ಸಂಕ್ರಾಂತಿಗೆ ಬರುತ್ತಿದೆ 12 ವರ್ಷಗಳ ಹಿಂದಿನ ಸಿನಿಮಾ; ಇದೇ ಮೊದಲ ಬಾರಿಗೆ ರಿಲೀಸ್

Old Movie: 12 ವರ್ಷಗಳ ಹಿಂದೆ ಬಿಡುಗಡೆ ಆಗಬೇಕಿದ್ದ ಸಿನಿಮಾ ಅನಿವಾರ್ಯ ಕಾರಣಗಳಿಂದ ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಅದೇ ಸಿನಿಮಾ ಬರೋಬ್ಬರಿ 12 ವರ್ಷಗಳ ಬಳಿಕ ಮೊದಲ ಬಾರಿಗೆ ಬಿಡುಗಡೆ ಆಗಲಿದೆ. ಯಾವುದು ಆ ಸಿನಿಮಾ? ಆ ಸಿನಿಮಾದ ನಾಯಕ ಯಾರು?

ಸಂಕ್ರಾಂತಿಗೆ ಬರುತ್ತಿದೆ 12 ವರ್ಷಗಳ ಹಿಂದಿನ ಸಿನಿಮಾ; ಇದೇ ಮೊದಲ ಬಾರಿಗೆ ರಿಲೀಸ್
Vishal
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 07, 2025 | 6:40 PM

ಸಿನಿಮಾ ಬಿಡುಗಡೆ ಎರಡು ಮೂರು ವರ್ಷ ತಡವಾದರೆ ಹೇಗೋ ಸಹಿಸಿಕೊಳ್ಳಬಹುದು. ಅಭಿಮಾನಿಗಳು ಕೂಡ ಇದನ್ನು ಒಪ್ಪಬಹುದು. ಏಕೆಂದರೆ ಹೀರೋನ ಮುಖದಲ್ಲಿ ಅಷ್ಟೇನು ಬದಲಾವಣೆ ಆಗುವುದಿಲ್ಲ. ಆದರೆ, 12-13 ವರ್ಷಗಳ ಹಿಂದಿನ ಸಿನಿಮಾನ ಈಗ ರಿಲೀಸ್ ಮಾಡಿದರೆ? ಹೀಗೊಂದು ಅಪರೂಪದ ಘಟನೆಗೆ ಕಾಲಿವುಡ್ ಸಾಕ್ಷಿ ಆಗುತ್ತಿದೆ ಎನ್ನಬಹುದು. ಹೌದು, ವಿಶಾಲ್ ನಟನೆಯ ‘ಮದ ಗಜ ರಾಜ’ ಚಿತ್ರವು 2013ರಲ್ಲೇ ರಿಲೀಸ್ ಆಗಬೇಕಿತ್ತು. ಕೊನೆಗೂ ಚಿತ್ರಕ್ಕೆ ಬಿಡುಗಡೆ ಭಾಗ್ಯ ದೊರೆತಿದೆ.

ವಿಶಾಲ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2004ರಲ್ಲಿ. ಅವರು ಹೀರೋ ಆಗಿ ಗಮನ ಸೆಳೆದರು. ಆ ಬಳಿಕ ಸಾಲು ಸಾಲು ಚಿತ್ರಗಳನ್ನು ಮಾಡಿದರು. ಚಿತ್ರರಂಗಕ್ಕೆ ಬಂದ 9 ವರ್ಷಗಳ ಬಳಿಕ ಅವರು ಒಪ್ಪಿಕೊಂಡ ಚಿತ್ರವೇ ‘ಮದ ಗಜ ರಾಜ’. ಈ ಸಿನಿಮಾ 2012ರಲ್ಲೇ ಕೆಲಸ ಪೂರ್ಣಗೊಳಿಸಿಕೊಂಡಿತ್ತಂತೆ. 2013ರಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ, ಆರ್ಥಿಕ ಸಮಸ್ಯೆಗಳಿಂದ ನಿರ್ಮಾಪಕರು ಚಿತ್ರವನ್ನು ಮುಂದೂಡುತ್ತಾ ಬಂದರು.

‘ಮದ ಗಜ ರಾಜ’ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಇದಕ್ಕೆ ಕಾರಣ ಆಗಿದ್ದು ಸಂಕ್ರಾಂತಿ. ಸಂಕ್ರಾತಿ ಹಬ್ಬದ ವಿಶೇಷ ಸಂದರ್ಭದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ವಿಶಾಲ್ ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ವ್ಯತ್ಯಾಸ ಹೊಂದಿದ್ದಾರೆ. ಅವರ ಹಳೆಯ ಸಿನಿಮಾ ರೀ-ರಿಲೀಸ್ ಆಗುತ್ತಿರುವ ಭಾವನೆ ಫ್ಯಾನ್ಸ್ಗೆ ಕಾಡುತ್ತಿದೆ. ಆದಾಗ್ಯೂ ಕೆಲವರು ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಹೇಗಿದ್ದ ವಿಶಾಲ್ ಹೇಗಾದ್ರು; ನಡುಗುತ್ತ, ಮಾತನಾಡಲೂ ತಡಬಡಾಯಿಸಿದ ನಟ, ಆಗಿದ್ದೇನು?

ಇತ್ತೀಚೆಗೆ ಟ್ವೀಟ್ ಮಾಡಿದ್ದ ವಿಶಾಲ್, ‘12 ವರ್ಷಗಳ ಬಳಿಕ ನನ್ನ ಕರಿಯರ್ನ ಒಂದು ಒಳ್ಳೆಯ ಫ್ಯಾಮಿಲಿ ಎಂಟರ್ಟೇನರ್ ಸಿನಿಮಾ ಮದ ಗಜ ರಾಜ ಚಿತ್ರ ರಿಲೀಸ್ ಆಗುತ್ತಿದೆ. ಸುಂದರ್ ಸಿ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಪೊಂಗಲ್ಗೆ ಚಿತ್ರ ರಿಲೀಸ್ ಆಗಲಿದೆ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಇದಕ್ಕೆ ವಿಶಾಲ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಜ್ವರದ ಕಾರಣಕ್ಕೆ ಅವರ ಕೈ ನಡುಗಿದೆ. ಆ ಬಳಿಕ ಅವರು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಬರಲಿದೆ ಎಂಬ ಕುತೂಹಲ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