Sign In

By signing in or creating an account, you agree with Associated Broadcasting Company's Terms & Conditions and Privacy Policy.

Children: ಅಮಾರೈಟ್; ಮಕ್ಕಳು ಅನುಕರಿಸುವುದಾದರೆ ಶ್ರೇಷ್ಠವಾದದ್ದನ್ನೇ ಅನುಕರಿಸಲಿ ಬಿಡಿ

Children Camps : ಎಡಬಲ ಮೆದುಳು ಚುರುಕುಗೊಳಿಸಲು ಕಲೆಯ ಕುರಿತಾಗಿ ಪಾಠ ಮಾಡುವ ಯಾರೋ ಒಬ್ಬರು ಮಕ್ಕಳನ್ನು ಕಂಪ್ಯೂಟರ್, ಕ್ಯಾಲ್ಕುಲೇಟರ್‌ನ ಹಾಗೇ ಮಾಡುವ ಭರವಸೆ ಕೊಡುತ್ತಾರೆ. ಹದಿನೈದೇ ದಿನದ ಕ್ಯಾಂಪಿನಲ್ಲಿ ಹಾಡು, ನೃತ್ಯ ಕಲಿಸಿ ಟೀವಿ ಶೋಗಳಿಗೆ ಪ್ರಮೋಟ್ ಮಾಡುವ ಆಸೆ ಹುಟ್ಟಿಸುತ್ತಾರೆ.

Children: ಅಮಾರೈಟ್; ಮಕ್ಕಳು ಅನುಕರಿಸುವುದಾದರೆ ಶ್ರೇಷ್ಠವಾದದ್ದನ್ನೇ ಅನುಕರಿಸಲಿ ಬಿಡಿ
ಫೋಟೋ : ಡಾ. ನಿಸರ್ಗ
Follow us
ಶ್ರೀದೇವಿ ಕಳಸದ
|

Updated on:Mar 22, 2022 | 12:24 PM

ಅಮಾರೈಟ್ | Amaright : ಎಳೆಯ ಕೂಸು ಮರಳಲ್ಲಿ ಮನೆ ಕಟ್ಟಿದಾಗ ಆ ಮಗುವಿನೊಳಗೆ ಅಮ್ಮ ಕಾಣುವ ಒಬ್ಬ ಎಂಜಿನಿಯರಿಗೂ, ಅಜ್ಜನ ಎದೆ ಮೇಲೆ  ಪುಟ್ಟಪುಟ್ಟ ಬೆರಳುಗಳ ಒತ್ತಿ ಡಾಕ್ಟರ್ ಆಟ ಆಡುವ ಕಂದನ ಆ ಹೊತ್ತಿನ ಕುತೂಹಲಕ್ಕೂ, ಕೋಲು ಹಿಡಿದು ಟೀಚರ್ ಆಗುವ ಮಗುವಿನ ಮೊದ-ಮೊದಲ ಆಸೆಗಳಿಗೂ ಮತ್ತು  ವರ್ಷಾಂತರದಲ್ಲಿ ಅದೇ ಮಗುವಿನಲ್ಲಿ ಹುಟ್ಟಿಕೊಳ್ಳುವ ಹೊಸ ಆಸಕ್ತಿಗಳಿಗೂ ಯಾವುದೇ ಸಂಬಂಧವಿರಲೇಬೇಕು ಅಂತಿಲ್ಲ. ಆದರೂ ನಾವು ನಮ್ಮಿಷ್ಟ ಮತ್ತು ನಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಅತ್ಯಂತ ಪ್ರೀತಿಯಿಂದ ಮತ್ತು ಅಷ್ಟೇ ಬುದ್ಧಿವಂತಿಕೆಯಿಂದ ಹೇರುತ್ತಾ ಹೋಗುತ್ತೇವೆ. ಕಣ್‌ಕಟ್ಟಿದ ಕುದುರೆಯ ಹಾಗೇ ನಮ್ಮ ಮುಂದೆ ನಮ್ಮ ಮಕ್ಕಳು ಸಾಗಬೇಕಾದ ಯಶಸ್ಸಿನ ಹಾದಿಯನ್ನು ನಾವೇ ನಿರ್ಧರಿಸುತ್ತಿದ್ದೇವೆ. ಮತ್ತು ಇವೇ ನಮ್ಮ ದೌರ್ಬಲ್ಯಗಳನ್ನು ಅತೀ ಜೋಪಾನವಾಗಿ ದುಡಿಸಿಕೊಳ್ಳಲು ಸನ್ನದ್ಧವಾಗಿರುವ.. ದುಡಿಸಿಕೊಳ್ಳುತ್ತಿರುವ ಅತ್ಯಂತ ಬಲಿಷ್ಠ ವ್ಯವಸ್ಥೆಗಳ ಸುತ್ತ ನಾವು ಸಿಕ್ಕಿ ಬಿದ್ದಿದ್ದೇವೆ. ಮಕ್ಕಳ ಕುರಿತಾದ ನಮ್ಮ ಕನಸು, ಕಾಳಜಿಗಳೇ ಇಂತಹ ಸೋ ಕಾಲ್ಡ್ ವ್ಯವಸ್ಥೆಗಳ ಬಂಡವಾಳ. ಸುಲಭವಾಗಿ ಈ ಬಂಡವಾಳವನ್ನು ಅವರಿಗೆ ಗಟ್ಟಿಯಾಗಿ ಹಾಕಿಕೊಟ್ಟಿದ್ದೇವೆ, ಹಾಕಿಕೊಡುತ್ತಿದ್ದೇವೆ. ಭವ್ಯಾ ನವೀನ, ಕವಿ, ಲೇಖಕಿ (Bhavya Naveen)

