15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ

ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆದಿದೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಎಂ.ಎಸ್​. ಸತ್ಯು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಲನಚಿತ್ರ ಸ್ಪರ್ಧೆ, ಕನ್ನಡ ಚಲನಚಿತ್ರ ಸ್ಪರ್ಧೆ, ಏಷ್ಯನ್​ ಚಲನಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ..

15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ
15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ
Follow us
ಮದನ್​ ಕುಮಾರ್​
|

Updated on: Mar 07, 2024 | 10:18 PM

ಪ್ರಮುಖ ಚಿತ್ರೋತ್ಸವಗಳಲ್ಲಿ ಒಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ(Bengaluru International Film Festival) 15ನೇ ಆವೃತ್ತಿ ಪೂರ್ಣಗೊಂಡಿದೆ. ಇಂದು (ಮಾರ್ಚ್​ 7) ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಸಮಾರೋಪ ಸಮಾರಂಭ ನಡೆದಿದೆ. ಈ ಬಾರಿಯ ಸಿನಿಮೋತ್ಸವದಲ್ಲಿ (15th BIFFES) ನೂರಾರು ಸಿನಿಮಾಗಳು ಪ್ರದರ್ಶನಗೊಂಡಿವೆ. ವಿವಿಧ ವಿಭಾಗಗಳಲ್ಲಿ ಸಿನಿಮಾಗಳು ಸ್ಪರ್ಧಿಸಿವೆ. ಅವುಗಳ ಪೈಕಿ ಪ್ರಶಸ್ತಿ (15th BIFFES Awards) ಪಡೆದ ಸಿನಿಮಾಗಳ ಬಗ್ಗೆ ವಿವರ ಇಲ್ಲಿದೆ. ಹಿರಿಯ ನಿರ್ದೇಶಕ ಎಂಎಸ್​ ಸತ್ಯು ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಗಿದೆ. ಕನ್ನಡ ಚಲನಚಿತ್ರ ಸ್ಪರ್ಧೆ, ಭಾರತೀಯ ಚಲನಚಿತ್ರ ಸ್ಪರ್ಧೆ, ಏಷ್ಯನ್​ ಚಲನಚಿತ್ರ ಸ್ಪರ್ಧೆ ಮುಂತಾದ ವಿಭಾಗಗಳಲ್ಲಿ ಹಲವು ಸಿನಿಮಾಗಳು ಪ್ರಶಸ್ತಿ ಪಡೆದಿವೆ.

ಕನ್ನಡ ಚಲನಚಿತ್ರ ಸ್ಪರ್ಧೆ:

ಮೊದಲ ಅತ್ಯುತ್ತಮ ಸಿನಿಮಾ: ನಿರ್ವಾಣ (ನಿರ್ದೇಶನ: ಅಮರ್​ ಎಲ್​. ನಿರ್ಮಾಣ: ಕೆ ಮಂಜು ಅವಿನಾಶ್​ ಶೆಟ್ಟಿ) ಎರಡನೇ ಅತ್ಯುತ್ತಮ ಸಿನಿಮಾ: ಕಂದೀಲು. (ನಿರ್ದೇಶನ, ನಿರ್ಮಾಣ: ಕೆ. ಯಶೋದಾ ಪ್ರಕಾಶ್​) ಮೂರನೇ ಅತ್ಯುತ್ತಮ ಸಿನಿಮಾ: ಆಲ್​ಇಂಡಿಯಾ ರೇಡಿಯೋ (ನಿರ್ದೇಶನ: ರಾಮಸ್ವಾಮಿ. ನಿರ್ಮಾಣ: ದೇವಗಂಗಾ ಪ್ರೇಮ್ಸ್​) ತೀರ್ಪುಗಾರರ ವಿಶೇಷ ಪ್ರಶಸ್ತಿ: ಕ್ಷೇತ್ರಪತಿ (ನಿರ್ದೇಶನ: ಶ್ರೀಕಾಂತ್​ ಕಟಗಿ. ನಿರ್ಮಾಣ: ಅಶ್ರಗ ಕ್ರಿಯೇಷನ್ಸ್​) ನೆಟ್​ಪ್ಯಾಕ್​ ತೀರ್ಪುಗಾರರ ಪ್ರಶಸ್ತಿ: ಸ್ವಾತಿ ಮುತ್ತಿನ ಮಳೆ ಹನಿಯೇ (ನಿರ್ದೇಶನ: ರಾಜ್​ ಬಿ. ಶೆಟ್ಟಿ. ನಿರ್ಮಾಣ: ರಮ್ಯ)

