ಸ್ವಾತಂತ್ರ್ಯಕ್ಕೆ ಮುಂಚೆ ಬಾಲಮುರಳಿಕೃಷ್ಣ ಅವರ ಸಂಗೀತ ಕಛೇರಿಗೆ ಆಹ್ವಾನ ಪತ್ರಿಕೆ ಹೀಗಿತ್ತು

ಭಾರತ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕ ಎಂ ಬಾಲಮುರಳಿಕೃಷ್ಣ ಅವರ 79 ವರ್ಷ ಹಳೆಯ ಸಂಗೀತ ಕಛೇರಿ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1945 ರಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಛೇರಿಯದು.

ಸ್ವಾತಂತ್ರ್ಯಕ್ಕೆ ಮುಂಚೆ ಬಾಲಮುರಳಿಕೃಷ್ಣ ಅವರ ಸಂಗೀತ ಕಛೇರಿಗೆ ಆಹ್ವಾನ ಪತ್ರಿಕೆ ಹೀಗಿತ್ತು
Follow us
|

Updated on:Aug 03, 2024 | 8:05 PM

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಬಾಲಮುರಳಿಕೃಷ್ಣ ಅವರದ್ದು ಎಂದಿಗೂ ಅಳಿಸಲಾಗದ ಛಾಪು. 1930 ರಲ್ಲಿ ಜನಿಸಿದ ಬಾಲಮುರಳಿಕೃಷ್ಣ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಾಗಿಟ್ಟವರು. ಎಳವೆಯಿಂದಲೇ ಸಂಗೀತ ಪಾರಂಗತರಾಗಿದ್ದ ಬಾಲಮುರಳಿಕೃಷ್ಣ ಅವರು ಅತ್ಯಂತ ಕಡಿಮೆ ವಯಸ್ಸಿನಲ್ಲಿದ್ದಾಗಲೇ ಕಛೇರಿಗಳನ್ನು ನೀಡಲಾರಂಭಿಸಿದ್ದರು. ಎಳವೆಯಲ್ಲಿಯೇ ಅವರ ಸಂಗೀತ ಕಛೇರಿಗಳಿಗೆ ಜನ ಸಾಗರವೇ ಬರುತ್ತಿತ್ತು. ಸ್ವಾತಂತ್ರ್ಯಕ್ಕೂ ಮುನ್ನ ಅಂದರೆ 1945 ರಲ್ಲಿ ಬಾಲಮುರಳಿಕೃಷ್ಣ ಅವರ ಸಂಗೀತ ಕಚೇರಿಯ ಆಹ್ವಾನ ಪತ್ರಿಕೆಯೊಂದು ಇದೀಗ ವೈರಲ್ ಆಗಿದೆ.

1945 ರ ಏಪ್ರಿಲ್ 18ರಂದು ಈಗಿನ ಮಚಲೀಪಟ್ಟಣದ ಬಂದರು ರಾಮಾನಾಯ್ಡು ಪೇಟೆಯಲ್ಲಿ ಬಾಲಮುರಳಿಕೃಷ್ಣ ಅವರ ಸಂಗೀತ ಕಛೇರಿಯನ್ನು ಏರ್ಪಿಡಸಲಾಗಿತ್ತು. ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇದೀಗ ವೈರಲ್ ಆಗಿದೆ. ಬಾಲಮುರಳಿಕೃಷ್ಣ ಅವರಿಗೆ ಆಗಿನ್ನೂ ಕೇವಲ 15 ವರ್ಷ ವಯಸ್ಸು. ಆ ವಯಸ್ಸಿನಲ್ಲೇ ಅವರು ಬಹು ಜನಪ್ರಿಯ ಗಾಯಕರು ಎನಿಸಿಕೊಂಡಿದ್ದರು. ಅವರಿಗೆ ಗಾನಸುಧಾಕರ ಎಂಬ ಬಿರುದಿತ್ತು. ಆ ಬಿರುದನ್ನೂ ಸಹ ಆಹ್ವಾನ ಪತ್ರಿಕೆಯಲ್ಲಿ ಬಾಲಮುರಳಿಕೃಷ್ಣ ಅವರ ಹೆಸರಿನೊಟ್ಟಿಗೆ ಸೇರಿಸಲಾಗಿದೆ.

