Karnataka 2nd PUC Results 2026: ಇಂದೇ ದ್ವಿತೀಯ ಪಿಯುಸಿ ಫಲಿತಾಂಶ: ವಿದ್ಯಾರ್ಥಿಗಳೇ ಈ ವಿಚಾರವನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಏಪ್ರಿಲ್ 9 ರಂದು ಪ್ರಕಟ. KSEAB ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು kseab.karnataka.gov.in ನಲ್ಲಿ ಸಂಜೆ 5 ರಿಂದ ಅಂಕಪಟ್ಟಿ ಲಭ್ಯ. ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಡೌನ್‌ಲೋಡ್ ಮಾಡಿ. ಹೊಸ Exam 1, 2, 3 ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಅಂಕ ಸುಧಾರಿಸಿಕೊಳ್ಳಲು ಉತ್ತಮ ಅವಕಾಶ.

ಬೆಂಗಳೂರು, ಏ.9: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ರಾಜ್ಯದಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯ ಫಲಿತಾಂಶ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡಲು ಸಮಯ ನಿಗದಿಯಾಗಿದೆ. ಇಂದು (ಏಪ್ರಿಲ್ 9, 2026) ಇಂದು ಮಧ್ಯಾಹ್ನ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.
ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಸಂಜೆ 5:00 ಗಂಟೆಯ ನಂತರ ವಿದ್ಯಾರ್ಥಿಗಳು ತಮ್ಮ ‘ಮಾರ್ಕ್ಸ್ ಮೆಮೊ’ ಅಥವಾ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. karresults.nic.in ಮತ್ತು kseab.karnataka.gov.in ನಲ್ಲಿ ನಿಮ್ಮ ಫಲಿತಾಂಶವನ್ನು ನೋಡಬಹುದು.
ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿ “2nd PUC Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ವಿಷಯದ ಗುಂಪನ್ನು (Stream – Science/Arts/Commerce) ನಮೂದಿಸಿ.
‘Submit’ ಬಟನ್ ಒತ್ತಿದಾಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಹಿಂದಿನ ವರ್ಷದ ಪಿಯುಸಿ ಫಲಿತಾಂಶಗಳನ್ನು ಏಪ್ರಿಲ್ 8, 2025 ರಂದು ಪ್ರಕಟಿಸಲಾಯಿತು , ಒಟ್ಟಾರೆ ಉತ್ತೀರ್ಣ ಶೇಕಡಾ 73.45%. ಸುಮಾರು 6.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 3.4 ಲಕ್ಷ ಮಹಿಳಾ ಅಭ್ಯರ್ಥಿಗಳಲ್ಲಿ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ, ಶೇ. 77.8 ರಷ್ಟು ಉತ್ತೀರ್ಣರಾಗಿದ್ದರೆ, 2.9 ಲಕ್ಷ ಪುರುಷ ವಿದ್ಯಾರ್ಥಿಗಳಲ್ಲಿ ಶೇ. 68.2 ರಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ.
ಇನ್ನು ಈ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ವಿದ್ಯಾರ್ಥಿಗಳು ಧೃತಿಗೆಡಬೇಕಿಲ್ಲ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಹೊಸ ಮೂರು ಪರೀಕ್ಷೆಗಳ ವ್ಯವಸ್ಥೆಯಡಿ (Exam 1, 2, & 3) ನಿಮಗೆ ಅಂಕ ಸುಧಾರಿಸಿಕೊಳ್ಳಲು ಹಾಗೂ ಅನುತ್ತೀರ್ಣರಾದ ವಿಷಯಗಳನ್ನು ಪಾಸು ಮಾಡಲು ಉತ್ತಮ ಅವಕಾಶವಿದೆ. ಫಲಿತಾಂಶದಲ್ಲಿ ಕಡಿಮೆ ಅಂಕ ಬಂದಿದೆ ಎನಿಸಿದರೆ, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆ ಬರೆಯಬಹುದು. ಎರಡೂ ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬರುತ್ತದೆಯೋ ಅದನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ಪರೀಕ್ಷೆ-2 ರಲ್ಲೂ ಅನುತ್ತೀರ್ಣರಾದರೆ ಅಥವಾ ಅಂಕ ತೃಪ್ತಿ ನೀಡದಿದ್ದರೆ, ಜೂನ್ 2026 ರಲ್ಲಿ ನಡೆಯಲಿರುವ ಪರೀಕ್ಷೆ-3 (Exam 3) ಕ್ಕೆ ಹಾಜರಾಗಲು ಮತ್ತೊಂದು ಅವಕಾಶವಿರುತ್ತದೆ.
ಮತ್ತಷ್ಟು ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ




