ಯಶ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ಪರದೆಯಲ್ಲಿ ಮತ್ತೆ ಕೆಜಿಎಫ್ 1, ಕೆಜಿಎಫ್ 2

ನಟ ಯಶ್​ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಯಾವುದೇ ಅದ್ದೂರಿ, ಆಡಂಬರ ಬೇಡ ಎಂದು ಯಶ್ ಈಗಾಗಲೇ ಹೇಳಿದ್ದಾರೆ. ಯಶ್ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅದಕ್ಕೆ ಕಾರಣ ಆದ ‘ಕೆಜಿಎಫ್​: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ.

ಯಶ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ಪರದೆಯಲ್ಲಿ ಮತ್ತೆ ಕೆಜಿಎಫ್ 1, ಕೆಜಿಎಫ್ 2
Yash
Follow us
ಮದನ್​ ಕುಮಾರ್​
|

Updated on: Jan 07, 2025 | 6:23 PM

ಜನವರಿ 8 ಎಂದರೆ ಯಶ್ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ ತೆಗೆದುಕೊಂಡ ಹೋದ ಯಶ್​ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ ಸಡಗರ. ವಿವಿಧ ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಫ್ಯಾನ್ಸ್​ ಆಚರಿಸುತ್ತಾರೆ. ಇನ್ನು, ಸಿನಿಮಾ ಮೂಲಕವೂ ಯಶ್ ಜನ್ಮದಿನವನ್ನು ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಜನವರಿ 8ರಂದು ದೊಡ್ಡ ಪರದೆ ಮೇಲೆ ‘ಕೆಜಿಎಫ್​: ಚಾಪ್ಟರ್​ 1’ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾವನ್ನು ನೋಡುವ ಅವಕಾಶ ಸಿಗುತ್ತಿದೆ.

ಯಶ್ ಅವರು ‘ಕೆಜಿಎಫ್ 1’ ಸಿನಿಮಾದಲ್ಲಿ ನಟಿಸುವ ತನಕ ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದರು. ‘ಕೆಜಿಎಫ್​: ಚಾಪ್ಟರ್​ 1’ ಬಿಡುಗಡೆ ಆದಾಗ ಬೇರೆ ಬೇರೆ ರಾಜ್ಯಗಳಲ್ಲಿ ಅವರ ಹೆಸರು ಚಿರಪರಿಚಿತವಾಯಿತು. ಪ್ಯಾನ್ ಇಂಡಿಯಾ ಸ್ಟಾರ್​ ಆಗಿ ಅವರು ಹೊರಹೊಮ್ಮಿದರು. ‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್ ಆದಾಗ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಯಿತು. ಆ ಸಿನಿಮಾಗಳ ಹವಾ ಈಗಲೂ ಇದೆ.

ಇದನ್ನೂ ಓದಿ: ಫ್ಲೆಕ್ಸ್, ಬ್ಯಾನರ್ ಆಡಂಬರ ಬೇಡ: ಯಶ್ ಹುಟ್ಟುಹಬ್ಬಕ್ಕೆ ಮುಖ್ಯವಾದ ಸಂದೇಶ

ಯಶ್ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ‘ಕೆಜಿಎಫ್ ಚಾಪ್ಟರ್​ 1’ ಮತ್ತು ‘ಕೆಜಿಫ್​ ಚಾಪ್ಟರ್​ 2’ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗಿದೆ. ಬುಕಿಂಗ್ ಕೂಡ ಆರಂಭ ಆಗಿದೆ. ಈ ಮೊದಲು ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡಿದ್ದವರು ಈಗ ಈ ಸಿನಿಮಾಗಳನ್ನು ನೋಡಬಹುದು. ಈಗಾಗಲೇ ನೋಡಿದ್ದರೂ ಕೂಡ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಮನರಂಜನೆ ಪಡೆಯಬೇಕು ಎಂಬ ಅಭಿಮಾನಿಗಳಿಗೂ ಇದು ಅಪರೂಪದ ಚಾನ್ಸ್.

‘ಕೆಜಿಎಫ್​ 2’ ತೆರೆಕಂಡು ಎರಡೂ ಮುಕ್ಕಾಲು ವರ್ಷ ಕಳೆದಿದೆ. ಹಾಗಾಗಿ ಬಿಗ್ ಸ್ಕ್ರೀನ್​ನಲ್ಲಿ ಯಶ್ ಅವರನ್ನು ಫ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರು ಫ್ಯಾನ್ಸ್ ಜೊತೆ ಈ ಬಾರಿಯ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಅಭಿಮಾನಿಗಳಿಗೆ ಅವರು ನಿರಾಸೆ ಮಾಡುತ್ತಿಲ್ಲ. ಜನವರಿ 8ರಂದು ಟಾಕ್ಸಿಕ್ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ. ಅದರ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದು, ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.