಮಾನ್ಯ ಕುಟುಂಬ.. ಓದಿನಲ್ಲಿ ಸ್ವಲ್ಪ ಚುರುಕು. ಇದೇ ಕಾರಣಕ್ಕೆ ನರ್ಸಿಂಗ್ ಕೋರ್ಸ್ಗೆ ಸೀಟ್ ಸಹ ಸಿಕ್ಕಿತ್ತು. ಇದೇ ವೇಳೆ ಪ್ರೀತಿ ಪ್ರೇಮಾ ಅಂತಾ ದುಷ್ಟನೊಬ್ಬ ಗಂಟು ಬಿದಿದ್ದದ್ದ. ಆದ್ರೆ, ಆಕೆಗೆ ತಾಳಿ ಎಂಬ ದಾರವೇ ನರಕ ತೋರಿಸಿಬಿಟ್ಟಿದೆ! ಎಲಾ ಇವನಾ. ಮಾಡಿರೋದು ಪರಮ ನೀಚ ಕೆಲಸ. ಹೀಗಿದ್ರೂ ಇವನ ಸ್ಟೈಲು. ಇವನು ಲುಕ್ಕು. ಅಬ್ಬಾಬ್ಬ. ಯಾವ ಹೀರೋಗೂ ಕಮ್ಮಿ ಇಲ್ಲ ಬಿಡಿ. ಬೈಕ್ ಮೇಲೂ ಪೋಸ್ ಕೊಡ್ತಾನೆ.. ಪಂಚೆ ಸುತ್ಕೊಂಡು, ಕಣ್ಣಿಗೆ […]
ದಾವಣಗೆರೆ: ಆಕೆ ಮುದ್ದು ಹುಡುಗಿ. ಸಾಮಾನ್ಯ ಕುಟುಂಬ.. ಓದಿನಲ್ಲಿ ಸ್ವಲ್ಪ ಚುರುಕು. ಇದೇ ಕಾರಣಕ್ಕೆ ನರ್ಸಿಂಗ್ ಕೋರ್ಸ್ಗೆ ಸೀಟ್ ಸಹ ಸಿಕ್ಕಿತ್ತು. ಇದೇ ವೇಳೆ ಪ್ರೀತಿ ಪ್ರೇಮಾ ಅಂತಾ ದುಷ್ಟನೊಬ್ಬ ಗಂಟು ಬಿದಿದ್ದದ್ದ. ಆದ್ರೆ, ಆಕೆಗೆ ತಾಳಿ ಎಂಬ ದಾರವೇ ನರಕ ತೋರಿಸಿಬಿಟ್ಟಿದೆ!
ಎಲಾ ಇವನಾ. ಮಾಡಿರೋದು ಪರಮ ನೀಚ ಕೆಲಸ. ಹೀಗಿದ್ರೂ ಇವನ ಸ್ಟೈಲು. ಇವನು ಲುಕ್ಕು. ಅಬ್ಬಾಬ್ಬ. ಯಾವ ಹೀರೋಗೂ ಕಮ್ಮಿ ಇಲ್ಲ ಬಿಡಿ. ಬೈಕ್ ಮೇಲೂ ಪೋಸ್ ಕೊಡ್ತಾನೆ.. ಪಂಚೆ ಸುತ್ಕೊಂಡು, ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಫೋಟೋ ತೆಗಿಸಿಕೊಳ್ತಾನೆ.
ಅಸಲಿಗೆ ಇವನ್ ಮಾಡಿದ್ದು ಪ್ರೀತಿ ಹೆಸರಲ್ಲಿ ಮೋಸ. ಕಪಟ ನಾಟಕ. ಅದು ಕೂಡ ಪ್ರೇಯಸಿಗೆ ಚಿತ್ರಹಿಂಸೆ ಕೊಟ್ಟ ಪಾಪಿ. ವಿಕೃತ ಆನಂದ ಪಡ್ತಿದ್ದ ಕ್ರಿಮಿ.
