ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ 8 ಅಧಿಕಾರಿಗಳನ್ನು ಕೊಂದಿದ್ದ ಯುಪಿಯ  ವಿಕಾಸ ದುಬೆ ಅಸಾಮಾನ್ಯ ಮತ್ತು ಕ್ರೂರಿ ಗ್ಯಾಂಗ್​ಸ್ಟರ್ ಆಗಿದ್ದ

ತ್ವರಿತ ನ್ಯಾಯಕ್ಕಾಗಿ ಸಾರ್ವಜನಿಕ ಒತ್ತಡಕ್ಕೆ ಮಣಿದು ನಿಯಮ ಮತ್ತು ಕಾನೂನುಗಳನ್ನು ಸಮಾಧಿ ಮಾಡಲಾಗದು. ರಾಜ್ಯ ಸರ್ಕಾರಗಳು ಕಾನೂನನ್ನು ಅನುಸರಿಸಬೇಕು, ತನ್ನದೇ ಆದ ನಿಯಮಗಳನ್ನು ರಚಿಸಲು ಯಾವುದೇ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ 8 ಅಧಿಕಾರಿಗಳನ್ನು ಕೊಂದಿದ್ದ ಯುಪಿಯ  ವಿಕಾಸ ದುಬೆ ಅಸಾಮಾನ್ಯ ಮತ್ತು ಕ್ರೂರಿ ಗ್ಯಾಂಗ್​ಸ್ಟರ್ ಆಗಿದ್ದ
ಗ್ಯಾಂಗ್​​ಸ್ಟರ್ ವಿಕಾಸ ದುಬೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2022 | 8:08 AM

ವಿಕಾಸ ದುಬೆ ಅಂತಿಂಥ ಗ್ಯಾಂಗ್ ಸ್ಟರ್ ಆಗಿರಲಿಲ್ಲ. ಪೊಲೀರು ಸಹ ಅವನ ಹೆಸರು ಕೇಳಿಸಿಕೊಂಡರೆ ಹೆದರುತ್ತಿದ್ದರು. ನಿಮಗೆ, ಗೊತ್ತಿರಬಹುದು, ಉತ್ತರಪ್ರದೇಶ ಪೊಲೀಸರು ಜುಲೈ 10, 2020 ರಂದು ಅವನನ್ನು ಎನ್ಕೌಂಟರ್ ಒಂದರಲ್ಲಿ ಕೊಂದು ಹಾಕಿದರು. ಕೇವಲ ಒಂದು ವಾರ ಮೊದಲು ಪೊಲೀಸ್ ತಂಡವೊಂದು ತನ್ನನ್ನು ಹಿಡಿಯಲು ಸಿದ್ಧವಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದಾಕ್ಷಣ ಅವನ ತನ್ನ ಗ್ಯಾಂಗ್ ನೊಂದಿಗೆ ಆ ಠಾಣೆಯ ಮೇಲೆ ದಾಳಿ ನಡೆಸಿ 8 ಪೊಲೀಸ್ ಅಧಿಕಾರಿಗಳ ಮಾರಣಹೋಮ ನಡೆಸಿದ್ದ. ದಿನೇದಿನೆ ಹೆಚ್ಚುತ್ತಿದ್ದ ಅವನ ಅಪರಾಧಗಳು ಮತ್ತು ಸಹೋದ್ಯೋಗಿಗಳ ಸಾಮೂಹಿಕ ಹತ್ಯೆ ಉತ್ತರಪ್ರದೇಶದ ಪೊಲೀಸರನ್ನು ರೌದ್ರಾವತಾರ ತಳೆಯುವಂತೆ ಮಾಡಿತ್ತು. ತಂಡಗಳನ್ನು ಕಟ್ಟಿಕೊಂಡು ದುಬೆಯ ಬೇಟೆಗಿಳಿದ ಪೊಲೀಸರು ಮೂರು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಅವನ 5 ಸಹಚರರನ್ನು ಕೊಂದರು. ಪೊಲೀಸರು ಸೇನೆಯಂತೆ ತನ್ನ ತಂಡದ ಮೇಲೆ ದಾಳಿ ನಡೆತ್ತಿರುವುದನ್ನು ಕಂಡು ಕಂಗಾಲಾದ ದುಬೆ ಉಜ್ಜಯಿನಿಯಲ್ಲಿ ಪೊಲೀಸರಿಗೆ ಶರಣಾದ.

