Ullal Election Results 2023: ಉಳ್ಳಾಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಯುಟಿ ಖಾದರ್​​ಗೆ ಬಿಸಿತುಪ್ಪವಾದ ಜೆಡಿಎಸ್​​, ಎಸ್​ಡಿಪಿಐ ಅಭ್ಯರ್ಥಿಗಳು

Ullal Assembly Election Results 2023 Live Counting Updates: ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಯುಟಿ ಖಾದರ್​​​ ಹಾಗೂ ಬಿಜೆಪಿ, ಜೆಡಿಎಸ್​​, ಎಸ್​​ಡಿಪಿಐ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Ullal Election Results 2023: ಉಳ್ಳಾಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಯುಟಿ ಖಾದರ್​​ಗೆ ಬಿಸಿತುಪ್ಪವಾದ ಜೆಡಿಎಸ್​​, ಎಸ್​ಡಿಪಿಐ ಅಭ್ಯರ್ಥಿಗಳು
Ullal Assembly Election Results 2023
Follow us
ಅಕ್ಷಯ್​ ಪಲ್ಲಮಜಲು​​
| Updated By: Digi Tech Desk

Updated on: May 13, 2023 | 3:13 AM

Ullal Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ (Ullal Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿ ಜತೆಗೆ ಜೆಡಿಎಸ್​​ ಕೂಡ ಪ್ರಬಲ ಪೈಪೋಟಿ ನೀಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಯು.ಟಿ ಖಾದರ್​​ 4 ಬಾರಿ ಶಾಸಕರಾಗಿ ಆಯ್ಕೆಯಾದವರು, ಆದರೆ  ಉಳ್ಳಾಲದಲ್ಲಿ ಕಾಂಗ್ರೆಸ್​​ ಭದ್ರಕೋಟೆ ಎಂದು ಹೇಳಬಹುದು, 4 ಚುನಾವಣೆಯಲ್ಲಿ ಯು.ಟಿ ಖಾದರ್​​ ಅವರಿಗೆ ಬಿಜೆಪಿ ಅಥವಾ ಇನ್ನೂ ಯಾವ ಪಕ್ಷವು ಪ್ರಬಲವಾದ ಪೈಪೋಟಿ ನೀಡಿರಲಿಲ್ಲ. ಯು.ಟಿ ಖಾದರ್​ ಅವರು ಉಳ್ಳಾಲದಲ್ಲಿ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವ, ವಿರೋಧ ಪಕ್ಷದ ಉಪನಾಯಕ ಕೂಡ ಹೌದು, ಧರ್ಮ ಭೇದವಿಲ್ಲದೆ ಕೆಲಸ ಮಾಡಿದ್ದಾರೆ ಎಂಬ ಮಾತು ಕೂಡ ಇದೆ. ಆದರೆ ಹಿಜಾಬ್​​​ ವಿಚಾರವಾಗಿ ಮೌನವಾಗಿರುವುದು ಸ್ವಲ್ಪ ಮಟ್ಟಿಗೆ ಉಳ್ಳಾಲದ ಜನರಲ್ಲಿ ಗೊಂದಲ ಮೂಡಿಸಿದೆ, ಇದರ ಜತೆಗೆ ಯು.ಟಿ ಖಾದರ್​​ ಈ ಬಾರಿಯು ಕಾಂಗ್ರೆಸ್​​ನಿಂದ ಮತ್ತೆ ಸ್ಪರ್ಧಿಸಿದ್ದಾರೆ, ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದ್ದು. ಇದನ್ನೂ ಕೂಡ ಸೂಕ್ಷ್ಮ ಪ್ರದೇಶ ಎನ್ನಬಹುದು, ಯುಟಿ ಖಾದರ್​ ಅಥವಾ ಕಾಂಗ್ರೆಸ್​​ ಬಿಟ್ಟು ಯಾರು ಗೆದಿಲ್ಲ, ಆದರೆ ಈ ಬಾರಿ ಬಿಜೆಪಿಯಿಂದ ಪ್ರಬಲ ವ್ಯಕ್ತಿ ಮತ್ತು ಜೆಡಿಎಸ್​​ನಿಂದ ಅಭ್ಯರ್ಥಿ ಕೂಡ ಹೆಚ್ಚು ಪೈಪೋಟಿ ನೀಡಲಿದ್ದಾರೆ. ಜೆಡಿಎಸ್​​ ಅಭ್ಯರ್ಥಿ ಈ ಹಿಂದೆ ಕಾಂಗ್ರೆಸ್​​​ನಿಂದ ಟಿಕೇಟ್​​ ಆಕ್ಷಾಂಕಿಯಾಗಿದ್ದರು, ಇದೀಗ ಮತದಾರ ಯಾರ ಕೈಎತ್ತುತ್ತಾನೆ ನೋಡಬೇಕಿದೆ.