ಪಾಪ ಕಣ್ರೀ.. ಪಾಪ.. ಈಕೆ ಅನುಭವಿಸಿದ್ದು ಮಾತ್ರ ನರಕಯಾತನೆ. ರಾಕ್ಷಸನ ಕೈಗೆ ಸಿಲುಕಿ ಮೈ, ಕೈ ಸುಟ್ಕೊಂಡು ಬದುಕಿದ್ದ ಮುಗ್ಧೆ. ಹೆಸರು ಪ್ರಿಯಾ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಿ. ಇವನು ಭರಮಸಮುದ್ರ ಗ್ರಾಮದ ಕಲ್ಲೇಶ್. 2017ರಲ್ಲಿ ಪ್ರಿಯಾಳನ್ನ ಪಟಾಯಿಸ್ಕೊಂಡು ಮದುವೆ ಆಗಿದ್ದ. ಒಂದುವರೆ ವರ್ಷ ಆಕೆಯನ್ನ ನರ್ಸಿಂಗ್ ಕಾಲೇಜಿಗೂ ಕಳಿಸಿದ್ದ. ಆದ್ರೆ, ಕಳೆದ ಒಂದು ವರ್ಷದ ಹಿಂದೆ ತನ್ನ ವರಸೆಯನ್ನೇ ಚೇಂಜ್ ಮಾಡ್ಕೊಂಡಿದ್ದ. ರಾತ್ರಿ ಆದ್ರೆ ಸಾಕು ಪ್ರಿಯಾಳಿಗೆ ಚಿತ್ರಹಿಂಸೆ ಕೊಡ್ತಿದ್ದ. ಮೇಣದ ಬತ್ತಿ ಹಚ್ಚಿ, ಅದ್ರಿಂದ ಅದಕ್ಕೆ ಕಬ್ಬಿಣದ ಮೊಳೆಯನ್ನ ಬಿಸಿ ಮಾಡ್ಕೊಂಡು ಪತ್ನಿಗೆ ಇಡ್ತಿದ್ದ. ಈ ವೇಳೆ ಅವಳು ನರಳುವುದನ್ನ ನೋಡಿ ವಿಕೃತ ಆನಂದ ಪಡ್ತದ್ನಂತೆ. ಈ ವಿಚಾರ ಪ್ರಿಯಾ ಗೆಳತಿ ಮೂಲಕ ಅವರ ತಂದೆ-ತಾಯಿಗೆ ಗೊತ್ತಾಗಿದೆ. ಹೀಗಾಗಿ ದಿಟ್ಟತದಿಂದ ಪಾಲಕರು ಮಗಳನ್ನ ರಕ್ಷಿಸಿ ನರಕದಿಂದ ಹೊರ ತಂದಿದ್ದಾರೆ.
ಇನ್ನು, ಪ್ರಿಯಾ ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರೋ ಸರ್ಕಾರಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿ. ತಾಯಿ ಜಯಮ್ಮ ಅಂಗನವಾಡಿಯಲ್ಲಿ ಕೆಲ್ಸ. ಹೀಗಾಗಿ ಮಗಳ ಭವಿಷ್ಯದ ಬಗ್ಗೆ ವಿಪರೀತ ಕಾಳಜಿ. ನರ್ಸಿಂಗ್ ಮಾಡಿದ್ರೆ ಸುರಕ್ಷಿತವಾಗಿ ಮಗಳು ಬದುಕು ನಡೆಸಬಹುದು ಎಂಬುದು ತಾಯಿ ಆಸೆ. ಆದ್ರೆ, ಪ್ರೀತಿ ಹೆಸರಲ್ಲಿ ಎಂಟ್ರಿ ಕೊಟ್ಟ ಕಲ್ಲೇಶ್, ಪ್ರಿಯಾಳ ಜೀವನವನ್ನೇ ನರಕಮಾಡಿಬಿಟ್ಟಿದ್ದಾನೆ.
ಸದ್ಯ, ಪಾಪಿ ಕಲ್ಲೇಶ್ನ ವಿರುದ್ಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೊಂದವರು ಭಂಡನಿಗೆ ಶಿಕ್ಷೆ ಕೊಡಿಸಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.