AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devadurga Election Results: ದೇವದುರ್ಗ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್ ನ ಕರೆಮ್ಮ ಜಿ ನಾಯಕ್​ಗೆ ಕೊರಳಿಗೆ ಜಯಮಾಲೆ

Devadurga Assembly Election Result 2023 Live Counting Updates: ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಕರೆಮ್ಮ ಜಿ ನಾಯಕ್ ಗೆಲುವು ಸಾಧಿಸಿದ್ದಾರೆ,

Devadurga Election Results: ದೇವದುರ್ಗ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಜೆಡಿಎಸ್ ನ ಕರೆಮ್ಮ ಜಿ ನಾಯಕ್​ಗೆ ಕೊರಳಿಗೆ ಜಯಮಾಲೆ
ಕರೆಮ್ಮ ಜಿ ನಾಯಕ್
ಅರುಣ್​ ಕುಮಾರ್​ ಬೆಳ್ಳಿ
|

Updated on:May 13, 2023 | 4:17 PM

Share

ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರ (Devadurga Assembly Election Result) ನಾಯಕ ಸಮುದಾಯದ ಅಭ್ಯರ್ಥಿಗಳ ಕದನಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀದೇವಿ ಆರ್ ನಾಯಕ್, ಬಿಜೆಪಿಯ ಕೆ ಶಿವನಗೌಡ ನಾಯಕ್ ಮತ್ತು ಜೆಡಿಎಸ್ ಪಕ್ಷದ ಕರೆಮ್ಮ ಜಿ ನಾಯಕ್-ಮೂವರು ನಾಯಕ ಸಮುದಾಯದವರು. ಕರೆಮ್ಮ ಜಿ ಜಿ ನಾಯಕ್ ಕಣದಲ್ಲಿದ್ದ ಇತರ ನಾಯಕರನ್ನು ಹಿಂದಿಕ್ಕಿ ಗೆಲುವಿನ ಗೆರೆ ದಾಟಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಶಿವನಗೌಡ ನಾಯಕ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ರಾಜಶೇಖರ್ ವಿ ನಾಯಕ್ ರನ್ನು ಸುಲಭವಾಗಿ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀದೇವಿ, ರಾಜಶೇಖರ್ ನಾಯಕ್ ಪತ್ನಿ. ರಾಜಶೇಖರ್ ನಾಯಕ್ ಮಾಜಿ ಸಂಸದ ದಿವಂಗತ ಎ ವೆಂಕಟೇಶ್ ನಾಯಕ್ ಅವರ ಮಗ ಮತ್ತು ಮಾಜಿ ಸಂಸದ ಹಾಗೂ ಈ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಬಿವಿ ನಾಯಕ್ ಅವರ ಸಹೋದರ. ಹಾಗೆ ನೋಡಿದರೆ, ಶಿವನಗೌಡ ನಾಯಕ್ ಮತ್ತು ಶ್ರೀದೇವಿ ನಾಯಕ್ ಸಂಬಂಧಿಕರು. ಶಿವನಗೌಡ ನಾಯಕ್ ಅವರು ವೆಂಕಟೇಶ್ ನಾಯಕ್ ಗೆ ಮೊಮ್ಮಗನಾಗಬೇಕು. ಇವರೆಲ್ಲ ಅರಕೇರಾ ಗ್ರಾಮದವರು ಅನ್ನೋದು ಮತ್ತೊಂದು ವೈಶಿಷ್ಟ್ಯ. ಆದರೆ ದಶಕಗಳಿಂದ ಎರಡು ಕುಟುಂಬಗಳ ನಡುವೆ ರಾಜಕೀಯ ವೈರತ್ವ ಜಾರಿಯಲ್ಲಿದೆ.

ಶಿವನಗೌಡ ಕೆಲಸಗಾರನಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿತ್ತು. ಜನರನ್ನು, ಅಧಿಕಾರಿಗಳನ್ನು ಹೆದರಿಸುವುದು ಗದರಿಸುವುದು ಮಾಡುತ್ತಾರೆ ಅಂತಲೂ ಹೇಳುತ್ತಾರೆ. ಅವರಿಗೆ ರಾಜಕೀಯ ದೀಕ್ಷೆ ನೀಡಿದ ತಾತ ವೆಂಕಟೇಶ್ ನಾಯಕ್ ಬಗ್ಗೆಯೇ ಅವರು ಸಾರ್ವಜನಿಕವಾಗಿ ಅವನು ಇವನು ಅಂತ ಮಾತಾಡುತ್ತಾರೆ. ದರ್ಪದ ಮಾತುಗಳು ಬೇಡ, ಒಬ್ಬ ರಾಜಕೀಯ ಧುರೀಣನಿಗೆ ಅದು ಶೋಭೆ ನೀಡುವುದಿಲ್ಲ, ನನ್ನ ಮಾವನವರ ಬಗ್ಗೆ ಏಕವಚನದಲ್ಲಿ ಮಾತಾಡುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ, ಎಂದು ಶ್ರೀದೇವಿಯವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಶಿವನಗೌಡರನ್ನು ಎಚ್ಚರಿಸಿದ್ದರು.

2008 ರ ವಿಧಾನಸಭಾ ಚುನಾವಣೆಯಲ್ಲಿ ಶಿವನಗೌಡ ನಾಯಕ್, ವೆಂಕಟೇಶ್ ನಾಯಕ್ ರನ್ನು ಸೋಲಿಸಿದ್ದರೆ 2013 ರ ಅಸೆಂಬ್ಲಿ ಚುನಾವಣೆಯಲ್ಲಿ ತಾತ ಮೊಮ್ಮಗನ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:30 am, Sat, 13 May 23