12 ವರ್ಷಗಳ ಬಳಿಕ ಬಿಡುಗಡೆಯಾದರು ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಈ ಸಿನಿಮಾ
Mada Gaja Raaja: ಮರು ಬಿಡುಗಡೆ ಆದ ಸಿನಿಮಾಗಳು, ವರ್ಷಾನುಗಟ್ಟಲೆ ಡಬ್ಬದಲ್ಲಿದ್ದು ಬಳಿಕ ಬಿಡುಗಡೆ ಆಗುವ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಕಮಾಲ್ ಮಾಡಿದ್ದು ಬಹಳ ವಿರಳ ಆದರೆ ಇಲ್ಲೊಂದು ಸಿನಿಮಾ 12 ವರ್ಷಗಳ ಬಳಿಕ ಬಿಡುಗಡೆ ಆದರೂ ಸಹ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.
ಮರು ಬಿಡುಗಡೆ ಆದ ಸಿನಿಮಾಗಳು ಹೆಚ್ಚೆಂದರೆ ಎಷ್ಟು ಕಲೆಕ್ಷನ್ ಮಾಡಬಹುದು? ಕೆಲ ತಿಂಗಳ ಹಿಂದೆ ಒಂದು ಹಿಂದೊಂದರಂತೆ ತೆಲುಗಿನ ಸೂಪರ್ ಹಿಟ್ ಸಿನಿಮಾಗಳು ಬಿಡುಗಡೆ ಆದವು. ಯಾವ ಸಿನಿಮಾಗಳು ಸಹ 5 ಕೋಟಿ ಕಲೆಕ್ಷನ್ ದಾಟಲಿಲ್ಲ. ಆದರೆ ತಮಿಳಿನ ಒಂದು ಸಿನಿಮಾ ಬಿಡುಗಡೆ ಆಗಿದ್ದೇ 12 ವರ್ಷಗಳ ಬಳಿಕ, ಆದರೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಐದು ದಿನಕ್ಕೆ 30 ಕೋಟಿಗೂ ಹೆಚ್ಚು ಗಳಿಸಿದ್ದು, ಸಿನಿಮಾದ ಕಲೆಕ್ಷನ್ ಬಗ್ಗೆ ಚಿತ್ರತಂಡವೇ ಆಶ್ಚರ್ಯ ವ್ಯಕ್ತಪಡಿಸಿದೆ.
ತಮಿಳಿನ ನಟ ವಿಶಾಲ್ ನಟನೆಯ ‘ಮದ ಗಜ ರಾಜ’ ಸಿನಿಮಾ ನಿರ್ಮಾಣವಾಗಿದ್ದ 12 ವರ್ಷಗಳ ಹಿಂದೆ ಅಂದರೆ 2013 ರಲ್ಲಿ ಆದರೆ ಸಿನಿಮಾ ಬಿಡುಗಡೆಗೆ ಕೆಲವು ಅಡೆ-ತಡೆಗಳು ಆಗ ಎದುರಾಗಿದ್ದವು. ಹಣಕಾಸಿನ ಸಮಸ್ಯೆ ನಿರ್ಮಾಪಕರನ್ನು ಕಾಡಿತ್ತು. ಸಿನಿಮಾ ಬಿಡುಗಡೆಗೆ ಕಾನೂನು ತೊಡಕು ಸಹ ಉಂಟಾಗಿತ್ತು. ಇದೇ ಕಾರಣಕ್ಕೆ ಸಿನಿಮಾ ರೆಡಿಯಾಗಿದ್ದರೂ ಡಬ್ಬದಲ್ಲಿಯೇ ಉಳಿದಿತ್ತು. ಇದೀಗ 12 ವರ್ಷಗಳ ಬಳಿಕ ಕಳೆದ ವಾರ ಸಿನಿಮಾ ಬಿಡುಗಡೆ ಆಗಿದೆ.
