Pawan Kalyan: ‘ಮಾತು ಕೇಳಯ್ಯ’ ಎನ್ನುತ್ತಿದ್ದಾರೆ ಪವನ್ ಕಲ್ಯಾಣ್
Pawan Kalyan Movie: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ಈ ಹಾಡನ್ನು ಎಲ್ಲ ಭಾಷೆಗಳಲ್ಲಿಯೂ ಪವನ್ ಕಲ್ಯಾಣ್ ಅವರೇ ಹಾಡಿದ್ದಾರೆ ಎನ್ನಲಾಗುತ್ತಿದೆ. ‘ಹರಿಹರ ವೀರ ಮಲ್ಲು’ ಸಿನಿಮಾ ಅದರ ಕುರಿತಾದ ಇತರೆ ಮಾಹಿತಿಗಳನ್ನು ಈ ಲೇಖನ ಒಳಗೊಂಡಿದೆ.
ರಾಜಕೀಯದಲ್ಲಿ ಬ್ಯುಸಿಯಾದ ಬಳಿಕ ಪವನ್ ಕಲ್ಯಾಣ್ ಸಿನಿಮಾಗಳಿಂದ ತುಸು ದೂರವಾಗಿದ್ದಾರೆ. ಆದರೆ ಇದೀಗ ಮತ್ತೆ ಸಿನಿಮಾ ಮೇಲೆ ಗಮನ ಹರಿಸಲು ಮುಂದಾಗಿದ್ದು, ಆಂಧ್ರ ಪ್ರದೇಶ ಚುನಾವಣೆಗೆ ಮುಂಚೆ ಶುರು ಮಾಡಿದ್ದ ಸಿನಿಮಾಗಳನ್ನು ಮುಗಿಸಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ಹಾಡಿನ ವಿಶೇಷವೆಂದರೆ ಎಲ್ಲ ಭಾಷೆಗಳಲ್ಲಿಯೂ ಪವನ್ ಕಲ್ಯಾಣ್ ಅವರೇ ಹಾಡು ಹಾಡಿದ್ದಾರೆ.
‘ಹರಿಹರ ವೀರ ಮಲ್ಲು’ ಸಿನಿಮಾದ ‘ಮಾಟ ವಿನಾಲಿ’ ಹೆಸರಿನ ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು ಖುದ್ದು ಪವನ್ ಕಲ್ಯಾಣ್ ಹಾಡಿದ್ದಾರೆ. ಜನಪದ ಶೈಲಿಯ ಹಾಡು ಇದಾಗಿದ್ದು, ಅನುಭವಗಳನ್ನು ಹಾಡಾಗಿ ಮಾಡಿ ಇತರರಿಗೆ ಎಚ್ಚರಿಕೆ ಹೇಳುತ್ತಿರುವ ರೀತಿಯ ಹಾಡು ಇದಾಗಿದೆ. ರಾಜ, ಸೇನಾಧಿಪತಿಗಳಿಗೆ ಪವನ್ ಕಲ್ಯಾಣ್ ತನ್ನ ಮಾತು ಕೇಳು ಎಂದು ಹಾಡಿನ ಮೂಲಕ ಬುದ್ಧಿವಾದ ಹೇಳುತ್ತಿರುವ ಹಾಡು ಇದಾಗಿದೆ.
ಹಾಡು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದೆ. ಎಲ್ಲ ಭಾಷೆಯಲ್ಲಿಯೂ ಪವನ್ ಕಲ್ಯಾಣ್ ಹಾಡಿದ್ದಾರೆ ಎನ್ನಲಾಗುತ್ತಿದೆ. ಹಾಡಿನ ಯೂಟ್ಯೂಬ್ ಲಿಂಕ್ನಲ್ಲಿ ಇದೇ ಮಾಹಿತಿ ಇದೆ. ಆದರೆ ತೆಲುಗು ಹೊರತಾಗಿ ಬೇರೆ ಭಾಷೆಗಳಲ್ಲಿ ಪವನ್ ಕಲ್ಯಾಣ್ ಅವರ ಧ್ವನಿ ಗುರುತಿಸುವುದೇ ಕಷ್ಟ ಎಂಬಂತಾಗಿದೆ. ಅತಿಯಾಗಿ ತಂತ್ರಜ್ಞಾನ ಬಳಸಿರುವುದು ಎದ್ದು ಕಾಣುತ್ತಿದೆ.
ಇದನ್ನೂ ಓದಿ:ಪವನ್ ಕಲ್ಯಾಣ್ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದೇ ಅಲ್ಲು ಅರ್ಜುನ್ ತಂದೆ
‘ಹರಿಹರ ವೀರ ಮಲ್ಲು’ ಐತಿಹಾಸಿಕ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾ ಅನ್ನು ಕ್ರಿಶ್ ಮತ್ತು ಜ್ಯೋತಿ ಕೃಷ್ಣ ಅವರುಗಳು ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಎಎಂ ರತ್ನಂ ಮತ್ತು ದಯಾಕರ್ ರಾವ್ ಅವರುಗಳು ನಿರ್ಮಾಣ ಮಾಡಿದ್ದಾರೆ. ಇದು ಪವನ್ ಕಲ್ಯಾಣ್ ನಟಿಸುತ್ತಿರುವ ಮೊದಲ ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣದ ವೇಳೆ ಈಗಾಗಲೇ ಒಮ್ಮೆ ಸೆಟ್ ಬೆಂಕಿಗಾಹುತಿ ಆಗಿತ್ತು. ಹಾಗಾಗಿ ಸಿನಿಮಾ ತಡವಾಗಿದೆ. ಸಿನಿಮಾನಲ್ಲಿ ಪವನ್ ಜೊತೆಗೆ ಬಾಬಿ ಡಿಯೋಲ್, ನಾಯಕಿಯಾಗಿ ನಿಧಿ ಅಗರ್ವಾಲ್, ಇತರೆ ನಟಿಯರಾದ ಗ್ಲಾಮರ್ ಗೊಂಬೆಗಳಾದ ನೋರಾ ಫತೇಹಿ, ನರ್ಗಿಸ್ ಫಕ್ರಿ ಅವರುಗಳು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