ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್ಗೆ ಚಾಕು ಇರಿದಿದ್ದ ಆರೋಪಿಗಳು ಅಂದರ್
ಬೆಂಗಳೂರು: ಹೊಸ ವರ್ಷದಂದು ಹೋಟೆಲ್ ಸಪ್ಲೇಯರ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹರಿ, ಕರ್ಣ, ರಂಜಿತ್, ಸಂತೋಷ್, ವಿಜಯ್ ಸೇರಿ ಆರು ಮಂದಿ ಬಂಧಿತ ಆರೋಪಿಗಳು. ಜನವರಿ 1ರ ಹೊಸ ವರ್ಷಾಚರಣೆಗೆ ದೊಡ್ಡಬಾಣಸವಾಡಿಯ ಹೋಟೆಲ್ವೊಂದರಲ್ಲಿ ಆರೋಪಿಗಳು ರೂಂ ಬುಕ್ ಮಾಡಿದ್ದರು. 4 ಮಂದಿ ಅಂತೇಳಿ ರೂಂ ಪಡೆದು ಸುಮಾರು 12ಕ್ಕೂ ಹೆಚ್ಚು ಮಂದಿ ರೂಂನಲ್ಲಿ ಸೇರಿದ್ದರು. ಹೋಟೆಲ್ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡ್ತಿದ್ರು. ಈ ವೇಳೆ ಗಲಾಟೆ ಮಾಡ್ಬೇಡಿ, ಇತರೆ ಗ್ರಾಹಕರಿಗೆ […]
ಬೆಂಗಳೂರು: ಹೊಸ ವರ್ಷದಂದು ಹೋಟೆಲ್ ಸಪ್ಲೇಯರ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹರಿ, ಕರ್ಣ, ರಂಜಿತ್, ಸಂತೋಷ್, ವಿಜಯ್ ಸೇರಿ ಆರು ಮಂದಿ ಬಂಧಿತ ಆರೋಪಿಗಳು.
ಜನವರಿ 1ರ ಹೊಸ ವರ್ಷಾಚರಣೆಗೆ ದೊಡ್ಡಬಾಣಸವಾಡಿಯ ಹೋಟೆಲ್ವೊಂದರಲ್ಲಿ ಆರೋಪಿಗಳು ರೂಂ ಬುಕ್ ಮಾಡಿದ್ದರು. 4 ಮಂದಿ ಅಂತೇಳಿ ರೂಂ ಪಡೆದು ಸುಮಾರು 12ಕ್ಕೂ ಹೆಚ್ಚು ಮಂದಿ ರೂಂನಲ್ಲಿ ಸೇರಿದ್ದರು. ಹೋಟೆಲ್ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡ್ತಿದ್ರು. ಈ ವೇಳೆ ಗಲಾಟೆ ಮಾಡ್ಬೇಡಿ, ಇತರೆ ಗ್ರಾಹಕರಿಗೆ ತೊಂದರೆಯಾಗತ್ತೆ ಅಂತಾ ಸಪ್ಲೈಯರ್ ಇರ್ಶಾದ್ ಹೇಳಿದ್ದರು.
ಇದರಿಂದ ಕೆರಳಿದ ಆರೋಪಿಗಳು ಇರ್ಶಾದ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ಇರ್ಶಾದ್ಗೆ ತೀವ್ರ ಗಾಯವಾಗಿತ್ತು. ಆರೋಪಿಗಳು ಹಲ್ಲೆ ನಡೆಸುವ ಸಂಪೂರ್ಣ ದೃಶ್ಯ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯ ವಶಕ್ಕೆ ಪಡೆದ ಬಾಣಸವಾಡಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.