ಎನ್​ಕೌಂಟರ್​​​ನಲ್ಲಿ ಕೊಂದರು!

ಜುಲೈ 10 ರಂದು ನಡೆದ ಶೂಟೌಟ್ ನಲ್ಲಿ ಪೊಲೀಸರು ದುಬೆಯನ್ನು ಕೊಂದು ಹಾಕಿದರು. ಅವನನ್ನು ಕೊಂದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಿಷ್ಟು: ‘ದುಬೆಯನ್ನು ಕರೆದುಕೊಂಡು ಬರುವಾಗ ಅವನಿದ್ದ ವಾಹನ ಅಪಘಾತಕ್ಕೀಡಾಯಿತು. ಕೂಡಲೇ ದುಬೆ ಕಾನಸ್ಟೇಬಲೊಬ್ಬನ ಕೈಯಲ್ಲಿದ್ದ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸಿದ. ಅವನು ನಮ್ಮ ಮೇಲೆ ಗುಂಡು ಹಾರಿಸಲು ಆರಂಭಿಸಿದಾಗ ನಾವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಮತ್ತು ಎನ್​ಕೌಂಟರ್ ನಲ್ಲಿ ಅವನು ಗುಂಡು ತಾಕಿ ಸತ್ತುಬಿಟ್ಟ’

ಎನ್​ಕೌಂಟರ್ ಯಾಕೆ ನಡೆಯತ್ತವೆ, ಹೇಗೆ ನಡೆಯುತ್ತವೆ ಅಂತ ನಮಗೆ ಗೊತ್ತಿದೆ. ಇದು ವಿಶೇಷವಾಗಿ ಭಾರತದಲ್ಲಿ ಮಿಲಿಟರಿ ಪಡೆಗಳನ್ನು ಒಳಗೊಂಡ ಕಾನೂನು ಬೆಂಬಲಿತವಲ್ಲದ ಮರಣದಂಡನೆಗೆ ಸೌಮ್ಯೋಕ್ತಿಯಾಗಿದೆ. ಇದರಲ್ಲಿ ತನಿಖಾಧಿಕಾರಿ, ನ್ಯಾಯಾಧೀಶರು ಮತ್ತು ಕಾರ್ಯನಿರ್ವಾಹಕ-ಮೊದಲಾದವರು ಒಬ್ಬ ಪೊಲೀಸ್ ಅಧಿಕಾರಿಯ ರೂಪದಲ್ಲಿ ಸಂಯೋಜಿಸಲ್ಪಟ್ಟಿರುತ್ತಾರೆ. 1990 ಮತ್ತು 2000 ದಶಕದ ಆರಂಭದಲ್ಲಿ, ಮುಂಬೈ ಪೋಲೀಸ್ ಭೂಗತ ಪಾತಕಿಗಳಿಗೆ ಒಂದು ಗತಿ ಕಾಣಿಸಲು ಎನ್‌ಕೌಂಟರ್ ಪದ್ಧತಿಯನ್ನು ಅಳವಡಿಸಿಕೊಂಡಿತ್ತು.

Vikas Dubey killed here in encounter

ವಿಕಾಸ ದುಬೆಯ ಎನ್​​​ಕೌಂಟರ್ ನಡೆದ ಸ್ಥಳ

ತ್ವರಿತ ನ್ಯಾಯ ಒದಗಿಸಲು ಎನ್​ಕೌಂಟರ್!

