AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ; ತಿಂಗಳಿಗೆ 9,000ರೂ. ಸ್ಟೈಫಂಡ್‌ನೊಂದಿಗೆ ಬಂಪರ್ ಉದ್ಯೋಗಾವಕಾಶ!

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಯುವಜನತೆಗೆ ಕೌಶಲ್ಯ ತರಬೇತಿ, ಉದ್ಯೋಗಾವಕಾಶ ಹಾಗೂ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ತಿಂಗಳಿಗೆ 9,000 ರೂ. ಸ್ಟೈಫಂಡ್, 6,000ರೂ. ಆರಂಭಿಕ ಧನಸಹಾಯ ಮತ್ತು ಉಚಿತ ವಿಮಾ ಸೌಲಭ್ಯ ಲಭ್ಯ. 6ರಿಂದ9 ತಿಂಗಳ ಪ್ರಾಯೋಗಿಕ ತರಬೇತಿ ಪಡೆದು ಉತ್ತಮ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ; ತಿಂಗಳಿಗೆ 9,000ರೂ.  ಸ್ಟೈಫಂಡ್‌ನೊಂದಿಗೆ ಬಂಪರ್ ಉದ್ಯೋಗಾವಕಾಶ!
ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆImage Credit source: Pinterest
ಅಕ್ಷತಾ ವರ್ಕಾಡಿ
|

Updated on: May 26, 2026 | 4:03 PM

Share

ದೇಶದ ಯುವಜನತೆಗೆ ಉದ್ಯೋಗ ಕೌಶಲ್ಯ ಹಾಗೂ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ (PM Internship Scheme 2026) ಅನ್ನು ಮತ್ತಷ್ಟು ಆಕರ್ಷಕ ನಿಯಮಗಳೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯಡಿ ದೇಶದ ಪ್ರಮುಖ 500 ಕ್ಕೂ ಹೆಚ್ಚು ಕಂಪನಿಗಳಲ್ಲಿ ಯುವಕ-ಯುವತಿಯರಿಗೆ ಇಂಟರ್ನ್‌ಶಿಪ್ (ತರಬೇತಿ) ಅವಕಾಶ ಸಿಗಲಿದ್ದು, ಪ್ರತಿ ತಿಂಗಳು ಭಾರಿ ಸ್ಟೈಫಂಡ್ ಕೂಡ ಲಭ್ಯವಾಗಲಿದೆ. ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ತಿಂಗಳ ಭತ್ಯೆ (Stipend):

ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತಿ ತಿಂಗಳು 9,000 ಸ್ಟೈಫಂಡ್ ಸಿಗಲಿದೆ. ಇದರಲ್ಲಿ 8,100 ರೂ. ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ (DBT) ಜಮಾ ಮಾಡಿದರೆ, ಉಳಿದ 900ರೂ. ಹಣವನ್ನು ಇಂಟರ್ನ್‌ಶಿಪ್ ನೀಡುವ ಕಂಪನಿ ಭರಿಸುತ್ತದೆ. ಇದಲ್ಲದೇ ಇಂಟರ್ನ್‌ಶಿಪ್‌ಗೆ ಸೇರಿದ ತಕ್ಷಣ ಆರಂಭಿಕ ವೆಚ್ಚಗಳಿಗಾಗಿ ಸರ್ಕಾರದಿಂದ 6,000ರೂ. ಒನ್-ಟೈಮ್ ಗ್ರಾಂಟ್ (ಒಂದು ಬಾರಿಯ ಧನಸಹಾಯ) ಸಿಗಲಿದೆ.

ಉಚಿತ ವಿಮೆ ಸೌಲಭ್ಯ:

ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮಾ ಸೌಲಭ್ಯ ಸಿಗುತ್ತದೆ.

ಕರ್ನಾಟಕದ ಕಂಪನಿಗಳಲ್ಲೇ ಅವಕಾಶ:

ಈ ಯೋಜನೆಯಡಿ ಭಾರತದ ಪ್ರಮುಖ ಕಾರ್ಪೊರೇಟ್ ಕಂಪನಿಗಳು (ಉದಾಹರಣೆಗೆ ಮಾರುತಿ, ಐಸಿಐಸಿಐ, ಎಕ್ಸೈಡ್, ಮತ್ತು ಬೆಂಗಳೂರಿನ ಹಲವು ಪ್ರಮುಖ ಐಟಿ/ಕಾರ್ಪೊರೇಟ್ ಸಂಸ್ಥೆಗಳು) ಭಾಗವಹಿಸುತ್ತಿರುವುದರಿಂದ, ಕರ್ನಾಟಕದ ಯುವಕ-ಯುವತಿಯರು ತಮ್ಮದೇ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ (ಬೆಂಗಳೂರು, ಮೈಸೂರು, ಮಂಗಳೂರು ಮುಂತಾದೆಡೆ) ತರಬೇತಿ ಪಡೆಯಬಹುದು.

ಅರ್ಹತೆಗಳೇನು?

ಈ ಬಾರಿ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಹೆಚ್ಚಿನ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. 18 ರಿಂದ 25 ವರ್ಷದೊಳಗಿನ ಭಾರತೀಯ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ, ಪಿಯುಸಿ (12th), ಐಟಿಐ (ITI), ಪಾಲಿಟೆಕ್ನಿಕ್ ಡಿಪ್ಲೊಮಾ, ಬಿಎ, ಬಿಕಾಂ, ಬಿಸ್ಸಿ, ಬಿಸಿಎ, ಬಿಬಿಎ, ಬಿಇ/ಬಿಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದ ಪದವಿ (UG) ಮತ್ತು ಸ್ನಾತಕೋತ್ತರ ಪದವಿ (PG) ವಿದ್ಯಾರ್ಥಿಗಳಿಗೂ ಈಗ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಇಂಟರ್ನ್‌ಶಿಪ್ ಅವಧಿ ಮತ್ತು ಕೆಲಸದ ಕ್ಷೇತ್ರಗಳು:

ಈ ಇಂಟರ್ನ್‌ಶಿಪ್ ಅವಧಿಯು 6 ರಿಂದ 9 ತಿಂಗಳು ಇರಲಿದ್ದು, ಅಭ್ಯರ್ಥಿಗಳಿಗೆ ಕೇವಲ ತರಗತಿ ತರಬೇತಿ ನೀಡದೆ ನೇರವಾಗಿ ಕಂಪನಿಗಳ ನೈಜ ಕೆಲಸದ ವಾತಾವರಣದಲ್ಲಿ (Hands-on experience) ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಐಟಿ, ಸಾಫ್ಟ್‌ವೇರ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಟೆಲಿಕಾಂ, ರೀಟೇಲ್ ಸೇರಿದಂತೆ 21 ಕ್ಕೂ ಹೆಚ್ಚು ವಲಯಗಳಲ್ಲಿ ಈ ಅವಕಾಶಗಳಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆದ PM Internship Portal ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಅತ್ಯಗತ್ಯ. ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿರುವ ಕರ್ನಾಟಕದ ಯುವಕ-ಯುವತಿಯರು ಈ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್