AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Basavanagudi Election Results: ಬಸವನಗುಡಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಬಿಜೆಪಿ ಭದ್ರಕೋಟೆಯಲ್ಲಿ ಸ್ಥಾನ ಉಳಿಸಿಕೊಂಡ ರವಿ ಸುಬ್ರಮಣ್ಯಗೆ ಗೆಲುವು

Basavanagudi Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ರವಿ ಸುಬ್ರಮಣ್ಯ ಸ್ಥಾನ ಉಳಿಸಿಕೊಂಡಿದ್ದಾರೆ.

Basavanagudi Election Results: ಬಸವನಗುಡಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಬಿಜೆಪಿ ಭದ್ರಕೋಟೆಯಲ್ಲಿ ಸ್ಥಾನ ಉಳಿಸಿಕೊಂಡ ರವಿ ಸುಬ್ರಮಣ್ಯಗೆ ಗೆಲುವು
ಬಸವನಗುಡಿ: ಬಿಜೆಪಿ ಭದ್ರಕೋಟೆಯಲ್ಲಿ ಸ್ಥಾನ ಉಳಿಸಿಕೊಂಡ ರವಿ ಸುಬ್ರಮಣ್ಯ
ಸಾಧು ಶ್ರೀನಾಥ್​
|

Updated on:May 13, 2023 | 2:10 PM

Share

Basavanagudi Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ರವಿ ಸುಬ್ರಮಣ್ಯ ಸ್ಥಾನ ಉಳಿಸಿಕೊಂಡಿದ್ದಾರೆ. ಮೇ 10 ರಂದು ನಡೆದ ಮತದಾನದಲ್ಲಿ ಬಸವನಗುಡಿ ಕ್ಷೇತ್ರದಲ್ಲಿ (Basavanagudi Assembly Elections 2023) ಶೇ. 51.77ರಷ್ಟು ಮತದಾನವಾಗಿತ್ತು. ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಬಸವನಗುಡಿಯಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಸವನಗುಡಿ ಕ್ಷೇತ್ರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 2,33,587. ಪುರುಷರು 1,18,929 – 1,14,656 ಮಹಿಳಾ ಮತದಾರರು ಇದ್ದಾರೆ.

ಪ್ರಜ್ಞಾವಂತರು ನೆಲೆಸಿರುವ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಬಸವನಗುಡಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಲವು ಚುನಾವಣೆಗಳಲ್ಲಿ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎನ್ನುವಂತಹ ಫಲಿತಾಂಶ ಬಂದಿದ್ದು, ಈ ಕೋಟೆ ಛಿದ್ರಗೊಳಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್ ರಣತಂತ್ರ ರೂಪಿಸುತ್ತಿವೆ. ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಜಯದ ಕನಸು ಕಾಣುತ್ತಿರುವ ಬಿಜೆಪಿಯ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಅವರಿಗೆ ಕಾಂಗ್ರೆಸ್‌ನಿಂದ ಯು.ಬಿ. ವೆಂಕಟೇಶ್, ಜೆಡಿಎಸ್‌ ನಿಂದ ಅರಮನೆ ಶಂಕರ್ ಪ್ರಧಾನವಾಗಿ ಸವಾಲು ಹಾಕುತ್ತಿದ್ದಾರೆ. ವಿಜ್ಞಾನಿಗಳು, ಸಾಹಿತಿಗಳು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ರಾಜಧಾನಿಯ ಅತ್ಯಂತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳೂ ಈ ಭಾಗದಲ್ಲಿವೆ. ಬ್ರಾಹ್ಮಣರು ಹಾಗೂ ಹೊರ ಜಿಲ್ಲೆಯಿಂದ ಬಂದ ಒಕ್ಕಲಿಗರೂ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರ ಮನ ಗೆಲ್ಲಲು ಕಣದಲ್ಲಿರುವ ಇನ್ನೂ 12 ಮಂದಿ ಸಹ ಪ್ರಯತ್ನಿಸುತ್ತಿದ್ದಾರೆ.

ರವಿ ಸುಬ್ರಹಣ್ಯ ಅವರು ಸತತ ಮೂರು ಬಾರಿ ಜಯಿಸಿ ಕ್ಷೇತ್ರದ ಅಳ ಅಗಲವನ್ನು ಅರಿತಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಮೇಯರ್​​ ಕಟ್ಟೆ ಸತ್ಯನಾರಾಯಣ ಅವರು ರವಿ ಜತೆಗೇ ಓಡಾಡಿಕೊಂಡಿದ್ದಾರೆ. ಇದು ‘ಪ್ಲಸ್ ಪಾಯಿಂಟ್’ ಆಗುವ ಸಾಧ್ಯತೆಯಿದೆ. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅವರು ಇದೇ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಅವರಿಗೆ ಟಿಕೆಟ್‌ ಸಿಗದಿರುವ ಕಾರಣ ಸಕ್ರಿಯವಾಗಿಲ್ಲ. ಅನಂತಕುಮಾರ್ ಅವರಿಂದ ರಾಜಕೀಯವಾಗಿ ಬೆಳೆದವರೇ ಅವರನ್ನು ಮರೆತಿದ್ದಾರೆ. ಎಂಬ ಭಾವನಾತ್ಮಕ ವಿಷಯವು ಕ್ಷೇತ್ರದ ಬಿಜೆಪಿ ಮುಖಂಡರಲ್ಲಿಯೇ ಚರ್ಚೆಯಾಗುತ್ತಿದೆ.

ಇನ್ನು ಕಾಂಗ್ರೆಸ್‌ ಪಕ್ಷದ ಯು.ಬಿ. ವೆಂಕಟೇಶ್ ಅವರೂ ತಮ್ಮದೇ ಕಾರ್ಯತಂತ್ರ ರೂಪಿಸಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿದ್ದಾರೆ. ಕ್ಷೇತ್ರದಲ್ಲಿ ನಡೆದಿದ್ದ ಸಹಕಾರ ಬ್ಯಾಂಕುಗಳ ಸಹಸ್ರಾರು ಕೋಟಿ ರೂಪಾಯಿ ಗುಳುಂ ಹಗರಣವನ್ನು ಪ್ರಸ್ತಾಪಿಸುತ್ತಲೇ ಪ್ರಚಾರ ನಡೆಸುತ್ತಿದ್ದಾರೆ. ಠೇವಣಿದಾರರಿಗೆ ನ್ಯಾಯ ಕೊಡಿಸುತ್ತೇನೆ. ಪ್ರಕರಣ ಸಿಬಿಐಗೆ ವಹಿಸಲು ಬದ್ಧ ಎಂಬ ಭರವಸೆಯ ಮಾತನ್ನಾಡುತ್ತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:02 am, Sat, 13 May 23