ಎನ್​ಕೌಂಟರ್​ಗಳ ಮೂಲಕ ಪ್ರಕರಣಗಳಿಗೆ ತ್ವರಿತ ನ್ಯಾಯ ಒದಗಿಸಲು ಮುಂಬೈ ಪೊಲೀಸ್ ಬಳಸಲಾರಂಭಿಸಿದ್ದ ವಿಧಾನ ಇತರ ಪ್ರಮುಖ ನಗರಗಳಿಗೂ ಹಬ್ಬಿತು. ಸುಳ್ಳು ಎನ್‌ಕೌಂಟರ್‌ಗಳಿಗೆ ಸಾಮಾನ್ಯವಾಗಿ ನೀಡಲಾಗುವ ಸಮರ್ಥನೆಯೆಂದರೆ ಕಾನೂನು ವ್ಯವಸ್ಥೆಯು ಜಡವಾಗಿದೆ ಮತ್ತು ಸಾಕ್ಷಿಗಳ ಬಾಯಿ ಮುಚ್ಚಿಸಲು ಶಕ್ತರಾಗಿರುವ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸುವುದು ದುಸ್ಸಾಧ್ಯವಾಗಿದೆ ಅನ್ನೋದು.

ತ್ವರಿತ ನ್ಯಾಯ, ಸಾಕಷ್ಟು ಸಾಕ್ಷ್ಯಾಧಾರ ಕಾರ್ಯವಿಧಾನಗಳು ಮತ್ತು ಸಾಕ್ಷಿಗಳ ರಕ್ಷಣೆಗಾಗಿ ಶಾಸನವನ್ನು ಬದಲಾಯಿಸಲು ಆಥವಾ ಕಾನೂನಲ್ಲಿ ತಿದ್ದುಪಡಿ ತರಲು ಸರ್ಕಾರಗಳಿಗೆ ಎದುರಾಗುತ್ತಿರುವ ಸಮಸ್ಯೆಯಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಪರಾಧ ದಂಡ ಸಂಹಿತೆ, 1973 ಮತ್ತು ಎವಿಡೆನ್ಸ್ ಆಕ್ಟ್, 1872 ಮೊದಲಾದ ಓಬೀರಾಯನ ಕಾಲದ ಪದ್ಧತಿಗಳು ಅಥವಾ ಕಾನೂನು ವಿಧಾನಗಳು ಈಗಲೂ ಜಾರಿಯಲ್ಲಿರುವುದು ಸೋಜಿಗ ಹುಟ್ಟಿಸುತ್ತದೆ.ನ್ಯಾಯಾಂಗದ ವ್ಯವಸ್ಥೆಯನ್ನು ಬದಲಾಯಿಸಲು ಇರುವ ಹಿಂಜರಿತ ಮತ್ತು ಉದ್ದೇಶಪೂರ್ವಕ ಅಸಾಮರ್ಥ್ಯವನ್ನು ಅಕ್ರಮ ಶಾರ್ಟ್‌ಕಟ್‌ಗಳನ್ನು ಬಳಸಿ ಸಮರ್ಥಿಸಿಕೊಳ್ಳುವುದು ಆಕ್ಷಮ್ಯವೇ ಸರಿ.

ಬಲಿಯಾದ ಪೊಲೀಸರು ಮತ್ತು ಸತ್ತ ನಾಗರಿಕರಿಗೆ ನ್ಯಾಯ ಒದಗಿಸಬೇಕೆನ್ನುವ ಸಂಗತಿ ನಿಜ, ಆದರೆ ಬೇರೆಯವರ ಜೀವ ಪಡೆಯುವ ಮೂಲಕ ಅಲ್ಲ. ತ್ವರಿತ ನ್ಯಾಯಕ್ಕಾಗಿ ಸಾರ್ವಜನಿಕ ಒತ್ತಡಕ್ಕೆ ಮಣಿದು ನಿಯಮ ಮತ್ತು ಕಾನೂನುಗಳನ್ನು ಸಮಾಧಿ ಮಾಡಲಾಗದು. ರಾಜ್ಯ ಸರ್ಕಾರಗಳು ಕಾನೂನನ್ನು ಅನುಸರಿಸಬೇಕು, ತನ್ನದೇ ಆದ ನಿಯಮಗಳನ್ನು ರಚಿಸಲು ಯಾವುದೇ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವಿಕಾಸ ದುಬೆ ಪ್ರಕರಣದಲ್ಲಿ ನ್ಯಾಯಾಂಗದ ಪಾತ್ರ

ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸಲು ಜುಲೈ 2020ರಲ್ಲಿ ಸುಪ್ರೀಮ್ ಕೋರ್ಟ್ ಮಾಜಿ ನ್ಯಾಯಾಧೀಶ ಬಿಎಸ್ ಚೌಹಾನ್, ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಶಶಿಕಾಂತ್ ಅಗರವಾಲ್ ಮತ್ತು ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಕೆ ಎಲ್ ಗುಪ್ತಾ-ಮೂವರನ್ನು ಒಳಗೊಂಡ ಒಂದು ನ್ಯಾಯಾಂಗ ಸಮಿತಿಯನ್ನು ರಚಿಸಲಾಯಿತು.

ವಿಕಾಸ ದುಬೆಯ ಮೇಲೆ ಸ್ಥಳೀಯ ಪೊಲೀಸ್, ಕಂದಾಯ ಮತ್ತು ಆಡಳಿತಾತ್ಮಕ ಅಧಿಕಾರಿಗಳ ಕೃಪಾಕಟಾಕ್ಷವಿತ್ತು ಅನ್ನೋದನ್ನು ಖಚಿತಪಡಿಸುವ ಸಾಕಷ್ಟು ಪುರಾವೆಗಳು ನ್ಯಾಯಾಂಗ ಸಮಿತಿಗೆ ಲಭ್ಯವಾದವು. ಏಪ್ರಿಲ್ 2021 ರಲ್ಲಿ ಆಯೋಗವು ಉತ್ತರ ಪ್ರದೇಶ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಆದರೆ ಅಗಸ್ಟ್ 19, 2021 ರವರೆಗೆ ಸದರಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಲಿಲ್ಲ. ವರದಿಯಲ್ಲಿ ಕೆಳಗಿನ ಅಂಶಗಳು ಉಲ್ಲೇಖವಾಗಿದ್ದವು:

ವಿಕಾಸ ದುಬೆ ಇಲ್ಲವೇ ಅವನ ಸಹಚರರ ವಿರುದ್ಧ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋದರೆ, ಪೊಲೀಸರು ಅವರನ್ನು ತಾತ್ಸಾರಭಾವದಿಂದ ನೋಡುತ್ತಿದ್ದರು. ಮೇಲಾಧಿಕಾರಿಗಳು ದೂರು ದಾಖಲಿಸಿಕೊಳ್ಳುವಂತೆ ಸೂಚಿಸಿದರೂ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದರು.

ದುಬೆಯ ಸೂಕ್ತ ವಿಚಾರಣೆ ಯಾವತ್ತೂ ನಡೆದಿರಲಿಲ್ಲ!

ವಿಕಾಸ ದುಬೆ ಮತ್ತು ಅವನ ಗ್ಯಾಂಗ್ ವಿರುದ್ಧ ಯಾವತ್ತೂ ಸೂಕ್ತವಾದ ತನಿಖೆ ಮತ್ತು ವಿಚಾರಣೆ ನಡೆಯಲಿಲ್ಲ. ಅವನ ವಿರುದ್ಧ ಚಾರ್ಜ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಿದಾಗ ಮಹತ್ತರವಾದ ಅಪರಾಧಗಳಿಗೆ ಅನ್ವಯಿಸುವ ಸೆಕ್ಷನ್ ಗಳನ್ನು ಚಾರ್ಜ್ ಶೀಟ್ ತೆಗೆದು ಹಾಕಲಾಗುತಿತ್ತು. ವಿಚಾರಣೆ ನಡೆಯುವಾಗ ಬಹಳಷ್ಟು ಸಾಕ್ಷಿಗಳು ಉಲ್ಟಾ ಹೊಡೆಯುತ್ತಿದ್ದರು.