‘ಮದ ಗಜ ರಾಜ’ ಸಿನಿಮಾ ಬಿಡುಗಡೆ ಆಗಿ ಐದೇ ದಿನದಲ್ಲಿ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶಾಲ್ ನಟನೆಯ ಇತ್ತೀಚೆಗಿನ ಸಿನಿಮಾಗಳು ಇಷ್ಟು ದೊಡ್ಡ ಗಳಿಕೆ ಮಾಡಿರಲಿಲ್ಲ. ಆದರೆ ಎಲ್ಲರೂ ಮರೆತೇ ಹೋಗಿದ್ದ 12 ವರ್ಷ ಹಳೆಯ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. 12 ವರ್ಷಗಳ ಹಳೆಯ ಸಿನಿಮಾ ಆಗಿದ್ದರೂ ಸಹ ಪ್ರೇಕ್ಷಕರಿಗೆ ಈ ಸಿನಿಮಾ ಮೋಡಿ ಮಾಡುತ್ತಿದೆ. ಮೊದಲ ದಿನ ಮಾಡಿದ್ದ ಕಲೆಕ್ಷನ್ ಅನ್ನು ಐದು ದಿನದ ಬಳಿಕವೂ ಉಳಿಸಿಕೊಂಡು ಮುಂದೆ ಸಾಗುತ್ತಿದೆ.
ಇದನ್ನೂ ಓದಿ:‘ತಾಂಗಾಲನ್’ ಬಿಡುಗಡೆ ದಿನಾಂಕ ಘೋಷಣೆ, ಇದು ತಮಿಳರು ಹೇಳುತ್ತಿರುವ ಕೆಜಿಎಫ್ ಕತೆ
‘ಮದ ಗಜ ರಾಜ’ ಸಿನಿಮಾ 2012 ರಲ್ಲಿ ಆಸ್ಟ್ರೇಲಿಯಾನಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ಯುನಿಟ್ ಇನ್ನಿತರೆ ವ್ಯವಸ್ಥೆಗಳ ಸೇವೆ ನೀಡಿದ್ದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ತಮಿಳಿಗ ಒಬ್ಬರು ದೂರು ನೀಡಿದ್ದರು. ಆದರೆ ಅದೇ ವೇಳೆಗೆ ಸಿನಿಮಾದ ನಿರ್ಮಾಪಕರು, ‘ಮದ ಗಜ ರಾಜ’ ಸಿನಿಮಾವನ್ನು ವಿಶಾಲ್ರ ನಿರ್ಮಾಣ ಸಂಸ್ಥೆಗೆ ಸಿನಿಮಾ ಅನ್ನು ಮಾರಿಬಿಟ್ಟಿದ್ದರು. ಆದರೆ ಆ ಬಾಕಿ ಹಣದ ವಿಷಯವನ್ನು ಅವರು ಮಾರಾಟ ಒಪ್ಪಂದದಲ್ಲಿ ನಮೂದಿಸಿರಲಿಲ್ಲ. ಇದರಿಂದಾಗಿ ವಿಶಾಲ್, ತಾವು ಹಣ ನೀಡುವುದಿಲ್ಲ ಎಂದರು. ಇದರಿಂದಾಗಿ ನ್ಯಾಯಾಲಯದಲ್ಲಿ ಸಿನಿಮಾ ಬಿಡುಗಡೆ ಮೇಲೆ ತಡೆ ಹೇರಲಾಗಿತ್ತು. ಕೊನೆಗೆ 2025, ಜನವರಿ 25 ರಂದು ಸಿನಿಮಾ ಬಿಡುಗಡೆ ಆಗಿದೆ.
‘ಮದ ಗಜ ರಾಜ’ ಸಿನಿಮಾದಲ್ಲಿ ವಿಶಾಲ್, ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಅಂಜಲಿ ಅವರು ನಾಯಕಿಯರಾಗಿ ನಟಿಸಿದ್ದಾರೆ. ಜನವರಿ 12 ರಂದೇ ಬಿಡುಗಡೆ ಆದ ‘ಗೇಮ್ ಚೇಂಜರ್’ ಸಿನಿಮಾನಲ್ಲಿ ಅಂಜಲಿ, ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