(ಬಿಲ್ಲೆ 6, ಭಾಗ 2)

ಎಡಮೆದುಳು, ಬಲಮೆದುಳು ಮತ್ತು ಅದನ್ನು ಚುರುಕುಗೊಳಿಸುವ ಕಲೆಯ ಕುರಿತಾಗಿ ಪಾಠ ಮಾಡುವ ಯಾರೋ ಒಬ್ಬರು ಮಕ್ಕಳನ್ನು ಕಂಪ್ಯೂಟರ್, ಕ್ಯಾಲ್ಕುಲೇಟರ್‌ನ ಹಾಗೇ ಮಾಡುವ ಭರವಸೆ ಕೊಡುತ್ತಾರೆ. ಹದಿನೈದೇ ದಿನದ ಕ್ಯಾಂಪಿನಲ್ಲಿ ಹಾಡು, ನೃತ್ಯ ಕಲಿಸಿ ಟೀವಿ ಶೋಗಳಿಗೆ ಪ್ರಮೋಟ್ ಮಾಡುವ ಆಸೆ ಹುಟ್ಟಿಸುತ್ತಾರೆ. ಸ್ವಿಮ್ಮಿಂಗ್, ಕ್ಲೈಂಬಿಂಗ್ ಟ್ರೀ, ಕ್ಲೇ ಮಾಡೆಲ್, ಪ್ಲೇಯಿಂಗ್ ಆನ್ ಸ್ಯಾಂಡ್, ದೇಸೀ ಗೇಮ್ಸ್, ಸ್ಟೋರಿ ಟೆಲ್ಲಿಂಗ್ ಅನ್ನುವ ಆಕರ್ಷಕ ಇಂಗ್ಲೀಷ್ ಪದಗಳನ್ನಿಟ್ಟುಕೊಂಡು ಈಜುವ, ಮರ ಹತ್ತುವ, ಮಣ್ಣಿನಲ್ಲಿ ಗೊಂಬೆ ಮಾಡುವ, ಕುಂಟೆ ಬಿಲ್ಲೆ- ಚೌಕಾಬಾರಗಳಂತಹ ಮಗುವಿನ ಮೂಲಭೂತ ಆಸಕ್ತಿಗಳನ್ನು ವ್ಯಾಪಾರೀಕರಣಗೊಳಿಸುತ್ತಿದ್ದಾರೆ. ಶೂಟಿಂಗ್, ಹಾರ್ಸ್ ರೈಡಿಂಗ್, ಮಾರ್ಷಲ್ ಆರ್ಟ್, ಮ್ಯಾಜಿಕ್ ಇನ್ನೂ ಮುಂತಾದವುಗಳ ಬೇಸಿಕ್ ತಿಳಿಸಲೂ ಸಾಧ್ಯವಾಗದ ಒಂದು ಸೀಮಿತ ಅವಧಿಯಲ್ಲಿ ಇದನ್ನೆಲ್ಲಾ ಕಲಿಸಿಕೊಡುವ ಪ್ರಮಾಣ ಮಾಡುವ ಗುಂಪುಗಳಿಗೆ ಈಗೇನು ಬರವಿಲ್ಲ, ಮೊದಲೇ ಹೇಳಿದ ಹಾಗೇ ಇವೆಲ್ಲಾ ಮಕ್ಕಳ ಕುರಿತಾದ ನಮ್ಮ ಕನಸು ಮತ್ತು ಕಾಳಜಿಗಳನ್ನು ತಮ್ಮ ಬಂಡವಾಳವಾಗಿಸಿಕೊಳ್ಳುವ ಹಲವು ಸಮಯೋಜಿತ ವ್ಯವಸ್ಥೆಗಳೇ.

ಹಾಗಂತ ಇವೆಲ್ಲವನ್ನೂ ತಪ್ಪು ಅನ್ನುತ್ತಾ ವಿರೋಧಿಸಲು ಸಾಧ್ಯವಾಗದ ದಿನಮಾನಕ್ಕೆ ಬಂದು ನಿಂತಿದ್ದೇವೆ. ಸಂಸಾರಗಳು ದಿನೇ ದಿನೇ ಮೈಕ್ರೋ ಫ್ಯಾಮಿಲಿ, ಮಿನಿ ಫ್ಯಾಮಿಲಿ ಅಂತ ಅಮೀಬಾದ ಹಾಗೇ ಹರಿದು ಹರಿದು ಪ್ರತ್ಯೇಕವಾಗುತ್ತಿರುವ ಈ ಹೊತ್ತಿನಲ್ಲಿ ಅಜ್ಜಿಯ ತೋಳಲ್ಲಿ ಅಡಗಿ ಕತೆ ಕೇಳುವುದನ್ನು, ಚೌಕಾಬಾರದ ಕಾಯಿ ಕಡಿಯುವುದನ್ನು ಹೇಳಿಕೊಡುವುದಾಗಲಿ ಅಥವಾ ಆಧುನೀಕ ಸೌಕರ್ಯಗಳ ನಗರೀಕರಣದ ಘಟ್ಟದಲ್ಲಿ ಮಕ್ಕಳಿಗೆ ಮರ ಹತ್ತುವುದನ್ನು, ಹಳ್ಳದಲ್ಲಿ ಈಜುವುದನ್ನು, ಮಣ್ಣಲ್ಲಿ ಆಡಿ, ಮನೆ ಕಟ್ಟುವುದನ್ನು ಹೀಗೆ ಸಮ್ಮರ್ ಕ್ಯಾಂಪಿಗೆ ಕಳಿಸೇ ತಿಳಿಸಿಕೊಡಬೇಕಾದ ನೋವು ಒಂದು ಕಡೆಯಾದರೆ, ಚಂದಗೆ ಬೆಳೆದು ದೊಡ್ಡವರಾದ ನಮ್ಮಗಳ ಹಾಗಿನ ಒಂದು ಶ್ರೀಮಂತ ನೆನಪಿನ ಬಾಲ್ಯವನ್ನು ಒಂದು Demonstrateನ ಹಾಗೆ ನಮ್ಮ ಮಕ್ಕಳು ಮಾಡಿ ಮುಗಿಸುತ್ತಿದ್ದಾವಲ್ಲ! ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಷ್ಟೇ. ನಮ್ಮ ಮಕ್ಕಳು ಇದ್ದದ್ದರಲ್ಲೇ ವ್ಯಾಪಾರವಲ್ಲದ ಒಂದು ಭಾವನಾತ್ಮಕ ಬಳಗದ ಜತೆಗೂಡಿ ಕಲೆಗಳನ್ನು ತಾಂತ್ರಿಕವಾಗಷ್ಟೇ ಕರಗತ ಮಾಡಿಕೊಳ್ಳದೆ ಬದುಕುವ ಕಲೆಯನ್ನು ಮೈಗೂಢಿಸಿಕೊಳ್ಳುವುದರ ಕುರಿತಾಗಿ ಹೆಚ್ಚು ಜತನ ಮಾಡಬೇಕಿದೆ ಅನ್ನುವುದು ಈಗ ಬಹಳ ಮುಖ್ಯ.

ಇದನ್ನೂ ಓದಿ : Hopscotch : ಅಮಾರೈಟ್ ; ಯಾರೋ ಚಂದಗೆ ಖಾರಹಚ್ಚಿದ ಚಾಕುವಿನಿಂದ ಬೆರಳ ತುದಿಗೆ ಗೀರಿದಂತೆ!’

