Anurag Thakur
ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶದ ರಾಜಕೀಯದ ಜೊತೆಯಲ್ಲಿ ದೇಶದ ರಾಜಕೀಯ ವಿಷಯಗಳಲ್ಲೂ ಆಸಕ್ತಿ ಹೊಂದಿದ್ದಾರೆ. ಅವರು ಅಕ್ಟೋಬರ್ 24, 1974ರಂದು ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ಜನಿಸಿದರು. ಅವರು ಹಿಮಾಚಲ ಪ್ರದೇಶದ ಹಿಂದಿನ ಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಪ್ರೇಮ್ ಕುಮಾರ್ ಧೂಮಲ್‌ರವರ ಪುತ್ರ ಹಾಗೂ ಹಮೀರ್‌ಪುರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದಾರೆ. ಕೇಂದ್ರ ಸರಕಾರದಲ್ಲಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರ ಜವಾಬ್ದಾರಿಯೊಂದಿಗೆ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಖಾತೆಯ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಅವರಿಗೆ ಕ್ರಿಕೆಟ್ ಕ್ರೀಡೆಯಲ್ಲಿ ಬಹಳ ಆಸಕ್ತಿಯಿದೆ. ಅವರು ಅಖಿಲ ಭಾರತ ಉತ್ತರ ವಲಯದ 19 ವರ್ಷ ವಯಸ್ಸಿನ ಒಳಗಿರುವ ಆಟಗಾರರ ಕ್ರಿಕೆಟ್ ತಂಡದ ನಾಯಕರೂ ಆಗಿ ಆಡಿದ್ದಾರೆ. ಅವರು ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ಪರವಾಗಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡದ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನೂ ಆಡಿದ್ದಾರೆ. ಅವರು ಪ್ರಾದೇಶಿಕ ಸೈನ್ಯದ ಲೆಫ್ಟಿನೆಂಟ್ ಕೂಡ ಆಗಿದ್ದಾರೆ. ಅನುರಾಗ್ ಠಾಕೂರ್ ಅವರನ್ನು 2016ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರ ರಾಜಕೀಯ ಜೀವನದ ಆರಂಭವು 2008ರಲ್ಲಿ ಆಗಿತ್ತು. ಇಲ್ಲಿಯವರೆಗೆ ಅವರು ನಾಲ್ಕು ಬಾರಿ ಸಂಸದರಾಗಿದ್ದು ಈಗ ಅವರು ಭಾರತೀಯ ಜನತಾ ಯುವಮೋರ್ಚಾದ ಅಧ್ಯಕ್ಷರೂ ಆಗಿದ್ದಾರೆ.