Shivajinagar Election Results: ಶಿವಾಜಿನಗರ ವಿಧಾನಸಭಾ ಕ್ಷೇತ್ರ ರಿಸಲ್ಟ್: ಕಾಂಗ್ರೆಸ್ ಅಭ್ಯರ್ಥಿ​​ ರಿಜ್ವಾನ್‌ ಅರ್ಷದ್ ಗೆಲುವು

Shivajinagar Assembly Election Result 2023 Live Counting Updates: ಶಿವಾಜಿನಗರ ವಿಧಾನಸಭಾ ಕ್ಷೇತ್ರ ರಿಸಲ್ಟ್: ಕಾಂಗ್ರೆಸ್​​ ರಿಜ್ವಾನ್‌ ಅರ್ಷದ್ ಗೆಲುವು

Shivajinagar Election Results: ಶಿವಾಜಿನಗರ ವಿಧಾನಸಭಾ ಕ್ಷೇತ್ರ ರಿಸಲ್ಟ್: ಕಾಂಗ್ರೆಸ್ ಅಭ್ಯರ್ಥಿ​​ ರಿಜ್ವಾನ್‌ ಅರ್ಷದ್ ಗೆಲುವು
ಶಿವಾಜಿನಗರ: ಕಾಂಗ್ರೆಸ್​​ ರಿಜ್ವಾನ್‌ ಅರ್ಷದ್ ಗೆಲುವು
Follow us
ಸಾಧು ಶ್ರೀನಾಥ್​
|

Updated on:May 13, 2023 | 7:28 PM

Shivajinagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್​​ ರಿಜ್ವಾನ್‌ ಅರ್ಷದ್ ಗೆಲುವು ಸಾಧಿಸಿದಾರೆ.  10 ರಂದು ನಡೆದ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ (Shivajinagar Assembly Elections 2023) ಶೇ. 57.71 ರಷ್ಟು ಮತದಾನವಾಗಿತ್ತು.  ಶಿವಾಜಿನಗರ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 1,94,055. 97,685 ಪುರುಷರು. 96,360 ಮಹಿಳೆಯರು ಇದ್ದಾರೆ. ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು -15

ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿರುವ (ಸಿಬಿಡಿ) ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವಿನ ಪತಾಕೆ ಹಾರಿಸಿರುವ ಕಾಂಗ್ರೆಸ್‌ ಪಕ್ಷವನ್ನು ಈ ಬಾರಿ ಕಟ್ಟಿ ಹಾಕಲು ಬಿಜೆಪಿ ರಣತಂತ್ರ ಹೂಡಿದೆ. 1999 ಹಾಗೂ 20045 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಕ್ಷೇತ್ರದ ಮೇಲೆ ಹಿಡಿತ ಕಾಯ್ದುಕೊಂಡಿತ್ತು. ಆದರೆ 2004ರಲ್ಲಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್, ಇದುವರೆಗೂ ಪಟ್ಟ ಬಿಟ್ಟುಕೊಟ್ಟಿಲ್ಲ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ರೋಷನ್ ಬೇಗ್, ಪಕ್ಷದ ಮುಖಂಡರ ಮೇಲೆ ಅತೃಪ್ತಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ 2019 ರಲ್ಲಿ ನಡೆದ ಉಪ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಶಿವಾಜಿನಗರ ತನ್ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ.

ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರು ಹೆಚ್ಚಿರುವ ಕ್ಷೇತ್ರದಲ್ಲಿ ಮತ ಸೆಳೆಯಲು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಉಪಚುನಾವಣೆ ನಂತರ ಮೂರು ವರ್ಷ ಶಾಸಕರಾಗಿದ್ದ ರಿಜ್ವಾನ್‌ ಅರ್ಷದ್, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ‘ಮೂರು ವರ್ಷದ ಅಭಿವೃದ್ಧಿ ಮೋಡಿ. ಐದು ವರ್ಷ ಸಂಪೂರ್ಣ ಅಧಿಕಾರ ಚಲಾಯಿಸಲು ಅವಕಾಶ ನೀಡಿ’ ಎಂಬ ಮಂತ್ರದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.

ಗೆಲ್ಲುವ ಛಲದೊಂದಿಗೆ ಪ್ರಚಾರ ಆರಂಭಿಸಿರುವ ಬಿಜೆಪಿ ಅಭ್ಯರ್ಥಿ ಎನ್. ಚಂದ್ರ ಅವರು ಶಿವಾಜಿನಗರ ಕ್ಷೇತ್ರ ಹೆಸರಿಗಷ್ಟೇ ಕೇಂದ್ರ ಸ್ಥಾನದಲ್ಲಿದೆ. ಆದರೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಕಳಪೆ ಕಾಮಗಾರಿಯಿಂದ ಹದಗೆಟ್ಟಿದೆ. ಬುಡಸಮೇತ ಕಿತ್ತೆಸೆದು ಬದಲಾವಣೆ ತನ್ನಿ ಎಂದು ಮತ ಕೇಳುತ್ತಿದ್ದಾರೆ. ಕ್ಷೇತ್ರದಲ್ಲಿ ವಿಶ್ವ ದರ್ಜೆ ಸೌಲಭ್ಯ ಕಲ್ಪಿಸುತ್ತೇವೆ ಎನ್ನುತ್ತಿರುವ ಆಮ್ ಆದ್ಮ ಪಾರ್ಟಿ ಅಭ್ಯರ್ಥಿ ಪ್ರಕಾಶ್ ನಡುಂಗಡಿ ಸಹ ಚುನಾವಣೆ ಕಣದಲ್ಲಿದ್ದಾರೆ.

ಶಿವಾಜಿನಗರ ಕ್ಷೇತ್ರವು ರಾಮಸ್ವಾಮಿ ಪಾಳ್ಯ, ಜಯಮಹಲ್, ವಸಂತನಗರ, ಸಂಪಂಗಿ- ರಾಮನಗರ, ಭಾರತಿನಗರ ಹಾಗೂ ಹಲಸೂರು ವಾರ್ಡ್ ಒಳಗೊಂಡಿದೆ. 196 ಮತಗಟ್ಟೆ ಗಳಿವೆ. ಕೆಲ ವಾರ್ಡ್‌ಗಳಲ್ಲಿ ಬಿಜೆಪಿ ಒಲವಿದ್ದು, ಹೆಚ್ಚು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮತದಾರರನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಒತ್ತು ನೀಡುತ್ತಿದ್ದಾರೆ. ಮಸೀದಿ, ದರ್ಗಾ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಅಭ್ಯರ್ಥಿಗಳು ಭೇಟಿ ನೀಡುತ್ತಿದ್ದಾರೆ. ಅಭ್ಯರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸುತ್ತಿರುವ ಎಲ್ಲ ಧರ್ಮ-ಜಾತಿ ಮುಖಂಡರು, ಮತದಾನದ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 am, Sat, 13 May 23

ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