ಮಕ್ಕಳನ್ನ ರೇಸಿಗೆ ನಿಲ್ಲಿಸಿ ನಮ್ಮ ಕಾಲುಗಳನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು ಚಟಪಟ ಚಡಪಡಿಸುತ್ತಾ, ಚಪ್ಪಾಳೆ ತಟ್ಟುತ್ತಾ ತಂ-ತಮ್ಮ ಮಕ್ಕಳ ಹೆಸರ ಕೂಗು ಹಾಕುತ್ತಾ ಅವರನ್ನು ಗೆದ್ದೇ ಗೆಲ್ಲಿಸುವ ಉಮೇದಿನಲ್ಲಿ ನಿಂತಿದ್ದೇವೆ. “ಯೆಸ್ ಯೂ ಕ್ಯಾನ್” ಅಂತ ಕೂಗಿದ್ದು “ಯೂ ಹ್ಯಾವ್ ಟು” ಅಂತ ಸೌಂಡ್‌ ಆಗುತ್ತಿದೆ. ನಮ್ಮ ಕಾಲುಗಳನ್ನು ಮುಂದೆ ಕೀಳಲಾಗದೆ ಅತ್ಯಂತ ಹಿಂಸೆಯಿಂದ ನಿಂತಲ್ಲೇ ನಿಂತು ನಮ್ಮ ಮಕ್ಕಳನ್ನು ರೇಸಿಗೆ ಬಿಡುವುದೆಂದರೆ, ಅಬ್ಬಾ ಇವು ನಿಜಕ್ಕೂ ಎಷ್ಟು ಕಷ್ಟದ ದಿನಗಳು.

ಇವೇ ಕಷ್ಟದ ನಡುವೆ ನಮಗೆ ರೇಸಿನ ಎಂಡ್ ಪಾಯಿಂಟ್ ಬಿಟ್ಟರೆ ಮತ್ತೇನಾದರೂ ಕಾಣುವುದಿದ್ದರೆ ಅದು ನಮ್ಮ ನಮ್ಮ  ಮಕ್ಕಳನ್ನು ಹಿಂದಿಕ್ಕಿ ಓಡುತ್ತಿರುವ ಗೆಲ್ಲುವ ಹೆಜ್ಜೆಗಳಷ್ಟೇ. ಓಡುತ್ತಿರುವ ನಮ್ಮ ಮಕ್ಕಳ ದೀ ಬೆಸ್ಟ್ ಟ್ರೈ ನಮಗೆ ಮುಖ್ಯವಾಗುವುದೇ ಇಲ್ಲ… ಯಾಕೆ? ಅನುಕರಿಸುವುದರಲ್ಲಿ ಮಕ್ಕಳು ಬಹಳಾ ಶ್ರೇಷ್ಠ, ಆದ್ದರಿಂದ ನಾವು ಅವರಿಗೆ ಅಷ್ಟೇ ಶ್ರೇಷ್ಠವಾದುದನ್ನು ಅನುಕರಣೆಗೆ ನೀಡಬೇಕು ಅಂತ ಮಹಾನುಭಾವರೊಬ್ಬರು ಹೇಳಿದ್ದು ಒಂದರ್ಥದಲ್ಲಿ ಒಪ್ಪಿಕೊಳ್ಳುವ ಮಾತೇ, ಮಕ್ಕಳಿಗೆ ಶ್ರೇಷ್ಠವಾದ ಅನುಕರಣೆಗೆ ನಾವು ಸಹಕರಿಸಬೇಕು.

ಆದರೆ,

ಆದರೆ ಪ್ರತಿಯೊಂದು ಮಗುವು ಹೊಸತೊಂದು ರಾಗದ ಹಾಗೇ, ನಾವು ಅವರಿಗೆ ಅವರನ್ನೇ ನುಡಿಸಲು… ಪಕ್ವವಾಗಲು… ಅವರ ದಾರಿ ಅವರೇ ರೂಪಿಸಿಕೊಳ್ಳಲು ದಾರಿದೀಪವಾಗಬೇಕು. ಅನುಕರಣೆ ಈ ಹೊತ್ತಿನ ಟ್ರೆಂಡ್ ಅಷ್ಟೇ. ಆದರೆ ಮಕ್ಕಳಲ್ಲಿ ನಿಜಕ್ಕೂ ಇರಬಹುದಾದ ಆತ್ಮದ ಸಂಗತಿಯನ್ನು ಹೊರತೆಗೆಯುವುದು ಎಲ್ಲರ ಜವಾಬ್ದಾರಿ. ಅಮಾರೈಟ್?

(ಮುಗಿಯಿತು)

(ಮುಂದಿನ ಬಿಲ್ಲೆ : 5.4.2022)

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/amaright

Published On - 11:11 am, Tue, 22 March 22

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್