ಇನ್ನೂ ಜೆಡಿಎಸ್​​ ಅಭ್ಯರ್ಥಿ ಮೊಯಿನುದ್ದೀನ್​​ ಬಾವಾ ಈ ಬಾರಿ ಉಳ್ಳಾಲದ ಪ್ರಬಲ ಸ್ಪರ್ಧಿ ಎನ್ನಬಹುದು, ಉಳ್ಳಾಲದ ಜೆಡಿಎಸ್​​ನ ಮೊದಲ ಅಭ್ಯರ್ಥಿಯಿಂದ ಒತ್ತಾಯಪೂರಕವಾಗಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಕಾಂಗ್ರೆಸ್​​ ವಿರುದ್ಧ ಸೆಡೆದು ನಿಂತ ಮೊಯಿನುದ್ದೀನ್​​ ಬಾವಾ ಉಳ್ಳಾಲದ ಜೆಡಿಎಸ್​​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ, ಯು.ಟಿ ಖಾದರಗೆ ಒಂದು ರೀತಿಯಲ್ಲಿ ಸೋಲಿನ ರುಚಿ ತೋರಿಸುವುದರಲ್ಲಿದ್ದಾರೆ. ಆದರೆ ಕೊನೆಗೆ ಯಾರು ಗೆಲ್ಲಬಹುದು ಎಂದು ಇನ್ನೂ ಕೆಲವೇ ಕ್ಷಣದಲ್ಲಿ ತಿಳಿಯುತ್ತದೆ.

ಇನ್ನೂ ಬಿಜೆಪಿಯಲ್ಲಿ ಅಭ್ಯರ್ಥಿಯಾಗಿ ಸತೀಶ್ ಕುಂಪಲ ಸ್ಪರ್ಧಿಸುತ್ತಿದ್ದಾರೆ, ಕಾಂಗ್ರೆಸ್​​ನ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದ ಇತಿಹಾಸ ಇಲ್ಲ, ಆದರೆ ಈ ಬಾರಿ ಕಾಂಗ್ರೆಸ್​​ಗೆ ಪ್ರಬಲ ಪೈಪೋಟಿ ನೀಡಲು ಜೆಡಿಎಸ್​​ ಇದೆ, ಆದರೆ ಯು.ಟಿ ಖಾದರ್​​ಗೆ ಮುಂದೆ ಕುಂಪಲ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

ಇನ್ನೂ ಬಹಳ ಪೈಪೋಟಿ ನೀಡುತ್ತಿರುವುದು ಎಸ್​​ಡಿಪಿಐ ರಿಯಾಜ್​​ ಫರಂಗಿಪೇಟೆ. ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ್ಯ ಇರುವ ಕಾರಣ, ಇಲ್ಲಿ ಮತಗಳು ಹಂಚಿ ಹೋಗಬಹುದು, ಇಲ್ಲಿ ಎಸ್​​ಡಿಪಿಐ ಕೂಡ ತುಂಬಾ ಪ್ರಬಲವಾಗಿದೆ, ಬಿಜೆಪಿ, ಜೆಡಿಎಸ್​​ಗಿಂತಲೂ ಎಸ್​​ಡಿಪಿಐ ರಿಯಾಜ್​​ ಫರಂಗಿಪೇಟೆ ಹೆಚ್ಚು ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಹೇಳಲಾಗಿದೆ, ಆದರೆ ಈ ಬಾರಿ ಮತದಾರ ಯಾರ ಕೈಹಿಡಿಯುತ್ತಾನೆ ಎಂದು ಕಾದು ನೋಡಬೇಕಿದೆ,

ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​,ಬಿಜೆಪಿ, ಎಸ್​​ಡಿಪಿಐ, ಜೆಡಿಎಸ್​​ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ, ಎಸ್​​ಡಿಪಿಐ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