ಅರಮನೆ ನಗರದಲ್ಲಿ ಮನೆ ಮನೆಯಲ್ಲೂ ಕಳ್ಳತನದ ಭೀತಿ, ಮಿತಿ ಮೀರಿದೆ ಥರಹೇವಾರಿ ಕಳ್ಳರ ಹಾವಳಿ

ಅರಮನೆ ನಗರದಲ್ಲಿ ಮನೆ ಮನೆಯಲ್ಲೂ ಕಳ್ಳತನದ ಭೀತಿ, ಮಿತಿ ಮೀರಿದೆ ಥರಹೇವಾರಿ ಕಳ್ಳರ ಹಾವಳಿ

ಮೈಸೂರು: ಪ್ರವಾಸಿಗರ ಹಾಟ್ ಫೇವರಿಟ್ ಪ್ಲೇಸ್. ಅರಮನೆ. ಚಾಮುಂಡಿ ಬೆಟ್ಟ. ಪ್ರಾಣಿ ಸಂಗ್ರಹಾಲಯ. ಅಬ್ಬಾ.. ಒಂದಕ್ಕಿಂತ ಒಂದು ಸೂಪರ್ ತಾಣ. ಇಂಥಾ ಜಗತ್​ವಿಖ್ಯಾತ ನಗರದಲ್ಲೇ ಈಗ ಕಳ್ಳರ ಹಾವಳಿ ಹೆಚ್ಚಾಗಿದೆ. ಸಿಕ್ಕ ಗ್ಯಾಪಲ್ಲೇ ಕೈ ಚಳಕ ತೋರಿಸ್ತಿದ್ದಾರೆ. ಅಮಾಯಕರ ದುಡ್ಡು ದೋಚುತ್ತಿದ್ದಾರೆ.

ಜ್ಯುವೆಲ್ಲರಿ ಶಾಪ್​ಗೇ ನುಗ್ಗಿ ದಾಳಿ!
ತಲೆಗೆ ಹೆಲ್ಮೇಟ್ಟು. ಒಂದು ಕೈಯಲ್ಲಿ ಸ್ಪ್ರೇ ಬಾಟಲ್. ಮತ್ತೊಂದು ಕೈಯಲ್ಲಿ ಸಿಗರೇಟ್ ಲೈಟರ್ ಹಿಡ್ಕೊಂಡು ಫುಲ್ ರೋಷಾವೇಷ. ತಡೆದವರನ್ನು ಹೊಡೆದು ದೋಚೇ ಬಿಡೋಣ ಅಂತಾ ಈ ಖದೀಮ ನುಗ್ತಾನೆ. ಅಂಗಡಿ ಕ್ಯಾಷ್ ಕೌಂಟರ್ ತೆರೆಯೋಕೆ ಯತ್ನಿಸ್ತಾನೆ. ಆದ್ರೆ, ಮೈಸೂರಿನ ಮೆಗಾ ಜ್ಯುವೆಲ್ಲರಿ ಅಂಗಡಿ ಮಾಲೀಕರು ಹೆದರಲೇ ಇಲ್ಲ. ಈ ಐನಾತಿಯ ಸ್ಟೈಲಲ್ಲೇ ಪ್ರತಿದಾಳಿ ಮಾಡಿದ್ರು. ಅಲ್ಲಿದ್ದ ಕುರ್ಚಿ ತೆಗೆದು ಕಳ್ಳನ ಮೇಲೆ ಎಸೀತಿದ್ದಂತೆ ಜೂಟ್ ಆಗಿದ್ದಾನೆ. ಈ ಬಗ್ಗೆ ಜುವೆಲ್ಲರಿ ಮಾಲೀಕರು ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳನಿಗೆ ಖಾಕಿ ಬಲೆ ಬೀಸಿದೆ.

ರಾತ್ರಿ ವೇಳೆ ಪೆಟ್ರೋಲ್​ ಕಳ್ಳತನ!
ರಾತ್ರಿ ಹೊತ್ತಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನೇ ಟಾರ್ಗೆಟ್ ಮಾಡ್ಕೊಂಡು ಎಂಟ್ರಿ ಕೊಡ್ತಾರೆ. ಸದ್ದೇ ಮಾಡದೆ ಮೆಲ್ಲನೆ ನುಗ್ಗಿ ಬೈಕ್​ಗಳಲ್ಲಿನ ಪೆಟ್ರೋಲ್ ಕದೀತಾರೆ. ಕೆಲಸ ಮುಗಿಸಿಕೊಂಡು ಎಸ್ಕೇಪ್ ಆಗ್ತಾರೆ. ಈ ಪೆಟ್ರೋಲ್ ಕಳ್ಳರ ಹಾವಳಿ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಹೆಚ್ಚಾಗಿದೆ.