ಸುಬ್ಬಾರಾವು ಎಂಬುವರು ಪಿಟೀಲು, ಹನುಮಂತರಾವು ಎಂಬುವರು ಮೃದಂಗದಲ್ಲಿ ಇರಲಿದ್ದಾರೆಂದು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಈ ಸಂಗೀತ ಕಚೇರಿಗೆ 2 ಆಣೆ ಟಿಕೆಟ್ ದರವನ್ನು ಸಹ ನಿಗದಿಪಡಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಬಾಲಮುರಳಿಕೃಷ್ಣ ಅವರ ಸಣ್ಣ ಫೋಟೊ ಸಹ ಮುದ್ರಿಸಲಾಗಿದೆ. ಈ ಆಹ್ವಾನ ಪತ್ರಿಕೆಯನ್ನು ಬೆಜವಾಡದ ರಸತರಂಗಿಣಿ ಎಂಬ ಪ್ರೆಸ್ ಕ್ಲಬ್​ನಲ್ಲಿ ಮುದ್ರಿಸಲಾಗಿತ್ತು. ಹಳೆಯ ಆಹ್ವಾನ ಪತ್ರಿಕೆ ಈಗ ವೈರಲ್ ಆಗುತ್ತಿದೆ.

ಅಂದಹಾಗೆ ಬಾಲಮುರಳಿಕೃಷ್ಣ ಅವರು ತಮ್ಮ ಎಂಟನೇ ವಯಸ್ಸಿಗೆ ಸಂಗೀತ ಕಚೇರಿ ನೀಡಲು ಆರಂಭಿಸಿದ್ದರು. ವಿಜಯವಾಡದ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಸಂಗೀತ ಕಚೇರಿಯನ್ನು ಅವರು ನೀಡಿದ್ದರು. ತಮ್ಮ 15ನೇ ವಯಸ್ಸಿನ ವೇಳೆಗೆ ಕರ್ನಾಟಕ ಸಂಗೀತದ ಎಲ್ಲ 72 ಮೇಳಕರ್ತ ರಾಗಗಳು ಅವರಿಗೆ ಕರತಲಾಮಲಕವಾಗಿಬಿಟ್ಟಿದ್ದವು. ಮಾತ್ರವಲ್ಲದೆ ಅವರು ಕೃತಿಗಳನ್ನು ಸಹ ರಚಿಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ: ಭಾವ ಲೋಕಕ್ಕೆ ಕರೆದೊಯ್ಯುವ ‘ಹೇಳು ಗೆಳತಿ’ ಹಾಡು

ಕನ್ನಡದಲ್ಲಿ ರಾಜ್​ಕುಮಾರ್ ನಟಿಸಿದ್ದ ‘ಸ್ವರ್ಣಗೌರಿ’ ಸಿನಿಮಾಕ್ಕೆ ಮೊದಲಿಗೆ ಹಾಡಿದರು. ಅದಾದ ಬಳಿಕ ಜಿವಿ ಅಯ್ಯರ್ ನಿರ್ದೇಶನದ ‘ಹಂಸಗೀತೆ’ ಸಿನಿಮಾಕ್ಕೆ ಹಾಡಿದ್ದು ಮಾತ್ರವಲ್ಲದೆ ಸಂಗೀತ ಸಂಯೋಜನೆಯನ್ನೂ ಮಾಡಿದರು. ಮತ್ತೆ ಜಿವಿ ಅಯ್ಯರ್ ನಿರ್ದೇಶನದ ‘ಮಧ್ವಾಚಾರ್ಯ’ ಸಿನಿಮಾಕ್ಕೆ ಸಂಗೀತ ಸಂಯೋಜಿಸಿ, ಹಾಡು ಸಹ ಹಾಡಿದರು. 1990 ರಲ್ಲಿ ವಿಷ್ಣುವರ್ಧನ್ ನಟನೆಯ ‘ಮುತ್ತಿನ ಹಾರ’ ಸಿನಿಮಾದಲ್ಲಿ ‘ದೇವರು ಹೊಸೆದ ಪ್ರೇಮದ ದಾರ’ ಹಾಡು ಹಾಡಿದರು. ಕನ್ನಡದಲ್ಲಿ ಬಾಲಮುರಳಿಕೃಷ್ಣ ಅವರು ಹಾಡಿದ ಕೊನೆಯ ಹಾಡು ಅದೆ. ಭಾರತ ಸಂಗೀತ ಕ್ಷೇತ್ರದಲ್ಲಿ ಮಹಾನ್ ಸಾಧಕರ ಸಾಲಿನಲ್ಲಿರುವ ಬಾಲಮುರಳಿಕೃಷ್ಣ ಅವರು 2016 ರಲ್ಲಿ ನಿಧನ ಹೊಂದಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sat, 3 August 24

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?