ಶಿವಮೊಗ್ಗ: ಕ್ರಿಕೆಟ್​ ಆಡುವಾಗ ಸ್ನೇಹಿತರ ನಡುವೆ ಜಗಳ, ಓರ್ವನ ಕೊಲೆ, ಆರೋಪಿಗೆ ಗುಂಡೇಟು

ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಆರಂಭವಾದ ಜಗಳವು 23 ವರ್ಷದ ಅರುಣ್ ಎಂಬಾತನ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಅರುಣ್​ ಸ್ನೇಹಿತರೇ ಆರೋಪಿಗಳಾಗಿದ್ದಾರೆ. ಜಗಳದಲ್ಲಿ ಸಂಜಯ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೊಸಮನೆ ​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಕ್ರಿಕೆಟ್​ ಆಡುವಾಗ ಸ್ನೇಹಿತರ ನಡುವೆ ಜಗಳ, ಓರ್ವನ ಕೊಲೆ, ಆರೋಪಿಗೆ ಗುಂಡೇಟು
ಕೊಲೆಯಾದ ಅರುಣ್
Edited By: ವಿವೇಕ ಬಿರಾದಾರ

Updated on: May 06, 2025 | 10:51 PM

ಶಿವಮೊಗ್ಗ, ಮೇ 06: ಕ್ರಿಕೆಟ್ (Cricket) ಆಟದ ವೇಳೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಭದ್ರಾವತಿಯ (Bhadravati) ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಅರುಣ್ (23) ಮೃತ ದುರ್ದೈವಿ. ಸಂಜಯ್ (20) ಎಂಬುವರಿಗೆ ಗಂಭೀರ ಗಾಯವಾಗಿದೆ. ಅರುಣ್, ಸಚಿನ್, ಸಂಜು, ಪ್ರಜ್ವಲ್ ಕೊಲೆ ಮಾಡಿದ ಆರೋಪಿಗಳು.

ಅರುಣ್, ಸಚಿನ್, ಸಂಜು, ಪ್ರಜ್ವಲ್, ಕೊಲೆಯಾದ ಅರುಣ್​ ಮತ್ತು ಸಂಜಯ್​ ಸ್ನೇಹಿತರಾಗಿದ್ದಾರೆ. ಇವೆರಲ್ಲರೂ ಒಟ್ಟಾಗಿ ಸೋಮವಾರ ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನವೊಂದರಲ್ಲಿ ಕ್ರಿಕೆಟ್ ಆಡಿದ್ದಾರೆ. ಕ್ರಿಕೆಟ್​ ಆಡುತ್ತಿದ್ದ ವೇಳೆ ಯಾವುದೋ ಕಾರಣಕ್ಕೆ ಗಲಾಟೆಯಾಗಿದೆ.

ನಂತರ, ಕೊಲೆಯಾದ ಅರುಣ್​ ಸಂಜೆ ಕ್ರಿಕೆಟ್ ಆಟವಾಡಿ ಮನೆಗೆ ತೆರಳಿದ್ದಾರೆ. ನಂತರ, ಅರುಣ್, ಸಚಿನ್, ಸಂಜು, ಪ್ರಜ್ವಲ್ ಮದ್ಯ ಸೇವಿಸುತ್ತಾ ಕುಳಿತಿದ್ದಾಗ, ಕೊಲೆಯಾದ ಅರುಣ್​ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅರುಣ್​ ಜೊತೆಗೆ ಸಂಜಯ್​ ಕೂಡ ಬಂದಿದ್ದಾರೆ. ಈ ವೇಳೆ ಆರೋಪಿಗಳು ಜಗಳ ತೆಗೆದು, ಚಾಕುವಿನಿಂದ ಅರುಣ್​ನ​ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಅರುಣ್ ಜೊತೆ ಜಗಳಕ್ಕೆ ನಿಂತ ಸಂಜಯ್ ಕೈ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ
ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!
ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿಯ ಶವ ಪತ್ತೆ, ಕೊಲೆ ಶಂಕೆ
ಕಾಣೆಯಾಗಿದ್ದ ಮೇಲುಕೋಟೆಯ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾಳ ಶವ ಪತ್ತೆ

ಇನ್ನು, ಕೊಲೆ ಮಾಡಿದ ಬಳಿಕ ಆರೋಪಿಗಳಾದ ಅರುಣ್, ಸಚಿನ್, ಸಂಜು, ಪ್ರಜ್ವಲ್ ಸೇರಿದಂತೆ ಇನ್ನೂ ನಾಲ್ಕೈದು ಜನ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೃತ ಅರುಣ್, ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಹೊಸಮನೆ ​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ: ತನ್ನ ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಹತ್ಯೆಗೈದ

ಆರೋಪಿ ಅರುಣ್​ ಕಾಲಿಗೆ ಗುಂಡೇಟು

ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅರುಣ್​ ಕುಮಾರ್ ​​(23)ಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಅರುಣ್​ನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ, ಪೊಲೀಸರ ಮೇಲೆ ಹಲ್ಲೆಗೆ ಮಾಡಲು ಆರೋಪಿ ಅರುಣ್​ ಯತ್ನಿಸಿದ್ದಾನೆ. ಈ ವೇಳೆ ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಅರುಣ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಒಟ್ಟಾರೆಯಾಗಿ, ಕ್ರಿಕೆಟ್ ಆಟ ಆಡುತ್ತಿದ್ದ ಸಂದರ್ಭದಲ್ಲಿ ಜಗಳ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿರುವುದು ದುರಂತ. ಅದರಲ್ಲೂ ಸ್ನೇಹಿತರೇ, ದುಷ್ಮನ್​ಗಳಾಗಿ ಓರ್ವನ ಜೀವ ತೆಗೆಯುವ ಮಟ್ಟಿಗೆ ಸೇಡು, ಜಿದ್ದು ಬೆಳೆಸಿಕೊಂಡಿದ್ದು ದುರದೃಷ್ಟಕರ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Tue, 6 May 25

Loading...
Unable to load recommendations.
Follow Us