ಕಳ್ಳನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು!
ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿತ. ಎತ್ತ ನೋಡಿದರತ್ತ ಏಟು. ಜನ ಕೋಡೋ ಏಟಿಗೆ ಈ ಐನಾತಿಗೆ ಹುಟ್ಟಿದ್ದು ಬೆಳೆದಿದ್ದೆಲ್ಲಾ ನೆನಪಾಗಿತ್ತು. ಇಷ್ಟಕ್ಕೂ ಈ ಕಿರಾತಕ ರಂಗನಾಥ್. ಮಾಡಿದ ಘನಾಂದಾರಿ ಕೆಲಸ ಏನಂದ್ರೆ. ಮೈಸೂರಿನ ಅಗ್ರಹಾರದ ಹೊಸಕೇರಿ 5 ನೇ ಕ್ರಾಸ್​ನಲ್ಲಿ ಒಂಟಿ‌ ಮಹಿಳೆ ಇರುವ ಮನೆಗೆ ನುಗ್ಗಿದ್ದ. ಅವರ ಸರ ಕಸಿದು ಎಸ್ಕೇಪ್ ಆಗೋಕೆ ಯತ್ನಿಸಿದ್ದ. ಈ ವೇಳೆ ಗಾಬರಿಗೊಂಡ ಮಹಿಳೆ ಕಿರುಚಾಡಿದ ಕೂಡ್ಲೇ ಸಾರ್ವಜನಿಕರು ಎಂಟ್ರಿ ಕೊಟ್ಟಿದ್ದಾರೆ. ಈ ಐನಾತಿಯನ್ನ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ.. ನಂತರ ಕೆ.ಆರ್ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಳ್ಳನಿಗೆ ಮೂಗಿನಲ್ಲಿ ರಕ್ತ ಬರುವಂತೆ ಗೂಸಾ!
ಈತನ ಮುಖವೇ ಊದುಕೊಂಡಿದೆ. ಮೂಗಿನಲ್ಲಿ ರಕ್ತ ಸೋರುತ್ತಿದೆ. ಆ ರೀತಿ ಜನ ಹೊಡೆದಿದ್ದಾರೆ.. ಯಾಕಂದ್ರೆ, ಈ ಐನಾತಿ ಪ್ರವೀಣ್, ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ.. ಬ್ರಾಹ್ಮಣರ ಮನೆಗಳನ್ನೆ ಟಾರ್ಗೆಟ್ ಮಾಡ್ಕೊಂಡಿದ್ದ. ದೇವಾಲಯಕ್ಕೆ ಹಾಗೂ ಮಠಕ್ಕೆ ಡೋನೇಷನ್‌ ಕೊಡುವ ನೆಪದಲ್ಲಿ ಬ್ರಾಹ್ಮಣರ ಮನೆಗೆ ಎಂಟ್ರಿ ಕೊಡ್ತಿದ್ದ. ಹಣ ನೀಡಿ ಒಳ್ಳೆಯವನಂತೆ ನಾಟಕವಾಡಿ ಅದೇ ಮನೆಯಲ್ಲೇ ಚೋರಿ ಮಾಡ್ತಿದ್ದ. 15ದಿನದ ಹಿಂದೆ ರಾಘವೇಂದ್ರ ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡಿ ಮನೆ ಕೀಲಿ ತೆಗೆದುಕೊಂಡು ಹೋಗಿದ್ದ. ಈ ವೇಳೆ ಸಾರ್ವಜನಿಕರ ಕೈಗೆ ತಗ್ಲಾಕ್ಕೊಂಡಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಒಟ್ನಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸರು ಎಷ್ಟೇ ಎಚ್ಚರ ವಹಿಸಿದ್ರೂ, ಚಾಲಾಕಿ ಕಳ್ಳರು ಇನ್ನೂ ಅಲರ್ಟ್​ ಆಗ್ತಿದ್ದಾರೆ. ಒಂದಿಲ್ಲೊಂದು ಕೃತ್ಯವೆಸಗಿ ಎಸ್ಕೇಪ್ ಆಗ್ತಿದ್ದಾರೆ. ಇದು ಮೈಸೂರು ಜನರ ನಿದ್ದೆಗೆಡಿಸಿದೆ. ಜತೆಗೆ ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.

Click on your DTH Provider to Add TV9 Kannada