ಇದನ್ನೂ ಓದಿ: ವಿಧಾನಸೌಧದಲ್ಲಿ ಸಾಧು ಕೋಕಿಲ ಮಾತು ಕೇಳಿ ಗಾಬರಿಯಾದ ಮಂಡಳಿ ಅಧ್ಯಕ್ಷರು; ಅಂಥದ್ದೇನಾಯ್ತು?

ಭಾರತೀಯ ಚಲನಚಿತ್ರ ಸ್ಪರ್ಧೆ:

ಮೊದಲ ಅತ್ಯುತ್ತಮ ಸಿನಿಮಾ: ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್​ ದಹಕೆ. ನಿರ್ಮಾಣ: ಪುಣೆ ಫಿಲ್ಮ್​ ಕಂಪನಿ) ಎರಡನೇ ಅತ್ಯುತ್ತಮ ಸಿನಿಮಾ: ಅಯೋಥಿ (ನಿರ್ದೇಶನ: ಮಂದಿರಾ ಮೂರ್ತಿ. ನಿರ್ಮಾಣ: ಆರ್​. ರವೀಂದ್ರನ್​) ಮೂರನೇ ಅತ್ಯುತ್ತಮ ಸಿನಿಮಾ: ಛಾವೆರ್​ (ನಿರ್ದೇಶನ: ತನು ಪಾಪಚ್ಚನ್​. ನಿರ್ಮಾಣ: ಅರುಣ್​ ನಾರಾಯಣ ಪ್ರೊಡಕ್ಷನ್ಸ್​) ಫಿಪ್ರೆಸ್ಕಿ ಪ್ರಶಸ್ತಿ: ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್​ ದಹಕೆ. ನಿರ್ಮಾಣ: ಪುಣೆ ಫಿಲ್ಮ್​ ಕಂಪನಿ)

ಏಷ್ಯನ್​ ಚಲನಚಿತ್ರ ಸ್ಪರ್ಧೆ:

ಮೊದಲ ಅತ್ಯುತ್ತಮ ಸಿನಿಮಾ: ಇನ್ಶಾಅಲ್ಲಾ ಎ ಬಾಯ್​ (ನಿರ್ದೇಶನ: ಅಮ್ದಜ್​ ಅಲ್​ ರಶೀದ್​. ನಿರ್ಮಾಣ: ಇಮೇಜಿನೇರಿಯಂ ಫಿಲ್ಮ್ಸ್​, ಜಾರ್ಜಸ್​ ಫಿಲ್ಮ್ಸ್​) ಎರಡನೇ ಅತ್ಯುತ್ತಮ ಸಿನಿಮಾ: ಸ್ಥಳ್​ (ನಿರ್ದೇಶನ: ಜಯಂತ್​ ದಿಗಂಬರ್​ ಸೋಮಾಲ್ಕರ್​. ನಿರ್ಮಾಣ: ಧುನ್​) ಮೂರನೇ ಅತ್ಯುತ್ತಮ ಸಿನಿಮಾ: ಸಂಡೇ (ನಿರ್ದೇಶನ: ಶೋಕಿರ್​ ಕೊಲಿಕೊಬ್​. ನಿರ್ಮಾಣ: ಫಿರ್ದವಾಸ್​ ಅಬ್ದುಕೊಲಿಕೊವ್​) ತೀರ್ಪುಗಾರರ ವಿಶೇಷ ಪ್ರಶಸ್ತಿ: ಮಿಥ್ಯ (ನಿರ್ದೇಶನ: ಸುಮಂತ್​ ಭಟ್​. ನಿರ್ಮಾಣ: ಪರಂವಾ ಪಿಕ್ಚರ್ಸ್​)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.