ರಾಜ್ಯದ ಅಧಿಕಾರಿಗಳು ಮತ್ತು ಸರ್ಕಾರೀ ವಕೀಲರಿಂದ ಯಾವುದೇ ವಿರೋಧ ವ್ಯಕ್ತವಾಗುತ್ತಿರಲಿಲ್ಲವಾದ್ದರಿಂದ ಅವರಿಗೆ ಕ್ಷಿಪ್ರವಾಗಿ ಮತ್ತು ಸುಲಭವಾಗಿ ಜಾಮೀನು ಸಿಕ್ಕು ಬಿಡುತಿತ್ತು. ಅವನಿಗೆ ಸಿಕ್ಕ ಜಾಮೀನನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಯಾವತ್ತೂ ಉಚ್ಚಸ್ತರದ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ. ದುಬೆ ನಡೆಸುತ್ತಿದ್ದ ಅಕ್ರಮ ವ್ಯವಹಾರಗಳು ಮತ್ತು ಅವನ ಗ್ಯಾಂಗ್ ನಲ್ಲಿದ್ದ ಅಕ್ರಮ ಮತ್ತು ಆದುನಿಕ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಕಾನ್ಪುರದಲ್ಲಿರುವ ಗುಪ್ತಚರ ದಳ ಸಂಪೂರ್ಣವಾಗಿ ವಿಫಲವಾಗಿದೆ.

ಅವನ ಅಡ್ಡೆಗಳ ಮೇಲೆ ದಾಳಿ ನಡೆಸುವಾಗ ಪೊಲೀಸರು ಯಾವುದೇ ಬಗೆಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಯಾವೊಬ್ಬ ಪೊಲೀಸನೂ ಬುಲೆಟ್ ಪ್ರೂಪ್ ಜಾಕೆಟ್ ಧರಿಸುತ್ತಿರಲಿಲ್ಲ. ಕೆಲವೇ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಆಯುಧಗಳಿದ್ದವು ಮತ್ತು ಉಳಿದವರು ಕೇವಲ ಲಾಠಿಗಳನ್ನು ಹಿಡಿದಿದ್ದರು.

ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ!

ಒಂದು ನಾರ್ಮಲ್ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಆದೇಶಗಳನ್ನು ಹೊರಡಿಸಿದ ನಂತರ ನ್ಯಾಯಾಂಗ ಸಮಿತಿಯು, ಕರ್ತವ್ಯಲೋಪವೆಸಗಿದ ಸರ್ಕಾರೀ ಸಾರ್ವಜನಿಕ ನೌಕರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿತು.

ತನಿಖೆಯು ದುಬೆಯ ಸೋದರಮಾವ ಪ್ರೇಮ್ ಪ್ರಕಾಶ್, ಅವನ ಸಹಾಯಕ ಅತುಲ್ ದುಬೆ, ಅಮರ್ ದುಬೆ, ಪ್ರವೀಣ್ ಕುಮಾರ್ ದುಬೆ ಮತ್ತು ಎನ್‌ಕೌಂಟರ್‌ಗಳಲ್ಲಿ ಹತರಾದ ಪ್ರಭಾತ್ ಮಿಶ್ರಾ ಅವರನ್ನು ದೋಷಮುಕ್ತಗೊಳಿಸಿತು.

ಆಯೋಗದ ವರದಿಯ ಪ್ರಕಾರ ದುಬೆಯ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ ಪೊಲೀಸ್ ಅಧಿಕಾರಿಗಳು ಅನುಭವಿಸಿದ ಗಾಯಗಳು ಖುದ್ದು ಮಾಡಿಕೊಂಡಂತೆ ಕಾಣಲಿಲ್ಲ, ಆದರೆ ಆರೋಪಿಗಳ ದೇಹಗಳ ಮೇಲಿದ್ದ ಗಾಯಗಳು ಪ್ರಮುಖ ಅಂಗಾಂಗಳನ್ನು ಹೊರತುಪಡಿಸಿ ಬೇರೆ ಭಾಗಗಳಲ್ಲಿ ಆಗಿದ್ದವು.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು