ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಮುಳುಗಿ ಇಬ್ಬರು ಬೌದ್ಧ ಸನ್ಯಾಸಿಗಳ ದುರ್ಮರಣ

ಜಲಾಶಯದಲ್ಲಿ ಮುಳುಗಿ ಇಬ್ಬರು ಬೌದ್ದ ಸನ್ಯಾಸಿಗಳು ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ನಡೆದಿದೆ.

ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಮುಳುಗಿ ಇಬ್ಬರು ಬೌದ್ಧ ಸನ್ಯಾಸಿಗಳ ದುರ್ಮರಣ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2022 | 7:39 PM

ಕಾರವಾರ: ಜಲಾಶಯದಲ್ಲಿ ಮುಳುಗಿ ಇಬ್ಬರು ಬೌದ್ದ ಸನ್ಯಾಸಿಗಳು (monks) ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ನಡೆದಿದೆ. ಈಜಲು ಬಾಚಣಕಿ ಜಲಾಶಯಕ್ಕೆ ಟಿಬೇಟಿಯನ್ ಬೌದ್ದ ಸನ್ಯಾಸಿಗಳು ಬಂದಿದ್ದಾರೆ. ಈ ವೇಳೆ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎರಡೂ ಶವವನ್ನು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದಲ್ಲಿ ನಿಂತಿದ್ದ ಟಿಪ್ಪರ್​​ಗೆ ಡಿಕ್ಕಿ ಹೊಡೆದ ಶಾಲಾ ವಾಹನ

ಮಂಡ್ಯ: ನಿಂತಿದ್ದ ಟಿಪ್ಪರ್​ಗೆ ಶಾಲಾ ವಾಹನ ಡಿಕ್ಕಿ ಹೊಡೆದಿದ್ದು, 22 ಮಕ್ಕಳು ಹಾಗೂ ಇಬ್ಬರು ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ನಗರದ ಜ್ಯೋತಿ ಇಂಟರ್ನ್ಯಾಷನಲ್ ಹೋಟೆಲ್ ಬಳಿ ನಡೆದಿದೆ. ರಸ್ತೆಯಲ್ಲಿ ಯೂಟರ್ನ್ ತೆಗೆದುಕೊಳ್ಳುವ ವೇಳೆ ಅವಘಡ ಉಂಟಾಗಿದೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಚಿನ್ಮಯ ವಿದ್ಯಾಲಯದ ಶಾಲಾ ವಾಹನ ವಾಹನದಲ್ಲಿ 42 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಪ್ರಯಾಣ ಮಾಡುತ್ತಿದ್ದರು. ಟಿಪ್ಪರ್​ಗೆ ಡಿಕ್ಕಿಯಾದ ಪರಿಣಾಮ ಮಕ್ಕಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ತೆರಚಿದ ಗಾಯಗಳಾಗಿವೆ. ಮಂಡ್ಯ ಮಿಮ್ಸ್​ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಮಕ್ಕಳ ವಾರ್ಡ್​ಗೆ ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ ಭೇಟಿ ಪರಿಶೀಲನೆ ಮಾಡಿದರು.

ಇದನ್ನೂ ಓದಿ: Gadag News: ಗ್ರಾಮೀಣ ಭಾಗದ ಜನ್ರ ಮುಗ್ಧತೆ ದುರುಪಯೋಗ: ಕ್ರೇಡಿಟ್ ಕಾರ್ಡ್ ಬಳಸಿ 6 ಲಕ್ಷ ರೂ. ದೋಚಿದ ಸೇಲ್ಸ್ ಮನ್

ಆಸ್ತಿಗಾಗಿ ಕುಟುಂಬಗಳ ನಡುವೆ ಜಗಳ, ಗುಂಡು ಹಾರಿಸಿದ ಆರೋಪ

ಕೊಡಗು: ಜಿಲ್ಲೆ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿದ್ದು ಯುವಕನ ಮೇಲೆ ಗುಂಡು ಹಾರಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೊಡೆದಾಟದಲ್ಲಿ ನಿಶ್ಚಲ್(30) ಎಂಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ತಲೆ, ಕೈಗೆ ಗಂಭೀರ ಪೆಟ್ಟು ಬಿದ್ದಿದೆ. ಇದಕ್ಕೂ ಮೊದಲು ತೀರ್ಥ (28) ಎಂಬಾತನ ಮೇಲೆ ನಿಶ್ಚಲ್ ಶೂಟ್ ಮಾಡಿದ ಆರೋಪ ಕೇಳಿ ಬಂದಿದೆ.

ಗುಂಡು ತಾಗದೆ ತೀರ್ಥ ಪಾರಾಗಿದ್ದು ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡು ತಗುಲಿದೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Rowdy Sheeter: ದೆಹಲಿಯ ದರ್ಗಾವೊಂದರಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಬಂಧನ

ಪೂರ್ವಭಾವಿ ಸಭೆಯಲ್ಲಿ ಕುಸಿದು ಬಿದ್ದು ‘ಕೈ’ ಕಾರ್ಯಕರ್ತ ಸಾವು

ತುಮಕೂರು: ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವಂತಹ ಘಟನೆ ಕೊರಟಗೆರೆ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕ್ಯಾಶವಾರ ಗ್ರಾಮದ ನಾಗರಾಜಪ್ಪ(60) ಮೃತ ದುರ್ದೈವಿ. ಎಸ್.ಟಿ. ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ನಾಗರಾಜಪ್ಪ ಪಾಲ್ಗೊಂಡಿದ್ದರು. ಭಾಷಣ ಮುಗಿಸಿದ ತಕ್ಷಣ ವೇದಿಕೆಯಲ್ಲೇ ಕುಸಿದು ಬಿದಿದ್ದಾರೆ. ತಕ್ಷಣವೇ ಕೊರಟಗೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವನಪ್ಪಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.