ಹೇಗಿದ್ದ ವಿಶಾಲ್ ಹೇಗಾದ್ರು; ನಡುಗುತ್ತ, ಮಾತನಾಡಲೂ ತಡಬಡಾಯಿಸಿದ ನಟ, ಆಗಿದ್ದೇನು?
ತಮಿಳು ನಟ ವಿಶಾಲ್ ಅವರು ‘ಮದ ಗಜ ರಾಜ’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕೈ ನಡುಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ವಿಶಾಲ್ ಅವರಿಗೆ ಜ್ವರ ಇದ್ದ ಕಾರಣ ನಡುಕ ಉಂಟಾಗಿತ್ತೆಂದು ಸ್ಪಷ್ಟನೆ ಸಿಕ್ಕಿದೆ. ಅವರ ಡೆಡಿಕೇಷನ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಜನವರಿ 12 ರಂದು ಬಿಡುಗಡೆಯಾಗಲಿದೆ.
ತಮಿಳು ನಟ ವಿಶಾಲ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಮಾಸ್ ಆಗಿ ಗಮನ ಸೆಳೆಯುತ್ತಾರೆ. ಯಾವುದೇ ವಿಚಾರ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಾರೆ. ಯಾರೇ ಪ್ರಶ್ನೆ ಮಾಡಿದರೂ ಅವರಿಗೆ ಉತ್ತರ ನೀಡುತ್ತಾರೆ. ಇಂಥ ವಿಶಾಲ್ ಅವರು ಈಗ ಸಖತ್ ಡಲ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಮದ ಗಜ ರಾಜ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ಗೆ ಆಗಮಿಸಿದ್ದರು. ಆಗ ಅವರ ಕೈ ನಡುಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಚೆನ್ನೈನಲ್ಲಿ ಇತ್ತೀಚೆಗೆ ‘ಮದ ಗಜ ರಾಜ’ ತಂಡದವರು ಅದ್ದೂರಿಯಾಗಿ ಪ್ರೀ-ರಿಲೀಸ್ ಈವೆಂಟ್ ಮಾಡಿದರು. ಈ ಚಿತ್ರಕ್ಕೆ ವಿಶಾಲ್ ಹೀರೋ. ಹೀಗಾಗಿ, ಅವರು ಕೂಡ ವೇದಿಕೆ ಏರಿದ್ದರು. ಅವರು ಮಾತನಾಡುವಾಗ ಕೈ ನಡುಗುತ್ತಿತ್ತು. ಮಾತುಗಳನ್ನಾಡಲು ಕಷ್ಟಪಟ್ಟರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶಾಲ್ಗೆ ಏನಾಯಿತು ಎಂದು ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.
ವಿಶಾಲ್ ಅವರು ಮಾತನಾಡುವಾಗ ಮೈಕ್ನ ಗಟ್ಟಿ ಹಿಡಿದು ಮಾತನಾಡುತ್ತಿದ್ದರು. ಅವರ ಮಾತುಗಳು ನೇರವಾಗಿ ಇರುತ್ತಿದ್ದವು. ಆದರೆ, ಮೊದಲಿದ್ದ ವಿಶಾಲ್ ಈಗ ಕಾಣೆ ಆಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಪಷ್ಟನೆ ಏನೆಂದರೆ ಅವರಿಗೆ ಆ ಸಂದರ್ಭದಲ್ಲಿ ತೀವ್ರ ಜ್ವರ ಇತ್ತು. ಆದಗ್ಯೂ ಅವರು ವೇದಿಕೆ ಏರಿ ಮಾತನಾಡಿದ್ದರು. ಜ್ವರ ಇದ್ದ ಕಾರಣದಿಂದಲೇ ಅವರಿಗೆ ನಡುಕ ಶುರುವಾಗಿತ್ತು ಎನ್ನಲಾಗಿದೆ.
Actor Vishal @VishalKOfficial attended #MadhaGajaRaja press meet despite having a high fever 🥺 Get well soon Vishal, and hope #MadhaGajaRajaJan12 turns out to be a success despite the 12-year delay!pic.twitter.com/m9S9Hh6C58
— SG Cafe Singapore 𝕏 (@_sgcafe) January 5, 2025
ಸದ್ಯ ವಿಶಾಲ್ ಬಗ್ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜ್ವರದ ಮಧ್ಯೆಯೂ ಅವರು ಕಮಿಟ್ಮೆಂಟ್ ಮರೆಯಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ‘ವಿಶಾಲ್ ಡೆಡಿಕೇಷನ್. ಅವರು ಜ್ವರದ ಮಧ್ಯೆಯೂ ಸಿನಿಮಾ ಪ್ರಮೋಟ್ ಮಾಡಿದ್ದಾರೆ’ ಎಂದಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ: ಒಳ್ಳೇದು ಮಾಡ್ತೀನಿ ಎಂದು ಹಣ ನುಂಗಿದ್ರಾ ವಿಶಾಲ್? ಗಂಭೀರ ಆರೋಪಕ್ಕೆ ತಿರುಗೇಟು
‘ಮದ ಗಜ ರಾಜ’ ಸಿನಿಮಾದಲ್ಲಿ ಅಂಜಲಿ, ಸೋನು ಸೂದ್, ವರಲಕ್ಷ್ಮೀ ಶರತ್ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾನ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ 2013ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, 12 ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದೆ. ಜನವರಿ 12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.