Sidlaghatta Election Results: ಶಿಡ್ಲಘಟ್ಟ ಅಸೆಂಬ್ಲಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಬಿ.ಎನ್. ರವಿಕುಮಾರ್ ಗೆ ಭರ್ಜರಿ ಜಯ
Sidlaghatta Assembly Election Result 2023 Live Counting Updates: ಶಿಡ್ಲಘಟ್ಟ ಅಸೆಂಬ್ಲಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಬಿ.ಎನ್. ರವಿಕುಮಾರ್ ಗೆಲುವು ಸಾಧಿಸಿದ್ದು 68932 ಮತ ಪಡೆದಿದ್ದಾರೆ. ಗೆಲುವಿನ ಅಂತರ 16772 ಮತಗಳು.
Sidlaghatta Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಮತದಾನದಲ್ಲಿ ಕ್ಷೇತ್ರದಲ್ಲಿ ಶೇ. 86.34ರಷ್ಟು ಮತದಾನವಾಗಿತ್ತು. ಶಿಡ್ಲಘಟ್ಟ ಅಸೆಂಬ್ಲಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಬಿ.ಎನ್. ರವಿಕುಮಾರ್ ಗೆಲುವು ಸಾಧಿಸಿದ್ದು 68932 ಮತ ಪಡೆದಿದ್ದಾರೆ. ಗೆಲುವಿನ ಅಂತರ 16772 ಮತಗಳು. ಸೋತ ಹುರಿಯಾಳುಗಳು ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ -52160, ಕಾಂಗ್ರೆಸ್ ಪಕ್ಷದ ಬಿ.ವಿ. ರಾಜೀವ್ ಗೌಡ- 36157 , ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ 15446 ಮತ ಪಡೆದಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ರಾಜಧಾನಿ ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ದೇಶದಲ್ಲಿಯೇ ರೇಷ್ಮೆಗೆ ಹೆಸರುವಾಸಿಯಾಗಿರುತ್ತದೆ ಹಾಗೂ ಹೆಚ್ಚಿನ ಜನರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕ್ಷೇತ್ರದಲ್ಲಿ ಶಾಸಕ ವಿ. ಮುನಿಯಪ್ಪನವರು 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅದೇ ರೀತಿಯಾಗಿ ಜೆಡಿಎಸ್ ಸಹಾ ಪ್ರಬಲವಾಗಿದ್ದು, ದಿವಂಗತ ಎಸ್.ಮುನಿಶಾಮಪ್ಪ 2 ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, 3 ಬಾರಿ ಪರಾಭವಗೊಂಡಿದ್ದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಗೆ ಈಗ ಬಿಜೆಪಿ ಸ್ಪರ್ಧಿ ಸೀಕಲ್ ರಾಮಚಂದ್ರಗೌಡರು ಪ್ರಬಲ ಎದುರಾಳಿಯಾಗಿದ್ದು, ಇವರ ಜೊತೆಗೆ ಪಕ್ಷೇತರ ಅಭ್ಯರ್ಥಿಯಾದ ಪುಟ್ಟು ಆಂಜಿನಪ್ಪನವರು ಸಹಾ ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿ.ಮುನಿಯಪ್ಪ 76240 ಮತಗಳನ್ನು ಪಡೆದು ಜಯ ಗಳಿಸಿದರೆ, ಜೆಡಿಎಸ್‌ನ ರವಿಕುಮಾರ್ 66531, ಬಿಜೆಪಿಯ ಸುರೇಶ್ 3596 ಹಾಗೂ ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪನವರ 10520 ಮತಗಳನ್ನು ಪಡೆದಿದ್ದರು. ಈಗ ಕಾಂಗ್ರೆಸ್‌ನಿಂದ ರಾಜೀವ್‌ಗೌಡ, ಜೆಡಿಎಸ್‌ನಿಂದ ಬಿ ಎನ್ ರವಿಕುಮಾರ್ ಮತ್ತು ಬಿಜೆಪಿ ಉದ್ಯಮಿ ಸೀಕಲ್ ರಾಮಚಂದ್ರಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪುಟ್ಟು ಆಂಜಿನಪ್ಪ ಸ್ಪರ್ಧಿಸಿದ್ದಾರೆ.
ದಿನಾಂಕ 20-04-2023 ರಂತೆ ಪುರುಷ ಮತದಾರರು 101620, ಮಹಿಳಾ ಮತದಾರರು 101910, ಇತರೆ 11 ಜನ ಸೇರಿ ಒಟ್ಟು 203541 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತಗಳ ವಿವರ ಹೀಗಿದೆ. ಎಸ್‌ಸಿ 42 ಸಾವಿರ, ಎಸ್‌ಟಿ 20 ಸಾವಿರ, ಒಕ್ಕಲಿಗ 48 ಸಾವಿರ, ಮುಸ್ಲಿಂ 28 ಸಾವಿರ, ಬಲಜಿಗ 12 ಸಾವಿರ, ಕುರುಬ 16 ಸಾವಿರ, ಗೊಲ್ಲ 22 ಸಾವಿರ, ಇತರೆ 15 ಸಾವಿರಕ್ಕೂ ಹೆಚ್ಚು ಎನ್ನುವ ಮಾಹಿತಿ ಇದೆ.
Published On - 3:00 am, Sat, 13 May 23